ಸೋಮವಾರ, ಸೆಪ್ಟೆಂಬರ್ 27, 2021
24 °C
ಗ್ರಾಮೀಣ ಪ್ರದೇಶದಲ್ಲಿ ಮಳೆಗಾಗಿ ವಿಶೇಷ ಪೂಜೆ, ಭಜನೆ

ಬಾರದ ಮಳೆ: ಒಣಗುತ್ತಿವೆ ಮುಂಗಾರು ಬೆಳೆ

ಗಿರಿರಾಜ ಎಸ್.ವಾಲೆ Updated:

ಅಕ್ಷರ ಗಾತ್ರ : | |

Prajavani

ಖಟಕಚಿಂಚೋಳಿ: ಹೋಬಳಿಯಾದ್ಯಂತ ಕಳೆದ ಇಪ್ಪತ್ತು ದಿನಗಳಿಂದ ಮಳೆ ಬಾರದಿರುವುದರಿಂದ ಸಮೃದ್ಧವಾಗಿ ಬೆಳೆದು ನಿಂತ ಬೆಳೆಗಳೆಲ್ಲವು ಒಣಗಿ ಹೋಗುತ್ತಿವೆ. ಸದ್ಯ ಮಳೆ ಯಾವಾಗ ಬರುತ್ತದೋ ಎಂಬ ನೀರಿಕ್ಷೆಯಲ್ಲಿ ರೈತರು ಆಗಸದತ್ತ ನೋಡುತ್ತಾ ಕುಳಿತಿದ್ದಾರೆ.

ಕೋವಿಡ್ ಹರಡುವಿಕೆಯಿಂದ ಬೇಸತ್ತಿದ್ದ ಜನತೆಗೆ ಮುಂಗಾರು ಮಳೆ ಸರಿಯಾದ ಸಮಯಕ್ಕೆ ಸುರಿದ್ದಿದ್ದರಿಂದ ರೈತರ ಮೊಗದಲ್ಲಿ ಸಂತಸ ಮೂಡಿತ್ತು. ಪ್ರಸಕ್ತ ಸಾಲಿನಲ್ಲಿ ಉತ್ತಮ ಮಳೆಯಾಗಿ ಸಮೃದ್ಧ ಬೆಳೆ ಬೆಳೆದು ರೈತರ ಕಷ್ಟಗಳೆಲ್ಲವು ದೂರಾಗುವವು ಎನ್ನುವ ಕನಸು ಕಾಣುತ್ತಿದ್ದರು. ಆದರೆ ಕಳೆದ ನಾಲ್ಕು ವಾರಗಳಿಂದ ಮಳೆ ಬೀಳದಿರುವುದರಿಂದ ರೈತರ
ಮೊಗದಲ್ಲಿ ನಿರಾಸೆ ಮೂಡಿದೆ.

ಸದ್ಯ ಹೆಸರು, ಸೊಯಾ, ಸೇರಿದಂತೆ ಎಲ್ಲ ಮುಂಗಾರು ಬೆಳೆಗಳು ಸಮೃದ್ಧವಾಗಿ ಬೆಳೆದಿವೆ. ಆದರೆ ಸದ್ಯ ಮಳೆಯ ಅವಶ್ಯಕವಿದೆ. ಒಂದು ವೇಳೆ ಮಳೆ ಬಾರದಿದ್ದರೆ ಬೆಳೆಗಳು ಒಣಗುತ್ತವೆ ಎಂಬ ಆತಂಕ ರೈತರಲ್ಲಿ ಮನೆಮಾಡಿದೆ. ಆದ್ದರಿಂದ ಸದ್ಯ ರೈತರು ಮಳೆ ಬರಲಿ ಎಂದು ದೇವರಿಗೆ ವಿಶೇಷ ಪೂಜೆ, ಭಜನೆ ಮಾಡುತ್ತಿರುವುದು ಕಂಡುಬರುತ್ತಿದೆ.

ನೀರಾವರಿ ಹೊಂದಿರುವ ರೈತರು ಸ್ಪ್ರಿಂಕ್ಲರ್ ಮೂಲಕ ನೀರು ಬೀಡುತ್ತಿದ್ದಾರೆ. ಇನ್ನು ಕೆಲವರು ದುಡ್ಡು ಕೊಟ್ಟು ಅಕ್ಕ ಪಕ್ಕದ ರೈತರಿಂದ ನೀರು ಪಡೆದುಕೊಂಡು ತಾತ್ಕಾಲಿಕ ನೆಮ್ಮದಿ ಪಡೆಯುತ್ತಿದ್ದಾರೆ. ಆದರೆ ನೀರಾವರಿ ಸೌಲಭ್ಯ ಇಲ್ಲದವರು ಆಕಾಶದತ್ತ ನೋಡುತ್ತಿದ್ದಾರೆ.

ಜೂನ್‌ನಿಂದ ಸೆಪ್ಟಂಬರ್‌ವರೆಗೆ ಮಳೆ ಅವಶ್ಯಕತೆ ಇದೆ. ಅವಶ್ಯಕತೆ ಇದ್ದಾಗ ಬೀಳದ ಮಳೆ ಯಾವಾಗಲೋ ಬೀಳುತ್ತದೆ. ಅಧಿಕಾರಿಗಳುಸಮೀಕ್ಷೆ ನಡೆಸಿ ಬರಗಾಲ ಪ್ರದೇಶವೆಂದು ಘೋಷಿ ಸಬೇಕು ಎಂದುರೈತ ದತ್ತಾತ್ರೇಯ ಉಮರ್ಗೆ ಒತ್ತಾಯಿಸಿದ್ದಾರೆ.

ಬೀಜ, ಗೊಬ್ಬರ, ಕೂಲಿ ಸೇರಿ ಒಂದು ಎಕರೆಗೆ ₹10-₹15 ಸಾವಿರ ಖರ್ಚು ತಗಲುತ್ತಿದೆ. ಸಾಲ ಮಾಡಿ ಬಿತ್ತನೆ ಮಾಡಿರುವ ರೈತನಿಗೆ ಮಳೆ ಮಾಯವಾಗಿದ್ದು ಆಘಾತ ತಂದಿde ಎಂದು ರೈತ ಮುಖಂಡ ನಿರ್ಮಲಕಾಂತ
ಪಾಟೀಲ ಆಗ್ರಹಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.