ಗುರುವಾರ , ಅಕ್ಟೋಬರ್ 21, 2021
21 °C
ರಾಷ್ಟ್ರೀಯ ಜನಪದ ನೃತ್ಯೋತ್ಸವ: ಉಮಾಕಾಂತ ಪಾಟೀಲ ಅಭಿಮತ

ಬದುಕಿಗೆ ಜಾನಪದ ಅತ್ಯಗತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ಇಂದು ಮನುಷ್ಯ ಆಧುನಿಕತೆಗೆ ಎಷ್ಟೇ ಒಗ್ಗಿಕೊಂಡರೂ ಬದುಕಿಗೆ ಜಾನಪದ ಅತ್ಯಗತ್ಯ ಎಂದು ಆಂಗ್ಲ ಸಾಹಿತಿ ಡಾ. ಉಮಾಕಾಂತ ಪಾಟೀಲ ಅಭಿಪ್ರಾಯಪಟ್ಟರು.

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ದೆಹಲಿಯ ಸಂಸ್ಕೃತಿ ಸಚಿವಾಲಯ, ನಾಗಪುರದ ದಕ್ಷಿಣ ವಲಯ ಕೇಂದ್ರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಆಶ್ರಯದಲ್ಲಿ ರಾಷ್ಟ್ರೀಯ ಜನಪದ ನೃತ್ಯೋತ್ಸವ ಪ್ರಯುಕ್ತ ಶನಿವಾರ ನಡೆದ ಪ್ರಬಂಧ ಮಂಡನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾನಪದ ಸಾಹಿತ್ಯದಿಂದ ಮನ ಶಾಂತಿ ಸಾಧ್ಯವಿದೆ. ಸಮಯ ಸಿಕ್ಕಾಗ ಜಾನಪದ ಸಾಹಿತ್ಯ ಕೃತಿಗಳನ್ನು ಓದಬೇಕು. ಜಾನಪದ ಹಾಡುಗಳನ್ನು ಆಲಿಸಬೇಕು ಎಂದು ಸಲಹೆ ಮಾಡಿದರು.

ಬೀದರ್ ಜನತೆಗೆ ದೇಶದ ಸಂಸ್ಕೃತಿ ಪರಿಚಯಿಸುವ ದಿಸೆಯಲ್ಲಿ ತ್ರಿಪುರಾದಿಂದ ತೆಲಂಗಾಣವರೆಗಿನ ಕಲಾವಿದರನ್ನು ಕರೆಸಿ ಜನಪದ ನೃತ್ಯೋತ್ಸವ ನಡೆಸುತ್ತಿರುವ ಡಾ. ರಾಜಕುಮಾರ ಹೆಬ್ಬಾಳೆ ಅವರ ಕಾರ್ಯ ಶ್ಲಾಘನೀಯ ಎಂದು ಹೇಳಿದರು.

ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಅಧ್ಯಕ್ಷ ಡಾ. ಜಗನ್ನಾಥ ಹೆಬ್ಬಾಳೆ ಆಶಯ ನುಡಿ ಆಡಿದರು.

ಹಿರಿಯ ಸಾಹಿತಿ ಪಂಚಾಕ್ಷರಿ ಪುಣ್ಯಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕರ್ನಾಟಕ ಸಾಹಿತ್ಯ ಸಂಘ ಟ್ರಸ್ಟ್ ಅಧ್ಯಕ್ಷ ಶಂಕರೆಪ್ಪ ಹೊನ್ನಾ, ನಿವೃತ್ತ ಪ್ರಾಧ್ಯಾಪಕರಾದ ಪ್ರೊ.ವಿನೋದ ಮೂಲಗೆ, ಪ್ರೊ. ವೈಜಿನಾಥ ಚಿಕ್ಕಬಸೆ, ಸಾಹಿತಿಗಳಾದ ಸಾಧನಾ ರಂಜೋಳಕರ್, ಪುಷ್ಪಾ ಕನಕ, ಜಾನಪದ ಪರಿಷತ್ ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ ಕುಚಬಾಳ ಉಪಸ್ಥಿತರಿದ್ದರು.

ಡಾ.ವಿಶ್ವನಾಥ ಕೆ, ಡಾ.ಸಾವಿತ್ರಿಬಾಯಿ ಹೆಬ್ಬಾಳೆ, ಡಾ.ಮಹಾನಂದಾ ಮಡಕಿ, ಡಾ.ಸುನಿತಾ ಕೂಡ್ಲಿಕರ್, ಮಹಾರುದ್ರ ಡಾಕುಳಗಿ, ಡಾ.ಮಹಾದೇವಿ ಭಾಗ್ಯನಗರ, ರೇಣುಕಾ ಮಳ್ಳಿ, ಡಾ.ಸಿದ್ದಣ್ಣ ಕೊಳ್ಳಿ, ಶೈಲಜಾ ಸಿದ್ದವೀರ, ಡಾ.ಜಗದೇವಿ ತಿಪ್ಪಶೆಟ್ಟಿ, ಸಂಗಪ್ಪ ತೌಡಿ, ಸ್ವರೂಪಾ ಕಣಜೆ, ಸಂಗೀತಾ ಮಾನಾ, ಮಹಾದೇವ, ಕಿರಣ ಹಾಗೂ ಇತರರು ಪ್ರಬಂಧ ಮಂಡಿಸಿದರು.

ಮಹಾರುದ್ರ ಡಾಕುಳಗಿ ನಿರೂಪಿಸಿದರು. ಪ್ರಕಾಶ ಕನ್ನಾಳೆ ವಂದಿಸಿದರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.