ಉಚಿತ ನೇತ್ರ ತಪಾಸಣಾ ಶಿಬಿರ

7

ಉಚಿತ ನೇತ್ರ ತಪಾಸಣಾ ಶಿಬಿರ

Published:
Updated:
Prajavani

ಬೀದರ್: ಚಂಪಾವತಿ ನಾರಾಯಣಪೇಟಕರ್ ಅವರ ಪ್ರಥಮ ಪುಣ್ಯತಿಥಿ ಪ್ರಯುಕ್ತ ಬೀದರ್‌ನ ಡಾ. ದೇಶಪಾಂಡೆ ನೇತ್ರ ಆಸ್ಪತ್ರೆ ಹಾಗೂ ಹೋಮಿಯೊ ಸ್ಕ್ವಾಯರ್ ಆಸ್ಪತ್ರೆ ಸಹಯೋಗದಲ್ಲಿ ಹುಮನಾಬಾದ್ ಪಟ್ಟಣದ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಈಚೆಗೆ ಉಚಿತ ಆರೋಗ್ಯ, ನೇತ್ರ ತಪಾಸಣೆ ಹಾಗೂ ನೇತ್ರ ಶಸ್ತ್ರಚಿಕಿತ್ಸಾ ಶಿಬಿರ ನಡೆಯಿತು.

ಶಿಬಿರದಲ್ಲಿ 60 ಜನರ ಆರೋಗ್ಯ, 40 ಮಂದಿಯ ನೇತ್ರ ತಪಾಸಣೆ ಹಾಗೂ 15 ಜನರ ನೇತ್ರ ಶಸ್ತ್ರಚಿಕಿತ್ಸೆ ಮಾಡಲಾಯಿತು. ಡಾ. ಪಿ.ಎಂ. ದೇಶಪಾಂಡೆ ನೇತ್ರ ತಪಾಸಣೆ ನಡೆಸಿದರೆ, ಹೊಮಿಯೊ ಸ್ಕ್ವಾಯರ್ ಆಸ್ಪತ್ರೆಯ ಡಾ. ಶ್ರೀಕಾಂತ ಶಿವಗೊಂಡ ಆರೋಗ್ಯ ತಪಾಸಣೆ ಮಾಡಿದರು.

ಡಾ. ಅರುಣಕುಮಾರ, ಡಾ. ಸಂಗೀತಾ ಎಸ್., ಶಿಬಿರದ ಪ್ರಾಯೋಜಕ ಮಾಣಿಕರಾವ್ ನಾರಾಯಣಪೇಟಕರ್, ಪ್ರಭಾಕರ ನಾರಾಯಣಪೇಟಕರ್, ಸತೀಶ ರಾಂಪುರೆ, ಶಿವಕುಮಾರ ನಾರಾಯಣಪೇಟಕರ್, ಸುರೇಶ ನಾರಾಯಣಪೇಟಕರ್, ವಿಕ್ರಾಂತ ವಾಡಿ, ರಮೇಶ ನಾರಾಯಣಪೇಟಕರ್, ವಿಮಲಾ ಶಿವಗೊಂಡ, ಚೇತನ, ಹುಲಿರಾಜ, ತಿಪ್ಪಣ್ಣ ವಾಡಿ, ಮಲ್ಲಮ್ಮ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !