ನವದೆಹಲಿ: 2017–18ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ 19 ಬ್ಯಾಂಕ್‌ಗಳ ಒಟ್ಟು ನಷ್ಟವು ₹ 87,357 ಕೋಟಿಗೆ ತಲುಪಿದೆ.
2016–17ನೇ ಹಣಕಾಸು ವರ್ಷದಲ್ಲಿ ಸರ್ಕಾರಿ ಸ್ವಾಮ್ಯದ 21 ಬ್ಯಾಂಕ್‌ಗಳ ಒಟ್ಟು ನಿವ್ವಳ ಲಾಭ ₹ 474 ಕೋಟಿ ಇತ್ತು.
ಹಗರಣದಲ್ಲಿ ಸಿಲುಕಿರುವ ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್‌ಬಿ) ಒಂದರ ನಷ್ಟದ ಮೊತ್ತವೇ ₹ 12,283 ಕೋಟಿ ಇದ್ದು, ಮೊದಲ ಸ್ಥಾನದಲ್ಲಿದೆ. ಐಡಿಬಿಐ ಎರಡನೇ ಸ್ಥಾನದಲ್ಲಿದೆ. ವಿಜಯ ಬ್ಯಾಂಕ್ (₹ 727 ಕೋಟಿ) ಮತ್ತು ಇಂಡಿಯನ್ ಬ್ಯಾಂಕ್‌ಗಳು (₹ 1,259 ಕೋಟಿ) ಮಾತ್ರವೇ ಲಾಭ ಗಳಿಸಿವೆ.
ವಸೂಲಿಗೆ ಕ್ರಮ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸಾಲ ವಸೂಲಿ ಪ್ರಕ್ರಿಯೆಯನ್ನು ತ್ವರಿತಗೊಳಿಸುತ್ತಿವೆ.
ಹಣಕಾಸು ನಷ್ಟ ಮತ್ತು ದಿವಾಳಿ ಸಂಹಿತೆಯ (ಐಬಿಸಿ) ಮೂಲಕ ಪ್ರಸಕ್ತ ಹಣಕಾಸು ವರ್ಷದಲ್ಲಿ ₹ 30 ಸಾವಿರ ಕೋಟಿ ಸಾಲ ವಸೂಲಿ ಮಾಡುವ ನಿರೀಕ್ಷೆಯನ್ನು ಭಾರತೀಯ ಸ್ಟೇಟ್ ಬ್ಯಾಂಕ್ ಹೊಂದಿದೆ.
ದೊಡ್ಡ ಮೊತ್ತದ ವಸೂಲಾಗದ ಸಾಲಗಳನ್ನು (ಎನ್‌ಪಿಎ) ಕಾಲಮಿತಿ ಒಳಗೆ ಪರಿಹರಿಸಬೇಕು. ಇದು ಸಾಧ್ಯವಾಗದಿದ್ದರೆ ದಿವಾಳಿ ಸಂಹಿತೆಯಡಿ ಸಾಲ ವಸೂಲಾತಿ ಪ್ರಕ್ರಿಯೆ ಕೈಗೊಳ್ಳುವಂತೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆದೇಶ ಹೊರಡಿಸಿದೆ. ಅದರಂತೆ ಎಸ್‌ಬಿಐ ಸಾಲ ವಸೂಲಿ ಪ್ರಕ್ರಿಯೆ ಆರಂಭಿಸಿದೆ.
12 ಎನ್‌ಪಿಎ ಖಾತೆಗಳನ್ನು ಹರಾಜು ಹಾಕುವ ಮೂಲಕ ಈ ತಿಂಗಳಿನಲ್ಲಿ ₹ 1,325 ಕೋಟಿ ಸಂಗ್ರಹಿಸಲು ಮುಂದಾಗಿದೆ. ಜೂನ್ 25 ರಂದು ಇ–ಹರಾಜು ನಡೆಸುವುದಾಗಿ ಎಸ್‌ಬಿಐ ಹೇಳಿದೆ.