ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶನಿವಾರ ಮತ ಎಣಿಕೆ: 10 ಗಂಟೆಗೆ ಫಲಿತಾಂಶ ನಿರೀಕ್ಷೆ

ಬೀದರ್ ನಗರದಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಮತ ಎಣಿಕೆ
Published 12 ಮೇ 2023, 5:40 IST
Last Updated 12 ಮೇ 2023, 5:40 IST
ಅಕ್ಷರ ಗಾತ್ರ

ಬೀದರ್: ವಿಧಾನಸಭಾ ಚುನಾವಣೆಯ ಮತ ಎಣಿಕೆ ನಗರದ ಬಿ.ವಿ ಭೂಮರೆಡ್ಡಿ ಕಾಲೇಜಿನಲ್ಲಿ ಮೇ 13 ರಂದು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ. ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ.

ಜಿಲ್ಲೆಯ ಆರು ವಿಧಾನಸಭಾ ಕ್ಷೇತ್ರಗಳ ಪೈಕಿ ಬಸವಕಲ್ಯಾಣ ಕ್ಷೇತದ ಮತ ಎಣಿಕೆಯೇ ಮೊದಲು ಆರಂಭವಾಗಲಿದೆ. ನಂತರ ಕ್ರಮವಾಗಿ ಹುಮನಾಬಾದ್, ಬೀದರ್‌ ದಕ್ಷಿಣ, ಬೀದರ್, ಭಾಲ್ಕಿ ಹಾಗೂ ಔರಾದ್‌ ಕ್ಷೇತ್ರಗಳ ಮತ ಎಣಿಕೆ ನಡೆದು ಬೆಳಿಗ್ಗೆ 10 ವೇಳೆಗೆ ಜಿಲ್ಲೆಯ ಎಲ್ಲ ಆರು ಕ್ಷೇತ್ರಗಳ ಫಲಿತಾಂಶ ಹೊರ ಬೀಳುವ ಸಾಧ್ಯತೆ ಇದೆ.

ಬೀದರ್ ಜಿಲ್ಲೆಯ ಒಟ್ಟು 1,506 ಮತಗಟ್ಟೆಗಳ ಮತ ಎಣಿಕೆ 110 ಸುತ್ತುಗಳಲ್ಲಿ ನಡೆಯಲಿದ್ದು. ಕೊನೆಯ ಸುತ್ತುಗಳು 50 ಇರಲಿವೆ.

84 ಇವಿಎಂಗಳ ಮತ ಎಣಿಕೆ ಟೇಬಲ್, 23 ಅಂಚೆ ಮತಗಳ ಎಣಿಕೆ ಟೇಬಲ್ ಸೇರಿ ಒಟ್ಟು 107 ಟೇಬಲ್‌ಗಳು ಇರಲಿವೆ. ಇವಿಎಂಗಳಲ್ಲಿನ ಮತ ಎಣಿಕೆ 10 ಹಾಲ್‌ಗಳಲ್ಲಿ ಹಾಗೂ ಹಾಗೂ ಅಂಚೆ ಮತಗಳ ಎಣಿಕೆ 6 ಹಾಲ್‌ಗಳಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

47-ಬಸವಕಲ್ಯಾಣ ವಿಧಾನಸಭಾ ಕ್ಷೇತ್ರದ 266 ಮತಗಟ್ಟೆ ಕೇಂದ್ರಗಳ ಮತ ಎಣಿಕೆಯು 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 14 ಟೇಬಲ್‌ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಅಂಚೆ ಮತಪತ್ರ ಎಣಿಕೆಯ ಮೂರು 3 ಟೇಬಲ್‌ ಸೇರಿ ಒಟ್ಟು 17 ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಇವಿಎಂ ಎಣಿಕೆ ಒಂದು ಹಾಲ್‌ನಲ್ಲಿ ಹಾಗೂ ಅಂಚೆ ಮತಗಳ ಎಣಿಕೆ ಇನ್ನೊಂದು ಹಾಲ್ನಲ್ಲಿ ನಡೆಯಲಿದೆ.

48-ಹುಮನಾಬಾದ್‌ ವಿಧಾನಸಭಾ ಕ್ಷೇತ್ರದ 255 ಮತಗಟ್ಟೆ ಕೇಂದ್ರಗಳ ಮತ ಎಣಿಕೆಯು 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 3 ಟೇಬಲ್‌ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಅಂಚೆ ಮತಗಳ ಎಣಿಕೆಗೆ 4 ಟೇಬಲ್‌ ಸೇರಿ ಒಟ್ಟು 18 ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಇವಿಎಂ ಎಣಿಕೆ ಹಾಲ್ ಎರಡು ಹಾಗೂಅಂಚೆ ಮತಗಳ ಎಣಿಕೆಯನ್ನು ಒಂದು ಹಾಲ್‌ನಲ್ಲಿ ಮಾಡಲಾಗುವುದು.

49-ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ 229 ಮತಗಟ್ಟೆ ಕೇಂದ್ರಗಳ ಮತ ಎಣಿಕೆಯು 17 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 5 ಟೇಬಲ್‌ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಅಂಚೆ ಮತಗಳ ಎಣಿಕೆಗೆ 3 ಸೇರಿ ಒಟ್ಟು 17 ಟೇಬಲ್‌ಗಳನ್ನು ಸಜ್ಜುಗೊಳಿಸಲಾಗಿದೆ. ಇವಿಎಂ ಎಣಿಕೆ ಒಂದು ಹಾಲ್‌ನಲ್ಲಿ ಹಾಗೂ ಅಂಚೆ ಮತಗಳ ಎಣಿಕೆ ಇನ್ನೊಂದು ಹಾಲ್ನಲ್ಲಿ ನಡೆಯಲಿದೆ.

 50-ಬೀದರ್ ವಿಧಾನಸಭಾ ಕ್ಷೇತ್ರದ 238 ಮತಗಟ್ಟೆ ಕೇಂದ್ರಗಳ ಮತ ಎಣಿಕೆಯು 17 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 14 ಟೇಬಲ್‌ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಅಂಚೆ ಮತಗಳ ಎಣಿಕೆಗೆ 5 ಟೇಬಲ್‌ ಸೇರಿ ಒಟ್ಟು 19 ಟೇಬಲ್‌ಗಳನ್ನು ಸಿದ್ಧಗೊಳಿಸಲಾಗಿದೆ. ಇವಿಎಂ ಎಣಿಕೆ ಹಾಲ್ ಎರಡು ಹಾಗೂಅಂಚೆ ಮತಗಳ ಎಣಿಕೆ ಒಂದು ಹಾಲ್ನಲ್ಲಿ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ.

 51-ಭಾಲ್ಕಿ ವಿಧಾನಸಭಾ ಕ್ಷೇತ್ರದ 263 ಮತಗಟ್ಟೆ ಕೇಂದ್ರಗಳ ಮತ ಏಣಿಕೆಯು 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 11 ಟೇಬಲ್‌ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಅಂಚೆ ಮತಗಳ ಎಣಿಕೆಗೆ 4 ಟೇಬಲ್‌ ಸೇರಿ ಒಟ್ಟು 18 ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಇವಿಎಂ ಎಣಿಕೆ ಹಾಲ್ ಎರಡು ಹಾಗೂ ಅಂಚೆ ಮತಗಳ ಎಣಿಕೆ ಒಂದು ಹಾಲ್‌ನಲ್ಲಿ ನಡೆಯಲಿದೆ.


 52-ಔರಾದ್ ವಿಧಾನಸಭಾ ಕ್ಷೇತ್ರದ 255 ಮತಗಟ್ಟೆ ಕೇಂದ್ರಗಳ ಮತ ಎಣಿಕೆ 19 ಸುತ್ತುಗಳಲ್ಲಿ ನಡೆಯಲಿದ್ದು ಕೊನೆಯ ಸುತ್ತಿನಲ್ಲಿ 3 ಟೇಬಲ್‌ಗಳು ಇರಲಿವೆ. ಇವಿಎಂ ಮತ ಎಣಿಕೆಗೆ 14, ಅಂಚೆ ಮತಗಳ ಎಣಿಕೆಗೆ 4 ಟೇಬಲ್ ಸೇರಿ ಒಟ್ಟು 18 ಟೇಬಲ್‌ಗಳನ್ನು ಸಿದ್ಧಪಡಿಸಲಾಗಿದೆ. ಹಾಗೂ ಇವಿಎಂ ಎಣಿಕೆ ಹಾಲ್ ಎರಡು ಹಾಗೂ ಅಂಚೆ ಮತಗಳ ಎಣಿಕೆ ಕಾರ್ಯ ಒಂದು ಹಾಲ್‌ನಲ್ಲಿ ನಡೆಯಲಿದೆ.

ಜಿಲ್ಲೆಯಲ್ಲಿ ನಿಷೇಧಾಜ್ಞೆ, ಮದ್ಯದ ಅಂಗಡಿಗಳ ಬಂದ್

ಜಿಲ್ಲೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅನುಕೂಲವಾಗುವಂತೆ ಮೇ 13ರಂದು ಬೆಳಿಗ್ಗೆ 6 ಗಂಟೆಯಿಂದ 14ರ ಬೆಳಿಗ್ಗೆ 6 ಗಂಟೆಯ ವರೆಗೆ ಭಾರತೀಯ ದಂಡ ಪ್ರಕ್ರಿಯೆ ಸಂಹಿತೆ 1973ರ ಕಲಂ 144 ರನ್ವಯ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮದ್ಯದ ಅಂಗಡಿಗಳನ್ನು ಮುಚ್ಚಲು ಆದೇಶಿಸಲಾಗಿದೆ. ಮದ್ಯ ಮಾರಾಟ ಮತ್ತು ಸಾಗಣೆ ಮಾಡುವುದನ್ನು ನಿಷೇಧಿಸಿ ಶುಷ್ಕ ದಿನವೆಂದು ಘೋಷಿಸಿ ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಆದೇಶ ಹೊರಡಿಸಿದ್ದಾರೆ.

ಸಂಚಾರ ಮಾರ್ಗ ಬದಲಾವಣೆ

ನಗರದ ಬಿ.ವಿ.ಭೂಮರೆಡ್ಡಿ ಕಾಲೇಜಿನಲ್ಲಿ ಮತ ಎಣಿಕೆ ಕಾರ್ಯ ನಡೆಯುವ ಕಾರಣ ಸಂಚಾರ ಒತ್ತಡ ನಿಯಂತ್ರಿಸಲು ಕಾಲೇಜು ಮುಂಭಾಗದ ರಸ್ತೆಯಲ್ಲಿ ಮೇ 13ರಂದು ಖಾಸಗಿ ವಾಹನ ಸಂಚಾರ ನಿಷೇಧಿಸಲಾಗಿದೆ. ವಾಹನಗಳ ಸುಗಮ ಸಂಚಾರಕ್ಕೆ ಅನುಕೂಲವಾಗುವಂತೆ ಸಂಚಾರ ಮಾರ್ಗ ಬದಲಿಸಲಾಗಿದೆ.

ನಗರದ ಮೈಲೂರ್ ಕ್ರಾಸ್ ದಿಂದ ಕುಂಬಾರವಾಡ ಕ್ರಾಸ್‌ವರೆಗೆ ಸಾರ್ವಜನಿಕ ರಸ್ತೆ ಸಂಚಾರ ನಿಷೇಧ ಇರಲಿದೆ. ಬೊಮಗೊಂಡೆಶ್ವರ ವೃತ್ತದಿಂದ ಗುಂಪಾ ಕಡೆಗೆ ಹೋಗುವವರು ಮೈಲೂರ್ ಕ್ರಾಸ್-ಬಾಂಬೆ ಬಿಲ್ಡಿಂಗ್, ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜ್, ಮೈಲೂರ, ಗುಂಪಾ ರಿಂಗ್ ರೋಡ್ ಮಾರ್ಗವಾಗಿ ತೆರಳಬೇಕು.

ಗುಂಪಾದಿಂದ ಬೊಮಗೊಂಡೆಶ್ವರ ವೃತ್ತದಕಡೆಗೆ ಹೋಗುವವರು ಗುಂಪಾ ರಿಂಗ್ ರಸ್ತೆ, ಮೈಲೂರ್, ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜ್, ಮೈಲೂರಕ್ರಾಸ್ ಮಾರ್ಗವಾಗಿ ಹೋಗಬಹುದು ಎಂದು ‍ಪೊಲೀಸ್‌ ಪ್ರಕಟಣೆ ತಿಳಿಸಿದೆ.

ಬಿಗಿ ಪೊಲೀಸ್‌ ಬಂದೋಬಸ್ತ್

ಚುನಾವಣೆ ಫಲಿತಾಂಶ ಹೊರ ಬಂದ ನಂತರ ರಾಜಕೀಯ ಪಕ್ಷಗಳು ಮುಖಂಡರು ನಡೆಸುವ ಮೆರವಣಿಗೆ, ಜಯಘೋಷ ಹಾಗೂ ವಿಜಯೋತ್ಸವ ಆಚರಣೆ ನಿಷೇಧಿಸಲಾಗಿದೆ. ಮತ ಕೇಂದ್ರದ ಸುತ್ತಮುತ್ತ ಅರೆ ಸೇನಾಪಡೆ ಹಾಗೂ ಪೊಲೀಸ್‌ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ, ಎಸಿಪಿ, ಡಿವೈಎಸ್‌ಪಿ, ಸಿಪಿಐ 4. ಆರ್‌ಪಿಐ 19, ಪಿಎಸ್‌ಐ. ಆರ್‌ಎಸ್‌ಐ 37, ಎಎಸ್‌ಐ. ಎಆರ್‌ಎಸ್‌ಐ 60 ಎಚ್‌ಸಿ.ಪಿಸಿ 326 ಹಾಗೂ ಮಹಿಳಾ ಪೊಲೀಸರು 61, ಸಿಆರ್‌ಪಿಎಫ್, ಐಟಿಬಿಪಿ-2, ಕೆಎಸ್‌ಆರ್‌ಪಿ 3, ಡಿಎಆರ್ 11, ಡಿಸ್ಕಾಡ್‌ 2 ತುಕ್ಕಡಿ ನಿಯೋಜಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚೆನ್ನಬಸವಣ್ಣ ಎಸ್.ಎಲ್. ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT