ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾಯಕದಲ್ಲೇ ದೇವರನ್ನು ಕಾಣಿ’

Last Updated 12 ನವೆಂಬರ್ 2019, 10:29 IST
ಅಕ್ಷರ ಗಾತ್ರ

ಕಮಲನಗರ: ‘ಕೇವಲ ಮಾತನಾಡುವುದರಿಂದ ಪ್ರಯೋಜನವಿಲ್ಲ. ಮಾತನ್ನು ಕೃತಿಯಾಗಿಸುವುದು ಮುಖ್ಯ’ ಎಂದು ಮಡಿವಾಳೇಶ್ವರ ಮಂದಿರದ ಅರ್ಚಕ ಚಂದ್ರಕಾಂತ ಹಿರೇಮಠ ಹೇಳಿದರು.

ತಾಲ್ಲೂಕಿನ ಡಿಗ್ಗಿ ಮಡಿವಾಳೇಶ್ವರ ಸನ್ನಿಧಿಯಲ್ಲಿ ಸೋಮವಾರ ನಡೆದ ಕಾರ್ತಿಕ ದಿಪೋತ್ಸವ, ರುದ್ರಾಭಿಷೇಕ ಹಾಗೂ ಗಂಗಾ ಪೂಜೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಮಗೆ ವಹಿಸಿದ ಕಾಯಕವನ್ನ ಶ್ರದ್ಧೆಯಿಂದ ಮಾಡಲು ಪ್ರಯತ್ನಿಸಬೇಕು. ಅಂತಹ ಬುದ್ಧಿವಂತಿಕೆಯನ್ನು ನಾವು ಬೆಳೆಸಿಕೊಳ್ಳಬೇಕು. ಆ ಕಾಯಕದಲ್ಲೇ ದೇವರನ್ನು ಕಾಣಬೇಕು. ಆಗ ಮಾತ್ರ ಬದುಕು ಸಾರ್ಥಕವಾಗಲು ಸಾಧ್ಯ. ಬೇರೆಯವರನ್ನು ನೋಡಿ ನಾವು ಅಸೂಯೆಪಡಬಾರದು. ಅಂತಹ ಭಾವನೆಗಳಿಗೆ ನಮ್ಮ ಮನಸ್ಸಿನಲ್ಲಿ ಅವಕಾಶವನ್ನೂ ನೀಡಬಾರದು ಎಂದರು.

ಈರಪ್ಪ ಹೂಗಾರ, ಗಂಗಾಧರ ಗುಣವಂತರಾವ, ಸಂಜೀವಕುಮಾರ ಪಾಟೀಲ, ನಿರಂಜನ ಸ್ವಾಮಿ, ರುದ್ರೇಶ ಹಿರೇಮಠ, ಗಣೇಶ ಪಾಟೀಲ, ನಾಗಮ್ಮ ಹಿರೇಮಠ, ಸುಮಂಗಲಾ ಮನೋಜಕುಮಾರ ಹಿರೇಮಠ, ಮಲ್ಲಮ್ಮ ವಿಶ್ವನಾಥ, ಅಂಬಿಕಾ ಗಂಗಾಧರ, ಸುಗಣಾವತಿ ಶಂಕರ, ಸುರೇಖಾ ರಾಜಕುಮಾರ ಹಾಗೂ ಶ್ರೀಮತಿ ಶ್ರೀಧರ ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT