ಬೀದರ್: ಹಾಡಹಗಲೇ ಯುವಕನ ಕೊಲೆ

7

ಬೀದರ್: ಹಾಡಹಗಲೇ ಯುವಕನ ಕೊಲೆ

Published:
Updated:

ಬೀದರ್: ಇಲ್ಲಿನ ಬದ್ರುದ್ದಿನ್‌ ಕಾಲೊನಿಯಲ್ಲಿ ಭಾನುವಾರ ಕ್ಷುಲ್ಲಕ ಕಾರಣಕ್ಕಾಗಿ ಹಾಡಹಗಲೇ ಯುವಕನಿಗೆ ಚೂರಿ ಇರಿದು ಕೊಲೆ ಮಾಡಿರುವ ಘಟನೆ ಭಾನುವಾರ ನಡೆದಿದೆ. 

ಕೈಗಾಡಿಯ ಮೇಲೆ ಬಾಳೆಹಣ್ಣು ವ್ಯಾಪಾರ ಮಾಡುವ ಛೋಟೊಮಿಯಾ (30) ಕೊಲೆಗೀಡಾಗಿದ್ದಾನೆ. ಶನಿವಾರ ಸಂಜೆ ಛೋಟೊಮಿಯಾ ತನ್ನ ಕೈಗಾಡಿಯನ್ನು ಗುಜರಿ ಅಂಗಡಿಯ ಮುಂದೆ ಅಡ್ಡಲಾಗಿ ನಿಲ್ಲಿಸಿದ್ದ. ಇದೇ ವಿಷಯವಾಗಿ ಗುಜರಿ ಅಂಗಡಿಯಲ್ಲಿ ಕೆಲಸ ಮಾಡುವ ವ್ಯಕ್ತಿ ಹಾಗೂ ಛೋಟೊಮಿಯಾ ಮಧ್ಯೆ  ಜಗಳ ಆರಂಭವಾದಾಗ ಕೆಲವರು ಮಧ್ಯ ಪ್ರವೇಶಿಸಿ ಬಗೆಹರಿಸಿದ್ದರು. 

ಭಾನುವಾರ ಮತ್ತೆ ಜಗಳ ಆರಂಭವಾದ ಆವೇಶದಲ್ಲಿ ಯುವಕನೊಬ್ಬ ಛೋಟೊಮಿಯಾಗೆ ಚಾಕುವಿನಿಂದ ಇರಿದ್ದಾನೆ. ಗಂಭೀರವಾಗಿ ಗಾಯಗೊಂಡ ಛೋಟೊಮಿಯಾನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಅಷ್ಟರಲ್ಲಿ ಆತ ಮೃತಪಟ್ಟಿದ್ದ. ಘಟನೆಯಲ್ಲಿ ಮಹಿಳೆಯೂ ಗಾಯಗೊಂಡಿದ್ದಾಳೆ.

ಗಾಂಧಿ ಗಂಜ್‌ ಪೊಲೀಸರು ಪ್ರಕರಣ ಸಂಬಂಧ ಸಿರಾಜ್, ಅರ್ಷದ್ ಹಾಗೂ ಆದಿಲ್‌ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ಹಾಗೂ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !