ಗುರುವಾರ , ಜನವರಿ 28, 2021
15 °C

ಬೀದರ್‌ ವಿಮಾನನಿಲ್ದಾಣಕ್ಕೆ ಬಿ.ಶ್ಯಾಮಸುಂದರ ಹೆಸರಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ‘ರಾಜ್ಯ ಸರ್ಕಾರ ಬೀದರ್‌ ವಿಮಾನ ನಿಲ್ದಾಣಕ್ಕೆ ಹೈದರಾಬಾದ್ ಮುಕ್ತಿ ಸಂಗ್ರಾಮದಲ್ಲಿ ಹೋರಾಟ ನಡೆಸಿದ ದಲಿತ ಚಳವಳಿಯ ನಾಯಕ ಬಿ.ಶ್ಯಾಮಸುಂದರ ಅವರ ಹೆಸರಿಡಬೇಕು’ ಎಂದು ಚಿಂತಕ ಮಹಾದೇವ ಕಾಂಬಳೆ ಮನವಿ ಮಾಡಿದರು.

‘ಸರ್ಕಾರ ಪ್ರತಿ ವರ್ಷ ಬಿ.ಶ್ಯಾಮಸುಂದರ ಜಯಂತಿ ಆಚರಿಸಬೇಕು. ಸರ್ಕಾರದ ವತಿಯಿಂದ ಅವರ ಜೀವನ ಮತ್ತು ಸಾಧನೆಯ ಗ್ರಂಥ ಪ್ರಕಟಿಸಬೇಕು ಎಂದು ನಗರದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಒತ್ತಾಯಿಸಿದರು.

’ಬಿ.ಶ್ಯಾಮಸುಂದರ ಸೇವೆಯನ್ನು ಸ್ಮರಿಸಲು ಜನವರಿ 10 ರಂದು ಬೆಳಿಗ್ಗೆ 11 ರಂದು ಜಿಲ್ಲಾ ರಂಗ ಮಂದಿರದಲ್ಲಿ ಪುಸ್ತಕ ಬಿಡುಗಡೆ ಹಾಗೂ ಮೂಲಭಾರತಿ ಭೀಮರತ್ನ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗಿದೆ. ಬಿ.ಶ್ಯಾಮಸುಂದರ ಅವರ ಸೋದರಳಿಯ ನರಸಿಂಗರಾವ್ ಹೈದರಾಬಾದ್ ಉದ್ಘಾಟನೆ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ರಾಷ್ಟ್ರೀಯ ಮೂಲನಿವಾಸಿ ಸಂಘದ ರಾಷ್ಟ್ರೀಯ ಅಧ್ಯಕ್ಷ ತಾರಾರಾಮ ಮೇಹ್ನಾ ವಹಿಸಲಿದ್ದಾರೆ. ವಿಶೇಷ ಅತಿಥಿಗಳಾಗಿ ಪಂಜಾಬ್‍ನಿಂದ ದಾದಾಸಾಹೇಬ ಕಾನ್ಶಿರಾಂ ಅವರ ಸೋದರಳಿಯ ಪ್ರಭಜಿತಸಿಂಗ್, ಕಲಬುರಗಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ವಿ.ಟಿ ಕಾಂಬಳೆ, ಮಾಜಿ ಶಾಸಕ ಜುಲ್ಫೆಕಾರ್ ಹಾಸ್ಮಿ, ಸಂವಿಧಾನ ರಕ್ಷಣಾ ಸಮಿತಿಯ ಮಹಾಪ್ರಧಾನ ಕಾರ್ಯದರ್ಶಿ ಅನಿಲಕುಮಾರ ಬೆಲ್ದಾರ್, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪ್ರೇಮಸಾಗರ ದಾಂಡೇಕರ್, ವಕೀಲ ಮಾಣಿಕರಾವ್ ಗೋಡಬಲೆ, ಸಮಾಂತರ ಭಾರತ ನಿರ್ದೇಶಕ ಎಸ್.ವರುಣಕುಮಾರ, ಪ್ರಕಾಶ ಮೂಲಭಾರತಿ, ಬಾಮ್‍ಸೇಫ್ ಕೇಂದ್ರ ಕಾರ್ಯಕಾರಿಣಿ ಸದಸ್ಯ ಬಿ.ಬಿ.ಮೇಶ್ರಂ, ಜೆಸ್ಕಾಂ ಲೆಕ್ಕಾಧಿಕಾರಿ ಸುಮಂತ ಕಟ್ಟಿಮನಿ ಪಾಲ್ಗೊಳ್ಳಲಿದ್ದಾರೆ’ ಎಂದು ಹೇಳಿದರು.

‘ಮಧ್ಯಾಹ್ನದ ಗೋಷ್ಠಿ 2.30ಕ್ಕೆ ‘ಮಹಾತ್ಮ ಫುಲೆ-ಡಾ.ಅಂಬೇಡ್ಕರೋತ್ತರ ಚಳವಳಿಯಲ್ಲಿ ಭಾರತಿ ಭೀಮ ಸೇನೆಯ ಕೊಡುಗೆ’ ಕುರಿತ ಚಿಂತನಗೋಷ್ಠಿ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಮಾಜಿ ಸದಸ್ಯ ಮಾರುತಿ ಡಿ.ಮಾಲೆ, ತೆಲಂಗಾಣ ವಿಧಾನ ಪರಿಷತ್ ಸದಸ್ಯ ಸೈಯದ್ ಅಮೀನ್ ಜಾಫ್‍ರಿ ಪಾಲ್ಗೊಳ್ಳಲಿದ್ದಾರೆ’ ಎಂದರು.

ವಿಶೇಷ ಅತಿಥಿಗಳಾಗಿ ಪುಣೆಯಿಂದ ಅಣ್ಣಾಭಾವು ಸಾಠೆ ಅವರ ಮರಿಮೊಮ್ಮಗ ವಿಲಾಸ ಸಾಠೆ, ಹರಿಯಾಣದ ರಾಷ್ಟ್ರೀಯ ಅಧ್ಯಕ್ಷ ಮಣಿರಾಮ್, ಡಿ.ಶಿವಶಂಕರ, ಮಾವಳಿ ಶಂಕರ, ಸೈಯದ್ ಮಕ್ಸೂದ್, ಪ್ರೊ.ಅನ್ವರ್ ಖಾನ್, ವಿಠಲದಾಸ್ ಪ್ಯಾಗೆ, ರಮೇಶ ಡಾಕುಳಗಿ ಭಾಗವಹಿಸುವರು. ಮುಂಬೈನ ಬಾಮ್‍ಸೇಫ್ ರಾಷ್ಟ್ರೀಯ ಅಧ್ಯಕ್ಷ ಬಿ.ಡಿ.ಬೋರಕರ್ ಅಧ್ಯಕ್ಷತೆ ವಹಿಸಲಿದ್ದಾರೆ.

ಮಾಜಿ ಶಾಸಕ ಜುಲ್ಫೆಕಾರ್ ಹಾಸ್ಮಿ, ಅಶೋಕಕುಮಾರ ಮಾಳಗೆ, ಸುನೀಲಕುಮಾರ ಡೊಳ್ಳೆ, ಸುರೇಶ ಟಾಳೆ ಇದ್ದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.