ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೆಳೆದ ರಾಷ್ಟ್ರೀಯ ಜನಪದ ನೃತ್ಯೋತ್ಸವ

Last Updated 24 ಸೆಪ್ಟೆಂಬರ್ 2021, 15:36 IST
ಅಕ್ಷರ ಗಾತ್ರ

ಬೀದರ್‌: ದೆಹಲಿಯ ಸಂಸ್ಕೃತಿ ಸಚಿವಾಲಯ, ನಾಗಪುರದ ದಕ್ಷಿಣ ವಲಯ ಕೇಂದ್ರ, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ, ಕರ್ನಾಟಕ ಬರಹಗಾರರ ಮತ್ತು ಕಲಾವಿದರ ಸಂಘದ ಆಶ್ರಯದಲ್ಲಿ ನಗರದ ಕರ್ನಾಟಕ ಸಾಹಿತ್ಯ ಸಂಘದ ಸಭಾಂಗಣದಲ್ಲಿ ಶುಕ್ರವಾರ ರಾಷ್ಟ್ರೀಯ ಜನಪದ ನೃತ್ಯೋತ್ಸವ ನಡೆಯಿತು.

ನೃತ್ಯೋತ್ಸವದಲ್ಲಿ ಹರಿಯಾಣದ ಅಶೋಕ ಗುಡ್ಡು ಜನಪದ ಕಲಾ ತಂಡದ ಕಲಾವಿದರು ಶಿವಶೃತಿ ಫಾಗ್ ಗೋಮರ್ ನೃತ್ಯ, ನಾಗಲ್ಯಾಂಡ್‍ನ ಪಾಂಚಾಳಿ ದೆಬ್ಬಾರಾಮಾ ತಂಡ ಮಮಿತಾ ಜನಪದ ನೃತ್ಯ, ಮಹಾರಾಷ್ಟ್ರದ ಅಂಬಾದಾಸ ಶ್ರಾವಣಗೌಳಿ ತಂಡ ಸೋಂಗಿ ಮುಖವಟಿ ನೃತ್ಯ, ಮಧ್ಯಪ್ರದೇಶದ ಮಾಯಾರಾಮ ಗರ್ವೆ ತಂಡ ಗುದುಮಬಾಜಾ ಹಾಗೂ ಬದಾಯಿ ಜನಪದ ನೃತ್ಯ, ಒಡಿಶಾದ ಅಟಾಸಿ ಮಿಶ್ರಾ ಕಲಾ ತಂಡ ಸಂಬಲಪೂರಿ ನೃತ್ಯ, ಬೀದರ್‌ನ ನೂಪುರ ನೃತ್ಯ ಅಕಾಡೆಮಿ ತಂಡ ಬಂಜಾರಾ ನೃತ್ಯ ಹಾಗೂ ನಾಟ್ಯಶ್ರೀ ನೃತ್ಯ ಅಕಾಡೆಮಿ ತಂಡ ಸುಗ್ಗಿ ಕುಣಿತ ಪ್ರದರ್ಶಿಸಿದವು.

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ನೃತ್ಯೋತ್ಸವಕ್ಕೆ ಚಾಲನೆ ನೀಡಿದರು. ಬೀದರ್‌ ಅಭಿವೃದ್ಧಿ ವೇದಿಕೆ ಅಧ್ಯಕ್ಷ ಚನ್ನಬಸಪ್ಪ ಹಾಲಹಳ್ಳಿ ಅಧ್ಯಕ್ಷತೆ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬ್ರಿಮ್ಸ್ ನಿರ್ದೇಶಕ ಡಾ.ಚಂದ್ರಕಾಂತ ಚಿಲ್ಲರ್ಗಿ, ಗುರುನಾನಕ ದೇವ ಫೌಂಡೇಶನ್ ಅಧ್ಯಕ್ಷ ಬಲಬೀರಸಿಂಗ್, ಹರಿಯಾಣಾದ ಜನಸೇವಾ ಕಲಾ ಸಮಿತಿ ಅಧ್ಯಕ್ಷ ಅಶೋಕ ಗುಡ್ಡು, ಗುಲಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯೆ ಪ್ರತಿಭಾ ಚಾಮಾ, ಉದ್ಯಮಿ ಚಂದ್ರಶೇಖರ ಹೆಬ್ಬಾಳೆ ಹಾಗೂ ಕರ್ನಾಟಕ ಕಾಲೇಜು ಕನ್ನಡ ಅಧ್ಯಯನ ಕೇಂದ್ರದ ಮುಖ್ಯಸ್ಥ ಜಗನ್ನಾಥ ಹೆಬ್ಬಾಳೆ ಇದ್ದರು.

ರಾಜ್ಯ ಮಟ್ಟದ ಉತ್ತಮ ಉಪನ್ಯಾಸಕಿ ಪ್ರಶಸ್ತಿ ಪುರಸ್ಕೃತೆ ವಿದ್ಯಾ ಪಾಟೀಲ ಹಾಗೂ ರಾಜ್ಯ ಮಟ್ಟದ ಶಿಕ್ಷಕ ಪ್ರಶಸ್ತಿ ಪುರಸ್ಕೃತ ಶಿವಲಿಂಗ ಹೇಡೆ ಅವರನ್ನು ಸನ್ಮಾನಿಸಲಾಯಿತು. ರಮೇಶ ಹಾಗೂ ತ್ರಿವೇಣಿ ಕೊಳಾರ ಜನಪದ ಗಾಯನ ಪ್ರಸ್ತುತ ಪಡಿಸಿದರು.

ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಸಂಯೋಜಕ ರಾಜಕುಮಾರ ಹೆಬ್ಬಾಳೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಪ್ರೊ.ಎಸ್.ಬಿ. ಬಿರಾದಾರ ಸ್ವಾಗತಿಸಿದರು. ಮಹಾದೇವಿ ಹೆಬ್ಬಾಳೆ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT