ಗುರುವಾರ , ಜೂನ್ 30, 2022
25 °C

ಆಮ್ಲಜನಕ ಕಾನ್ಸೆಂಟ್ರೇಟರ್ ಬ್ಯಾಂಕ್ ಉದ್ಘಾಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್: ನಗರದ ದೇವಿ ಕಾಲೊನಿಯಲ್ಲಿ ಇರುವ ಸತ್ಯ ಸಾಯಿ ಸೇವಾ ಕ್ಷೇತ್ರದಲ್ಲಿ ಆಮ್ಲಜನಕ ಕಾನ್ಸೆಂಟ್ರೇಟರ್ ಯಂತ್ರ ಬ್ಯಾಂಕ್‍ನ್ನು ನಗರಸಭೆ ಸದಸ್ಯ ರಾಜಾರಾಮ ಚಿಟ್ಟಾ ಉದ್ಘಾಟಿಸಿದರು.

ಉಸಿರಾಟದ ಸಮಸ್ಯೆ ಇರುವ ಕೋವಿಡ್ ಸೋಂಕಿತರು ಉಚಿತ ಆಮ್ಲಜನಕ ಕಾನ್ಸೆಂಟ್ರೇಟರ್ ಬ್ಯಾಂಕ್ ಪ್ರಯೋಜನ ಪಡೆಯಬೇಕು ಎಂದು ಹೇಳಿದರು.

ಸತ್ಯ ಸಾಯಿ ಸೇವಾ ಸಮಿತಿಯ ಜಿಲ್ಲಾ ಘಟಕದ ಅಧ್ಯಕ್ಷ ಅಮರನಾಥ ಫುಲೇಕರ್ ಮಾತನಾಡಿ, ಸತ್ಯ ಸಾಯಿ ಸೇವಾ ಸಮಿತಿ ವತಿಯಿಂದ ರಾಜ್ಯದ ಪ್ರತಿ ಜಿಲ್ಲೆಗೆ ಎರಡು ಆಮ್ಲಜನಕ ಕಾನ್ಸೆಂಟ್ರೇಟರ್‍ಗಳನ್ನು ಒದಗಿಸಲಾಗಿದೆ ಎಂದು ತಿಳಿಸಿದರು.

ಆಮ್ಲಜನಕ ಕಾನ್ಸೆಂಟ್ರೇಟರ್ ಅವಶ್ಯಕತೆ ಇರುವವರು ಮೊಬೈಲ್ ಸಂಖ್ಯೆ 9538254247 ಅಥವಾ 9242352566
ಗೆ ಸಂಪರ್ಕಿಸಬಹುದು ಎಂದು ಹೇಳಿದರು.

ಡಾ. ಶಿವಪುತ್ರ ಕಪ್ಲೆ, ಡಾ. ಮಾದಣ್ಣ ಶೇರಿಕಾರ ಮಾತನಾಡಿದರು. ಕಲ್ಯಾಣರಾವ್ ಅಡ್ಡಸಾರೆ, ಪಂಢರ ಮಲ್ಕಾಪುರೆ, ದತ್ತಾತ್ರೇಯ ಉದಗಿರಕರ್, ರಾಜಕುಮಾರ ಬಿರಾದಾರ, ಸುನಿಲ್ ಕುಲಕರ್ಣಿ, ವೀರಶೆಟ್ಟಿ ಕೋಟೆ, ಮುರಳೀಧರ್, ಪ್ರಭಾಕರ ಜೋಶಿ, ಶೇಖರ ಬಿರಾದಾರ, ಸಾಯಿಕೃಷ್ಣ, ವೀಣಾ, ಜಗದೇವಿ ಇದ್ದರು. ಶ್ರೀನಿವಾಸ ಕುಲಕರ್ಣಿ ನಿರೂಪಿಸಿದರು. ಬಾಬುರಾವ್ ಸ್ವಾಗತಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.