ಸೋಮವಾರ, 26 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕ ಪ್ರಭು ಚವಾಣ್ ಪುತ್ರನ ನಿಶ್ಚಿತಾರ್ಥಕ್ಕೆ ಪೊಲೀಸ್ ಬಂದೋಬಸ್ತ್! 

Published 25 ಡಿಸೆಂಬರ್ 2023, 14:10 IST
Last Updated 25 ಡಿಸೆಂಬರ್ 2023, 14:10 IST
ಅಕ್ಷರ ಗಾತ್ರ

ಔರಾದ್: ತಾಲ್ಲೂಕಿನ ಬೋಂತಿ ತಾಂಡಾದಲ್ಲಿ ಪೊಲೀಸ್ ಬಂದೋಬಸ್ತ್ ನಡುವೆ ಶಾಸಕ ಪ್ರಭು ಚವಾಣ್ ಅವರ ಪುತ್ರ ಪ್ರತೀಕ ಚವಾಣ್ ನಿಶ್ಚಿತಾರ್ಥ ನಡೆಯಿತು.

ಒಂದು ಡಿಆರ್ ಸೇರಿದಂತೆ 30ಕ್ಕೂ ಹೆಚ್ಚು ಪೊಲೀಸರು ಹಾಗೂ ಒಬ್ಬರು ಸಿಪಿಐ ಹಾಗೂ ಇಬ್ಬರು ಪಿಎಸ್ಐಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು.

ಶಾಸಕ ಚವಾಣ್ ಅವರ ಮೇಲೆ ಜಮೀನು ಕಬಳಿಕೆ ಆರೋಪ ಹಾಗೂ ತಮ್ಮ ಮಗ ಪ್ರತೀಕನ ಜತೆ ತಮ್ಮ ಮಗಳ ಮದುವೆ ಮಾಡಿಸುವುದಾಗಿ ವಂಚಿಸಿ ಈಗ ಬೇರೊಬ್ಬ ಯುವತಿಯ ಜತೆ ನಿಶ್ಚಿತಾರ್ಥ ಮಾಡುತ್ತಿರುವುದಾಗಿ ಕಿರುಗುಣುವಾಡಿ ಗ್ರಾಮದ ನಿವಾಸಿ ಗಂಗಾಧರ ರಾಠೋಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ನೀಡಿದ್ದರು.

‘ಶಾಸಕ ಚವಾಣ್ ಅವರ ಹೆಸರು ಕೆಡಿಸಲು ಹಾಗೂ ನನ್ನ ನಿಶ್ಚಿತಾರ್ಥ ಕಾರ್ಯಕ್ರಮದ ವೇಳೆ ಗಲಾಟೆ ಮಾಡಿ ಶಾಂತಿ ಭಂಗ ಮಾಡಲು ಕಿರುಗುಣವಾಡಿಯ ಗಂಗಾಧರ ರಾಠೋಡ ಹಾಗೂ ಇತರ ಐವರು ಹೊಂಚು ಹಾಕಿದ್ದು, ಇದಕ್ಕೆ ಅವಕಾಶ ನೀಡಬಾರದು’ ಎಂದು ಪ್ರತೀಕ ಚವಾಣ್ ಹೊಕ್ರಾಣಾ ಠಾಣೆಗೆ ದೂರು ನೀಡಿದ್ದರು.

ಶಾಸಕ ಚವಾಣ್ ಅವರಿಂದ ನಮಗೆ ವಂಚನೆ ಆಗಿರುವುದರಿಂದ ನಾವು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ ಗಂಗಾಧರ ರಾಠೋಡ ಹಾಗೂ ಅವರ ಕುಟುಂಬಸ್ಥರ ಮೇಲೆ ಪೊಲೀಸರು ನಿಗಾ ಇಟ್ಟಿದ್ದಾರೆ. ಈ ಕುಟುಂಬಸ್ಥರು ಉಳಿದುಕೊಂಡಿರುವ ಮಾಳೆಗಾಂವ್ ತಾಂಡಾದಲ್ಲೂ ಪೊಲೀಸರು ಬೀಡುಬಿಟ್ಟಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT