ಬುಧವಾರ, ಸೆಪ್ಟೆಂಬರ್ 18, 2019
23 °C

ಪ್ರಾಚಾರ್ಯರ ಸಂಘಕ್ಕೆ ಮೈಲಾರೆ ಅಧ್ಯಕ್ಷ

Published:
Updated:
Prajavani

ಬೀದರ್: ಪದವಿಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘದ ಜಿಲ್ಲಾ ಹಾಗೂ ತಾಲ್ಲೂಕು ಘಟಕದ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ನಗರದ ಆರ್‌ಆರ್‌ಕೆ ಸ್ವತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಶಿವರಾಜ ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಘಟಕದ ಪದಾಧಿಕಾರಿಗಳು: ಶಿವರಾಜ ಪಾಟೀಲ (ಗೌರವಾಧ್ಯಕ್ಷ), ಹಣಮಂತರಾವ್ ಮೈಲಾರೆ (ಅಧ್ಯಕ್ಷ), ಎಸ್.ಪ್ರಭು, ಚಂದ್ರಕಾಂತ ಗಂಗಶೆಟ್ಟಿ, ಆರ್.ವಿಜಯಕುಮಾರ (ಉಪಾಧ್ಯಕ್ಷರು), ವಿಠ್ಠಲದಾಸ್ ಪ್ಯಾಗೆ (ಪ್ರಧಾನ ಕಾರ್ಯದರ್ಶಿ), ಸುರೇಶ ಅಕ್ಕಣ್ಣ (ಸಹ ಕಾರ್ಯದರ್ಶಿ), ಮನ್ಮಥ ಡೋಳೆ(ಸಂಘಟನಾ ಕಾರ್ಯದರ್ಶಿ), ಶ್ರೀಕಾಂತ ಪಾಟೀಲ (ಖಜಾಂಚಿ), ಡಿ. ಪ್ರತಿಭಾ (ಮಹಿಳಾ ಪ್ರತಿನಿಧಿ), ಶಿವಕುಮಾರ ರಾಜನಾಳೆ, ಡಿ.ನಿಜಾಮೋದ್ದಿನ್, ಪಂಢರಿಹುಗ್ಗಿ, ಸಿದ್ದಣ್ಣ ಮರಪಳ್ಳಿ (ಗೌರವ ಸಲಹೆಗಾರ), ಬಸವರಾಜ
ಮೊಳಕೇರಿ (ಅನುದಾನ ರಹಿತ ಕಾಲೇಜ್‌ ಪ್ರತಿನಿಧಿ). ಚಂದ್ರಕಾಂತ ಶಾಬಾದಕರ್(ರಾಜ್ಯ ಪ್ರತಿನಿಧಿ).

ತಾಲ್ಲೂಕು ಘಟಕದ ಪದಾಧಿಕಾರಿಗಳು: ಎ.ಎಂ. ಹಳ್ಳಿಖೇಡೆ(ಬೀದರ್), ಅಶೋಕ ರಾಜೋಳೆ(ಭಾಲ್ಕಿ), ಜೈಶೇನ್ ಪ್ರಸಾದ (ಬಸವಕಲ್ಯಾಣ), ಉಮಾಕಾಂತ ಮಹಾಜನ (ಹುಮನಾಬಾದ್), ದೇವದಾಸ್ ರಾಠೋಡ್(ಔರಾದ್).

Post Comments (+)