ಭಾನುವಾರ, ಜನವರಿ 26, 2020
18 °C

ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಬೀದರ್‌ನಲ್ಲಿ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಹಾಗೂ ಕೇಂದ್ರ ಸರ್ಕಾರದ ಆಡಳಿತ ವೈಫಲ್ಯ ಖಂಡಿಸಿ
ಜಾತ್ಯತೀತ ನಾಗರಿಕರ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಆರಂಭಿಸಿದರು.

ಓಲ್ಡ್‌ಸಿಟಿಯ ಚೌಬಾರಾದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ಆರಂಭವಾಗಿದ್ದು,  ಗವಾನ್‌ ಚೌಕ್‌ ಮಾರ್ಗವಾಗಿ ಡಾ.ಅಂಬೇಡ್ಕರ್‌ ವೃತ್ತಕ್ಕೆ ತಲುಪಲಿದೆ. ಪ್ರತಿಭಟನೆ ಹಿನ್ನೆಲೆಯಲ್ಲಿ  ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿದೆ.

ವೇದಿಕೆ  ಕಾರ್ಯಾಧ್ಯಕ್ಷ  ಶ್ರೀಕಾಂತ ಸ್ವಾಮಿ, ಅಧ್ಯಕ್ಷ ಬಾಬು ಬಾಬು ಹೊನ್ನಾ, ಮುಬಾಶಿರ್‌ ಸಿಂದೆ, ರಾಜಕುಮಾರ ಮೂಲಭಾರತಿ, ಮನ್ಸೂರ್‌ ಖಾದ್ರಿ ಪಾಲ್ಗೊಂಡಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು