ಬಸವಕಲ್ಯಾಣ (ಬೀದರ್ ಜಿಲ್ಲೆ): ಕಾದಂಬರಿ ಕ್ಷೇತ್ರದಲ್ಲಿ ಹೆಸರು ಮಾಡಿರುವ ಎಸ್.ಎಲ್.ಭೈರಪ್ಪ ಅವರಿಗೆ ಹಾರಕೂಡ ಹಿರೇಮಠ ಸಂಸ್ಥಾನದ ಪ್ರಸಕ್ತ ಸಾಲಿನ `ಶ್ರೀಚೆನ್ನರೇಣುಕ ಬಸವ ಪ್ರಶಸ್ತಿ' ನೀಡಲಾಗುತ್ತಿದೆ.
ಪ್ರಶಸ್ತಿಯು ರೂ.1 ಲಕ್ಷ ನಗದು, 20 ಗ್ರಾಂ ಚಿನ್ನದ ಪದಕ ಮತ್ತು ಫಲಕ ಒಳಗೊಂಡಿದೆ. ಭೈರಪ್ಪನವರ ಸಾಹಿತ್ಯದಲ್ಲಿನ ಅಮೋಘ ಸಾಧನೆ ಗುರುತಿಸಿ ಮಠದ 12 ನೇ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಮಠಾಧೀಶ ಚನ್ನವೀರ ಶಿವಾಚಾರ್ಯರು ತಿಳಿಸಿದ್ದಾರೆ.
ಅಕ್ಟೋಬರ್ 11 ರಂದು ಬೆಳಿಗ್ಗೆ 11 ಗಂಟೆಗೆ ಮಠದಲ್ಲಿ ಆಯೋಜಿಸುವ ಗುರುಲಿಂಗ ಶಿವಾಚಾರ್ಯರ ಸ್ಮರಣೋತ್ಸವದಲ್ಲಿ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಎಂ.ಭಾಸ್ಕರ ಪ್ರಶಸ್ತಿ ಪ್ರದಾನ ಮಾಡುವರು. ಸಾಹಿತಿ ಮ.ನು.ಬಳಿಗಾರ ಅಭಿನಂದನಾ ನುಡಿ ಹೇಳುವರು. ಸಂಗಮೇಶ ಸವದತ್ತಿಮಠ ಎರಡು ಗ್ರಂಥಗಳನ್ನು ಸಹ ಈ ಸಂದರ್ಭದಲ್ಲಿ ಬಿಡುಗಡೆಗೊಳಿಸುವರು ಎಂದಿದ್ದಾರೆ.