ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಏರಿದ ಈರುಳ್ಳಿ, ಇಳಿದ ಬೆಳ್ಳುಳ್ಳಿ

ನುಗ್ಗೆಕಾಯಿ ಬೆಲೆ ಪ್ರತಿ ಕೆ.ಜಿಗೆ ₹ 120
Last Updated 19 ನವೆಂಬರ್ 2022, 15:14 IST
ಅಕ್ಷರ ಗಾತ್ರ

ಬೀದರ್‌:ಎರಡು ವಾರಗಳಿಂದ ತರಕಾರಿ ಮಾರುಕಟ್ಟೆಯಲ್ಲಿ ಬೆಲೆ ಏರಿಳಿತದಲ್ಲಿ ಈರುಳ್ಳಿ,ಬೆಳ್ಳುಳ್ಳಿ ನಡುವೆ ಜುಗಲಬಂದಿ ನಡೆದಿದೆ.ಈ ವಾರ ಈರುಳ್ಳಿ ಬೆಲೆ ಏರಿದರೆ,ಬೆಳ್ಳುಳ್ಳಿ ಬೆಲೆ ಇಳಿದಿದೆ.ನುಗ್ಗೆಕಾಯಿ ಹಾಗೂ ಕರಿಬೇವು ಬೆಲೆಯ ಅಟ್ಟ ಏರಿ ಕುಳಿತಿವೆ.

ತರಕಾರಿ ರಾಜ ಬದನೆಕಾಯಿ ಗ್ರಾಹಕರಿಗೆ ಸ್ಥಿರತೆ ಒದಗಿಸಲು ಪ್ರಯತ್ನಿಸಿದ್ದಾನೆ.ಬೆಂಡೆಕಾಯಿ ಭಂಡತನ ಬೇಡವೆಂದು ಮೌನವಾದರೆ,ಹಿರೇಕಾಯಿ ಹಿರೇತನದಿಂದ ಹಿಂದೆ ಸರಿದಿದೆ.ಹೀಗಾಗಿ ಗ್ರಾಹಕರು ಸ್ವಲ್ಪ ಮಟ್ಟಿಗೆ ನೆಮ್ಮದಿಯಿಂದ ಇರಲು ಸಾಧ್ಯವಾಗಿದೆ.

ಪ್ರತಿ ಕ್ವಿಂಟಲ್‌ಗೆ ನುಗ್ಗೆಕಾಯಿ ಹಾಗೂ ಕರಿಬೇವು ಬೆಲೆ ₹8ಸಾವಿರ,ಈರುಳ್ಳಿ,ಸೌತೆಕಾಯಿ,ಕೊತಂಬರಿ ₹1ಸಾವಿರ ಏರಿಕೆಯಾಗಿದೆ.ಗಜ್ಜರಿ ₹5ಸಾವಿರ,ಮೆಣಸಿನಕಾಯಿ,ಪಾಲಕ್ ₹2ಸಾವಿರ,ಬೆಳ್ಳುಳ್ಳಿ,ಟೊಮೆಟೊ,ಚವಳೆಕಾಯಿ ₹1ಸಾವಿರ ಕಡಿಮೆಯಾಗಿದೆ.
ಮೆಣಸಿನಕಾಯಿ,ಎಲೆಕೋಸು,ಹೂಕೋಸು,ಬದನೆಕಾಯಿ,ಬೆಂಡೆಕಾಯಿ,ಹಿರೇಕಾಯಿ,ಮೆಂತೆ,ಸಬ್ಬಸಗಿ,ತುಪ್ಪದ ಹಿರೇಕಾಯಿ ಬೆಲೆ ಸ್ಥಿರವಾಗಿದೆ.

‘ಕಾರ್ತಿಕ ಮಾಸದ ಪ್ರಯುಕ್ತ ಮಂದಿರಗಳಲ್ಲಿ ದೀಪೋತ್ಸವ ಕಾರ್ಯಕ್ರಮಗಳು ನಡೆದಿವೆ.ಅಮಾವಾಸ್ಯೆಗೆ ಕಾರ್ತಿಕೋತ್ಸವ ಕೊನೆಗೊಳ್ಳಲಿದೆ.ಹೀಗಾಗಿ ಬಹುತೇಕ ತರಕಾರಿ ಬೆಲೆ ಸ್ಥಿರವಾಗಿಯೇ ಇದೆ’ಎಂದುತರಕಾರಿ ವ್ಯಾಪಾರಿ ಶಿವಕುಮಾರ ಮಾಡಗೂಳಹೇಳುತ್ತಾರೆ.

ಹೈದರಾಬಾದ್‌ನಿಂದ ಬೀನ್ಸ್,ಬೀಟ್‌ರೂಟ್‌,ಡೊಣ ಮೆಣಸಿನಕಾಯಿ,ತೊಂಡೆಕಾಯಿ,ಗಜ್ಜರಿ,ನುಗ್ಗೆಕಾಯಿ,ಚವಳೆಕಾಯಿ,ಪಡವಲಕಾಯಿ,ಹಾಗಲಕಾಯಿನಗರದ ತರಕಾರಿ ಸಗಟು ಮಾರುಕಟ್ಟೆಗೆ ಆವಕವಾಗಿದೆ.ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯಿಂದ ಈರುಳ್ಳಿ,ಬೆಳ್ಳುಳ್ಳಿ ಹಾಗೂ ಬೆಳಗಾವಿಯಿಂದ ಹಸಿ ಮೆಣಸಿನಕಾಯಿ,ಕೊತಂಬರಿ ಬಂದಿದೆ.

.............................. .............................. ...........

ತರಕಾರಿ(ಪ್ರತಿ ಕೆ.ಜಿ.)ಕಳೆದ ವಾರ,ಈ ವಾರ
.............................. .............................. ...........
ಈರುಳ್ಳಿ20-40, 40-50
ಬೆಳ್ಳುಳ್ಳಿ40-50, 30-40
ಆಲೂಗಡ್ಡೆ30-40, 30-40
ಮೆಣಸಿನಕಾಯಿ50-60, 50-60
ಎಲೆಕೋಸು30-40, 30-40
ಹೂಕೋಸು50-60, 50-60
ಗಜ್ಜರಿ80-90, 30-40
ಬೀನ್ಸ್60-70, 50-60
ಟೊಮೆಟೊ30-40, 20-30

ಬದನೆಕಾಯಿ50-60, 50-60
ಬೆಂಡೆಕಾಯಿ40-50, 50-60
ಹಿರೇಕಾಯಿ50-60, 50-60
ನುಗ್ಗೆಕಾಯಿ120-140,200-220

ಡೊಣಮೆಣಸಿನ ಕಾಯಿ70-80, 50-60
ಚವಳೆಕಾಯಿ40-50, 30-40
ಸೌತೆಕಾಯಿ20-30, 30-40
ತುಪ್ಪದ ಹಿರೇಕಾಯಿ40-50, 30-40

ಮೆಂತೆ60-80, 60-80
ಸಬ್ಬಸಗಿ50-60, 50-60
ಕರಿಬೇವು30-40, 100-120
ಕೊತಂಬರಿ40-50, 30-40
ಪಾಲಕ್50-60, 30-40

ಪೇಟೆ ಧಾರಣಿ

(ಪ್ರತಿ ಕ್ವಿಂಟಲ್‌– ಕನಿಷ್ಠ– ಗರಿಷ್ಠ)
ಕಡಲೆ ಕಾಳು –₹ 3,410-₹ 4,420
ಉದ್ದಿನ ಕಾಳು₹ 5,500-₹ 7,850
ಹೆಸರು ಕಾಳು₹ 6,500-₹ 7,600
ಜೋಳ₹ 2,700-₹ 3,400
ನುಚ್ಚು ಅಕ್ಕಿ₹ 2,400-₹ 2,800

ಅಕ್ಕಿ₹ 4,400- ₹ 6,000
ಸೋಯಾಬಿನ್₹ 5,100- ₹ 5,500
ತೊಗರಿ₹ 6,700- ₹ 6,700
ಗೋಧಿ₹ 2,700- ₹ 3,200

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT