ಬುಧವಾರ, 29 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸನಾತನ ಧರ್ಮ ಟೀಕಿಸುವವರ ವಿನಾಶ: ಶಾಸಕ ಪ್ರಭು ಚವಾಣ್

Published 9 ಸೆಪ್ಟೆಂಬರ್ 2023, 14:46 IST
Last Updated 9 ಸೆಪ್ಟೆಂಬರ್ 2023, 14:46 IST
ಅಕ್ಷರ ಗಾತ್ರ

ಔರಾದ್ (ಬೀದರ್‌ ಜಿಲ್ಲೆ): 'ಸನಾತನ ಧರ್ಮ ಟೀಕಿಸುವವರ ವಿನಾಶವಾಗಲಿದೆ’ ಎಂದು ಬಿಜೆಪಿ ಶಾಸಕ, ಮಾಜಿ ಸಚಿವ ಪ್ರಭು ಚವಾಣ್ ಹೇಳಿದ್ದಾರೆ.

ಈ ಕುರಿತು ಪ್ರಕಟಣೆ ಹೊರಡಿಸಿದ ಅವರು 'ಸನಾತನ ಸತ್ಯ ಹಾಗೂ ಶಾಶ್ವತ ಧರ್ಮ. ಹೀಗಾಗಿ ತಮಿಳುನಾಡಿನ ಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಂದ ಇದನ್ನು ಅಳಿಸಲು ಸಾಧ್ಯವಿಲ್ಲ. ಸನಾತನ ಧರ್ಮದ ಬಗ್ಗೆ ಅವರು ಹೇಳಿಕೆ ನೀಡುವ ಮೂಲಕ ದೇಶದ ಬಹುಸಂಖ್ಯಾತರ ಭಾವನೆಗೆ ಧಕ್ಕೆ ತಂದಿದ್ದಾರೆ’ ಎಂದರು.

‘ನಮ್ಮ ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ, ಡಾ.ಪರಮೇಶ್ವರ, ಡಾ.ಮಹದೇವಪ್ಪ ಅವರ ನಡೆ ಸರಿಯಲ್ಲ. ಇದು ಸಮಾಜದಲ್ಲಿ ಹುಳಿ ಹಿಂಡುವ ಹಾಗೂ ಧರ್ಮಗಳ ನಡುವೆ ದ್ವೇಷ, ಸಂಘರ್ಷ ನಿರ್ಮಿಸುವಂತಹ ಕೃತ್ಯವಾಗಿದೆ. ಕೂಡಲೇ ಇವರು ರಾಜ್ಯದ ಜನರ ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಇವರನ್ನು ಸಂಪುಟದಿಂದ ವಜಾ ಮಾಡಿ ಕ್ರಿಮಿನಲ್ ಖಟ್ಲೆ ಹೂಡಬೇಕು" ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT