ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿರೇಕಾಯಿ, ಬೆಂಡೆಕಾಯಿ ಬೆಲೆ ಕುಸಿತ

ತರಕಾರಿ ಮಾರುಕಟ್ಟೆಯಲ್ಲಿ ಮೆಂತೆ ಸೊಪ್ಪಿನ ಕಾರಬಾರು
Last Updated 25 ಜನವರಿ 2019, 19:45 IST
ಅಕ್ಷರ ಗಾತ್ರ

ಬೀದರ್‌: ಇಲ್ಲಿಯ ತರಕಾರಿ ಸಗಟು ಮಾರುಕಟ್ಟೆಯಲ್ಲಿ ಹಿರೇಕಾಯಿ ಬೆಲೆ ₹ 2,000 ರಿಂದ 2,500ರ ವರೆಗೆ ಹಾಗೂ ಬೆಂಡೆಕಾಯಿ ಬೆಲೆ ₹ 1,500 ರಿಂದ ₹ 2,000ರ ವರೆಗೆ ಕುಸಿಯಿತು. ಹೀಗಾಗಿ ಗ್ರಾಹಕರು ತಮ್ಮ ಅಚ್ಚುಮೆಚ್ಚಿನ ಬದನೆಕಾಯಿ ಹಾಗೂ ಬೆಂಡೆಕಾಯಿಯನ್ನು ಆಸಕ್ತಿಯಿಂದ ಖರೀದಿಸಿದರು. ರೈತರು ಮಾತ್ರ ಬೆಲೆ ಕುಸಿತದಿಂದಾಗಿ ನಿರಾಶರಾದರು.

ಬಹುತೇಕ ತರಕಾರಿ ಬೆಲೆಗಳಲ್ಲಿ ತುಸು ಕುಸಿತ ಕಂಡು ಬಂದಿತು. ಪ್ರತಿ ಕ್ವಿಂಟಲ್‌ಗೆ ಹೂಕೋಸು ₹ 1 ಸಾವಿರ, ಮೆಣಸಿನಕಾಯಿ, ಆಲೂಗಡ್ಡೆ, ಸಬ್ಬಸಗಿ, ಕರಿಬೇವು, ಕೊತಂಬರಿ, ಮೆಂತೆ ಸೊಪ್ಪು ₹ 500ರ ವರೆಗೆ ಕುಸಿಯಿತು. ಟೊಮೆಟೊ ಬೆಲೆ ಸಹ ₹ 300ರ ವರೆಗೆ ಇಳಿಯಿತು.

ಬದನೆಕಾಯಿ ಹಾಗೂ ಬೆಳ್ಳೊಳ್ಳಿ ಬೆಲೆ ಮಾತ್ರ ಪ್ರತಿ ಕ್ವಿಂಟಲ್‌ಗೆ ₹ 500 ಹೆಚ್ಚಳವಾಯಿತು. ಗ್ರಾಹಕರು ಸಾಮಾನ್ಯವಾಗಿ ಕೊಂಡುಕೊಳ್ಳುವ ಈರುಳ್ಳಿ, ಎಲೆಕೋಸು, ಗಜ್ಜರಿ, ಬೀನ್ಸ್, ಬಿಟ್‌ರೂಟ್, ತೊಂಡೆಕಾಯಿ ಹಾಗೂ ಪಾಲಕ್‌ ಸೊಪ್ಪಿನ ಬೆಲೆ ಸ್ಥಿರವಾಗಿತ್ತು.

ತರಕಾರಿ ಸಗಟು ಮಾರುಕಟ್ಟೆಗೆ ಸೋಲಾಪುರದಿಂದ ಈರುಳ್ಳಿ, ಆಲೂಗಡ್ಡೆ, ಬೆಳ್ಳೂಳ್ಳಿ, ಹೈದರಾಬಾದ್‌ನಿಂದ ಮೆಣಸಿನಕಾಯಿ, ಗಜ್ಜರಿ, ಬೀನ್ಸ್, ಬಿಟ್‌ರೂಟ್, ತೊಂಡೆಕಾಯಿ ಬಂದಿವೆ. ಔರಂಗಾಬಾದ್‌ ಜಿಲ್ಲೆಯಲ್ಲಿ ಬೆಳೆದಿರುವ ಮೆಂತೆ ಸೊಪ್ಪು ಭಾರಿ ಪ್ರಮಾಣದಲ್ಲಿ ಮಾರುಕಟ್ಟೆಗೆ ಆವಕವಾಗಿದೆ.

ಜಿಲ್ಲೆಯ ಭಾಲ್ಕಿ, ಚಿಟಗುಪ್ಪ ಹಾಗೂ ಬೀದರ್‌ ತಾಲ್ಲೂಕಿನಲ್ಲಿ ಬೆಳೆದ ಕೊತಂಬರಿ, ಕರಿಬೇವು, ಸಬ್ಬಸಗಿ, ಹೂಕೋಸು, ಎಲೆಕೋಸು, ಬದನೆಕಾಯಿ ಮಾರುಕಟ್ಟೆಗೆ ಬಂದಿದೆ.

‘ಬೀದರ್‌ ಜಿಲ್ಲೆಯಲ್ಲಿ ಬರ ಇರುವ ಕಾರಣ ತರಕಾರಿ ಕಡಿಮೆ ಬಂದಿದೆ. ನೀರಾವರಿ ಸೌಲಭ್ಯ ಮಾಡಿಕೊಂಡಿರುವ ಹಾಗೂ ಪಾಲಿಹೌಸ್‌ನಲ್ಲಿ ತರಕಾರಿ ಬೆಳೆದ ರೈತರು ಮಾತ್ರ ಬೀದರ್‌ ಮಾರುಕಟ್ಟೆಗೆ ತರಕಾರಿ ಕಳಿಸುತ್ತಿದ್ದಾರೆ’ ಎಂದು ಭಾರತ ವೆಜಿಟೇಬಲ್ ಮಾಲೀಕ ಅಬ್ದುಲ್‌ ಗನಿ ಹೇಳುತ್ತಾರೆ.

‘ಜಿಲ್ಲೆಯಲ್ಲಿ ಈಗಲೂ ಸಾಧಾರಣ ಚಳಿ ಇದೆ. ಹೀಗಾಗಿ ಫೆಬ್ರುವರಿ ಅಂತ್ಯದ ವರೆಗೂ ಗ್ರಾಮೀಣ ಪ್ರದೇಶದಿಂದ ಸ್ವಲ್ಪ ಮಟ್ಟಿಗೆ ತರಕಾರಿ ಬರಲಿದೆ’ ಎಂದು ಅವರು ತಿಳಿಸುತ್ತಾರೆ.

..................................................................................
ಬೀದರ್‌ ತರಕಾರಿ ಸಗಟು ಮಾರುಕಟ್ಟೆ
..................................................................................
ತರಕಾರಿ(ಪ್ರತಿ ಕ್ವಿಂಟಲ್) ಕಳೆದ ವಾರ ಈ ವಾರ
ಈರುಳ್ಳಿ, 1,000-1,500, 1,200-1,500
ಮೆಣಸಿನಕಾಯಿ 2,500-3,000, 2,500-3,000
ಆಲೂಗಡ್ಡೆ 1,200-1,500, 1,500-2,000
ಎಲೆಕೋಸು 1,000-1,500, 1,200-1,500
ಬೆಳ್ಳೂಳ್ಳಿ 2,500-3,000, 3,000-3,500
ಗಜ್ಜರಿ 3,000-3,500, 3,000-3,500
ಬೀನ್ಸ್‌ 4,500-5,000, 4,500-5,000
ಬದನೆಕಾಯಿ 3,000-3,500, 3,500-4,000
ಮೆಂತೆ ಸೊಪ್ಪು 2,500-3,000, 2,000-2,500
ಹೂಕೋಸು 3,000-3,500, 2,000-2,500
ಸಬ್ಬಸಗಿ 3,000-3,500, 2,500-3,000
ಬಿಟ್‌ರೂಟ್‌ 3,500-4,000, 3,500-4,000

ತೊಂಡೆಕಾಯಿ 3,500-4,000, 3,500-4,000
ಕರಿಬೇವು 3,500-4,000, 3,000-3,500
ಕೊತಂಬರಿ 3,000-3,500, 2,000-3,000
ಟೊಮೆಟೊ, 1,200-1,500, 1,000-1,200
ಪಾಲಕ್‌ 2,000-2,500, 2,000-2,500
ಬೆಂಡೆಕಾಯಿ 4,000–4,500, 2,500-3,000
ಹಿರೇಕಾಯಿ 5,000–5,500, 3,000-3,500

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT