ಶುಕ್ರವಾರ, ಜುಲೈ 1, 2022
23 °C

ವಿಶ್ವ ಪರಿಸರ ದಿನಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೀದರ್‌: ಇಲ್ಲಿಯ ಜಿಲ್ಲಾ ಕ್ರೀಡಾಂಗಣ ಸಮೀಪದ ಗುರುನಾನಕ ಪಬ್ಲಿಕ್ ಶಾಲೆಯ ಆವರಣದಲ್ಲಿ ವಿಶ್ವ ಪರಿಸರ ದಿನಾಚಾರಣೆ ನಿಮಿತ್ತ ಸಸಿಗಳನ್ನು ನೆಡಲಾಯಿತು.

ಗುರುನಾನಕ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ರೇಷ್ಮಾಕೌರ್ ಮಾತನಾಡಿ, ‘ಶುದ್ಧ ಪರಿಸರಕ್ಕಾಗಿ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಬೆಳೆಸಬೇಕು’ ಎಂದರು.

ಶಾಲೆಯ ಪ್ರಾಚಾರ್ಯ ಎನ್‌.ರಾಜು ಹಾಗೂ ಶಾಲಾ ಸಿಬ್ಬಂದಿ ಇದ್ದರು.

ತೋಟಗಾರಿಕೆ ಕಾಲೇಜು:

ಬಿದರ್‌ನ ತೋಟಗಾರಿಕೆ ಕಾಲೇಜಿನ ಆವರಣದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ಘಟಕ, ತೋಟಗಾರಿಕೆ ವಿಸ್ತರಣಾ ಶಿಕ್ಷಣ ಘಟಕದ ಆಶ್ರಯದಲ್ಲಿ ಶನಿವಾರ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಕೋವಿಡ್‌ನಿಂದ ಗುಣಮುಖರಾದವರು ಕಾಲೇಜಿನ ಆವರಣದಲ್ಲಿ ಸಸಿಯನ್ನು ನೆಟ್ಟರು. ಕಾಲೇಜಿನ ಡೀನ್‌ ಹಾಗೂ ಸಿಬ್ಬಂದಿ ಇದ್ದರು.

ಖಾಜಾಪುರದಲ್ಲಿ ಸಸ್ಯಾರೋಪಣ

ಬೀದರ್ ತಾಲ್ಲೂಕಿನ ಖಾಜಾಪುರ ಗ್ರಾಮದಲ್ಲಿ ವಿಶ್ವ ಪರಿಸರ ದಿನಚಾರಣೆ ಅಂಗವಾಗಿ ಸಸ್ಯಾರೋಪಣ ಮಾಡಲಾಯಿತು.

ಉದ್ಯಮಿ ವಿಜಯಕುಮಾರ ಪಾಟೀಲ ಖಾಜಾಪುರ, ಗ್ರಾಮ ಪಂಚಾಯಿತಿ ಅಧಕ್ಷ ನಾಗಶೆಟ್ಟಿ ಬಿರಾದಾರ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶ್ರೀನಿವಾಸ ದೇಶಪಾಂಡೆ, ಶಿವರಾಜ ಜಮಾದಾರ, ಕಂಟೆಪ್ಪ ಪಾಟೀಲ, ಇಮಾನುವೆಲ್ ಕಟ್ಟಿಮನಿ, ಸುಂದರ ಹಲಗೆ, ಸಂಜುಕುಮಾರ, ಧನರಾಜ ಕೋಳಿ, ಪುಂಡಲೀಕ ಜಮಾದಾರ, ಶಿವರಾಜ, ಪ್ರಶಾಂತ, ಸಚಿನ್ ಬಸವರಾಜ ಮತ್ರೆ ಹಾಗೂ ಪಂಡಿತ ಮಾಳೆಗಾಂವ ಇದ್ದರು.

ಸಸಿ ನೆಟ್ಟು ವಿಶ್ವ ಪರಿಸರ ದಿನಾಚರಣೆ

ಜನವಾಡ: ಹಣ್ಮು ಪಾಜಿ ಗೆಳೆಯರ ಬಳಗದ ವತಿಯಿಂದ ಬೀದರ್ ತಾಲ್ಲೂಕಿನ ಶಹಾಪುರದಲ್ಲಿ ಸಸಿ ನೆಟ್ಟು ವಿಶ್ವ ಪರಿಸರ ದಿನ ಆಚರಿಸಲಾಯಿತು.

ಗ್ರಾಮದ ತಮ್ಮ ಹೊಲದಲ್ಲಿ ನಡೆದ ಕಾರ್ಯಕ್ರಮಕ್ಕೆ ಚಿತ್ರನಟ ಹಣ್ಮು ಪಾಜಿ ಸಸಿ ನೆಟ್ಟು ಚಾಲನೆ ನೀಡಿದರು.

ಪರಿಸರ ಉಳಿದರೆ ಮಾತ್ರ ಮನುಕುಲಕ್ಕೆ ಉಳಿಗಾಲ ಇದೆ. ಪರಿಸರ ಸಮತೋಲನ ಕಾಪಾಡಲು ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಬೇಕು ಎಂದು ಸಲಹೆ ಮಾಡಿದರು.

‘ಪರಿಸರ ಚೆನ್ನಾಗಿದ್ದರೆ ಶುದ್ಧ ಗಾಳಿ ದೊರಕುತ್ತದೆ. ಕಾಲ ಕಾಲಕ್ಕೆ ಮಳೆ, ಬೆಳೆಯೂ ಬರುತ್ತದೆ’ ಎಂದು ತಿಳಿಸಿದರು.

ಒಟ್ಟು 150 ತೆಂಗು, ಮಾವಿನ ಸಸಿಗಳನ್ನು ನೆಡಲಾಯಿತು. ಬಳಗದ ನರಸಿಂಗ್‍ರಾಜ್, ಸಂಗಮೇಶ, ಅಭಿಷೇಕ, ರಾಕೇಶ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.