ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಿಳೆ ಹೊಟ್ಟೆಯಲ್ಲಿ 5 ಕೆ.ಜಿ. ಗಡ್ಡೆ: ಯಶಸ್ವಿ ಶಸ್ತ್ರಚಿಕಿತ್ಸೆ

Last Updated 1 ಆಗಸ್ಟ್ 2013, 12:41 IST
ಅಕ್ಷರ ಗಾತ್ರ

ಬೀದರ್: ಇಲ್ಲಿಯ ಗುರುನಗರದಲ್ಲಿ  ಇರುವ ಮಾರುತಿ ಹೆಲ್ತ್ ವೆಲ್‌ಫೇರ್ ಟ್ರಸ್ಟ್ ಸಂಚಾಲಿತ ಡಾ. ಸಿ. ವಿಶ್ವಾಸ್ ಮೆಮೋರಿಯಲ್ ನರ್ಸಿಂಗ್ ಹೋಮ್‌ನಲ್ಲಿ ಬುಧವಾರ ಶಸ್ತ್ರಚಿಕಿತ್ಸೆ ಮೂಲಕ ಬಡ ಮಹಿಳೆಯೊಬ್ಬರ ಹೊಟ್ಟೆಯಲ್ಲಿದ್ದ 5 ಕೆ.ಜಿ.ಯ ಗಡ್ಡೆಯನ್ನು ಯಶಸ್ವಿಯಾಗಿ ಹೊರ ತೆಗೆಯಲಾಗಿದೆ.

ಹುಮನಾಬಾದ್ ತಾಲ್ಲೂಕಿನ ಘಾಟಬೋರಾಳ್ ಗ್ರಾಮದ 40 ವರ್ಷದ ಬಡ ಮಹಿಳೆ ಕಮಳಾಬಾಯಿ ಜ್ಞಾನೇಶ್ವರ್ ಶಸ್ತ್ರಚಿಕಿತ್ಸೆಗೊಳಗಾದವರು.

ಕೂಲಿ ಕೆಲಸ ಈ ಕುಟುಂಬಕ್ಕೆ ಆಧಾರವಾಗಿತ್ತು. ಕಳೆದ ಒಂದು ವರ್ಷದಿಂದ ಕಮಳಾಬಾಯಿ ಅವರ ಹೊಟ್ಟೆ ಗರ್ಭಿಣಿಯಂತೆ ಬೆಳೆಯತೊಡಗಿತ್ತು. ವಿವಿಧೆಡೆ ಅಲೆದಾಡಿದರೂ ಪ್ರಯೋಜನ ಆಗಿರಲಿಲ್ಲ. ಮಹಾರಾಷ್ಟ್ರದ ಉಮರ್ಗಾದಲ್ಲಿ ತೋರಿಸಿದಾಗ 20-30 ಸಾವಿರ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಲಾಗಿತ್ತು. ಬಳಿಕ ಅಲ್ಲಿಂದ ವಾಪಸ್ಸಾದ ಬಡ ಕುಟುಂಬ ಮೂರು ದಿನಗಳ ಹಿಂದೆ ತಮ್ಮ ನರ್ಸಿಂಗ್ ಹೋಂನದಲ್ಲಿ ದಾಖಲಾಗಿದ್ದು, ಬುಧವಾರ ಅರ್ಧ ಗಂಟೆ `ಓವರಿನ್ ಟ್ಯೂಮರ್' ಶಸ್ತ್ರಚಿಕಿತ್ಸೆ ನಡೆಸಿ ಮಹಿಳೆಯ ಹೊಟ್ಟೆಯಲ್ಲಿದ್ದ 5 ಕೆ.ಜಿ. ಯ ಗಡ್ಡೆ ಹೊರ ತೆಗೆಯಲಾಗಿದೆ ಎಂದು ನರ್ಸಿಂಗ್ ಹೋಂ ಮುಖ್ಯಸ್ಥರು ತಿಳಿಸಿದ್ದಾರೆ.

ತಜ್ಞ ವೈದ್ಯ ಡಾ. ಭೀಮರಾವ್ ಸಿಂಗೋಡೆ ಹಾಗೂ ಅರವಳಿಕೆ ತಜ್ಞ ಡಾ. ಬಿರಾದಾರ್ ಅವರನ್ನು ಒಳಗೊಂಡ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ. ಅತ್ಯಂತ ಕಡಿಮೆ ವೆಚ್ಚದಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಸದ್ಯ ಮಹಿಳೆಯ ಮುಖದಲ್ಲಿ ಮಂದಹಾಸ ಮೂಡಿದೆ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT