ಬೀದರ್: ಪ್ರಸಕ್ತ ಸಾಲಿನ ಸಿ.ಬಿ.ಎಸ್.ಸಿ. ಹತ್ತನೇ ತರಗತಿ ಪರೀಕ್ಷೆಯಲ್ಲಿ ಸಿಜಿಪಿಎ 10 ಅಂಕ ಪಡೆದ ಗುರುನಾನಕ್ ಪಬ್ಲಿಕ್ ಶಾಲೆ 23 ವಿದ್ಯಾರ್ಥಿಗಳಿಗೆ ಗುರುನಾನಕ್ ಪದವಿಪೂರ್ವ ಕಾಲೇಜಿನಲ್ಲಿ ಪಿಯುಸಿ ಎರಡೂ ವರ್ಷ ಉಚಿತ ಶಿಕ್ಷಣ ನೀಡಲಾಗುವುದು ಎಂದು ಗುರುನಾನಕ್ ಪಬ್ಲಿಕ್ ಶಾಲೆ ಅಧ್ಯಕ್ಷ ಸರ್ದಾರ್ ಬಲ್ಬೀರ್ಸಿಂಗ್ ತಿಳಿಸಿದರು.

ನಗರದ ಗುರುನಾನಕ್ ಪಬ್ಲಿಕ್ ಶಾಲೆಯಲ್ಲಿ ಮಂಗಳವಾರ ನಡೆದ ಸಿ.ಬಿ.ಎಸ್.ಸಿ. ಹತ್ತನೇ ತರಗತಿ ಪರೀಕ್ಷೆ ಸಾಧಕರ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.

ಪರೀಕ್ಷೆಯಲ್ಲಿ ದೊರೆತ ಫಲಿತಾಂಶಕ್ಕೆ ಶಾಲೆ ಬೋಧಕ ಸಿಬ್ಬಂದಿ ಪರಿಶ್ರಮವೇ ಕಾರಣವಾಗಿದೆ. ಹೀಗಾಗಿ ಬೋಧಕ ಸಿಬ್ಬಂದಿಗೆ ಶೇ 20 ರಷ್ಟು ಬೋನಸ್ ನೀಡಲು ಉದ್ದೇಶಿಸಲಾಗಿದೆ ಎಂದರು.

ಸಿ.ಬಿ.ಎಸ್.ಸಿ.ಯಲ್ಲಿ ಪರೀಕ್ಷೆ ಬರೆದ ಎಲ್ಲ 218 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಪೈಕಿ 130 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ ಎಂದು ಹೇಳಿದರು.

ಆಡಳಿತ ಮಂಡಳಿ ಉಪಾಧ್ಯಕ್ಷೆ ರೇಷ್ಮಾ ಕೌರ್, ಪ್ರಾಚಾರ್ಯ ಗೀತಾ ಡಿ. ಮತ್ತಿತರರು ಇದ್ದರು. ಸಿ.ಬಿ.ಎಸ್.ಸಿ. ಹತ್ತನೇ ತರಗತಿಯಲ್ಲಿ ಸಿಜಿಪಿಎ 10 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.