ಮಂಗಳೂರು: ನಗರದ ಎಜಿ ಆಸ್ಪತ್ರೆಯ ರಕ್ತಕೇಂದ್ರದಲ್ಲಿ ರಕ್ತದಾನಿಗಳ ದಿನಾಚರಣೆ ಈಚೆಗೆ ನಡೆಯಿತು. ಕೋವಿಡ್–19ರ ಕಾರಣದಿಂದ ಮೂರು ವರ್ಷಗಳ ನಂತರ ಮೊದಲ ಬಾರಿ ಈ ಕಾರ್ಯಕ್ರಮ ನಡೆಯಿತು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕಿಶೋರ್ ಕುಮಾರ್ ಮುಖ್ಯ ಅತಿಥಿಗಳಾಗಿದ್ದರು. ಡಾ.ಅರವಿಂದ್ ಪಿ ಅವರು ‘ರಕ್ತ ಪೂರಣ ಔಷಧದ ಬಗ್ಗೆ ಸಾಮಾನ್ಯ ಪ್ರಶ್ನೆಗಳಿಗೆ ಸರಳೀಕೃತ ಉತ್ತರ’ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ರಕ್ತದಾನದ ಕುರಿತ ಸಂದೇಹಗಳಿಗೆ ಉತ್ತರ ನೀಡಿದರು.

ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಸ್ವಯಂಪ್ರೇರಿತ ರಕ್ತದಾನಿಗಳ ಗುರುತು ಚೀಟಿ ಬಿಡುಗಡೆ ಮಾಡಲಾಯಿತು. ಈ ಗುರುತು ಚೀಟಿ ತುರ್ತು ಸಂದರ್ಭದಲ್ಲಿ ರಕ್ತದ ಗುಂಪಿನ ಮಾಹಿತಿ ನೀಡಲು ಸಹಕಾರಿಯಾಗಿದೆ. ಈ ಭಾಗದಲ್ಲಿ ಇದೇ ಮೊದಲ ಬಾರಿ ಇದನ್ನು ಜಾರಿಗೆ ತರಲಾಗುತ್ತಿದೆ.

ಆಸ್ಪತ್ರೆಯ ವೈದಕೀಯ ನಿರ್ದೇಶಕ ಡಾ.ಪ್ರಶಾಂತ್ ಮಾರ್ಲ ರಕ್ತಪೂರಣ ಸೇವೆಯ ಆಧುನೀಕರಣ ಹಾಗೂ ಸುರಕ್ಷಿತ ರಕ್ತ ಮರುಪೂರಣದ ಅಗತ್ಯದ ಬಗ್ಗೆ ಮಾಹಿತಿ ನೀಡಿದರು. ಆಸ್ಪತ್ರೆಯ ರಕ್ತಕೇಂದ್ರ ಎನ್ಎಬಿಎಚ್ನಿಂದ ಐದು ವರ್ಷಗಳ ಹಿಂದೆಯೇ ಮಾನ್ಯತೆ ಪಡೆದಿದ್ದು ಇದನ್ನು ಸಾಧಿಸಿರುವ ಮಂಗಳೂರಿನಲ್ಲಿ ಮೊದಲು ಮತ್ತು ಕರ್ನಾಟಕದ 6ನೇ ಸಂಸ್ಥೆಯಾಗಿದೆ. ರಕ್ತಕೇಂದ್ರದ ವ್ಯವಸ್ಥಾಪಕ ಪಿ.ಅರ್. ಗೋಪಾಲಕೃಷ್ಣ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.