ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿರ್ಸಿ(ಎ) ಗ್ರಾಮದಲ್ಲಿ ಬುತ್ತಿ ಜಾತ್ರೆ

Last Updated 22 ಆಗಸ್ಟ್ 2022, 16:37 IST
ಅಕ್ಷರ ಗಾತ್ರ


ಜನವಾಡ: ಉತ್ತಮ ಮಳೆ, ಬೆಳೆಗೆ ದೇವರಲ್ಲಿ ಪ್ರಾರ್ಥಿಸಿ ಬೀದರ್ ತಾಲ್ಲೂಕಿನ ಸಿರ್ಸಿ(ಎ) ಗ್ರಾಮಸ್ಥರು ಬುತ್ತಿ ಜಾತ್ರೆ ನಡೆಸಿದರು.
ತಲೆ ಮೇಲೆ ಬುತ್ತಿ ಹೊತ್ತುಕೊಂಡು ಭಜನೆ ಮಾಡುತ್ತ 2 ಕಿ.ಮೀ. ದೂರದ ಗುಡ್ಡದಲ್ಲಿ ಇರುವ ಸಿದ್ಧೇಶ್ವರ ದೇವಸ್ಥಾನಕ್ಕೆ ಬಂದರು.
ಗುಡ್ಡದಲ್ಲಿ ಹರಿಯುವ ಝರಿಯಿಂದ ಬಿಂದಿಗೆಯಲ್ಲಿ ನೀರು ತುಂಬಿಕೊಂಡು ತಂದರು. ದೇವರಿಗೆ ನೈವೇದ್ಯ ಸಮರ್ಪಿಸಿದರು.
ಒಂದೆಡೆ ಕುಳಿತು ಹೋಳಿಗೆ, ತುಪ್ಪ, ಹಾಲು, ಸಜ್ಜೆ ರೊಟ್ಟಿ, ಧಪಾಟಿ, ಚಿತ್ರಾನ್ನ, ಮಾಲಿದ್ದಿ ಮೊದಲಾದ ತಿನಿಸುಗಳನ್ನು ಸವಿದರು.
ಕಬಡ್ಡಿ, ಲಗೋರಿ, ಕಣ್ಣಾ ಮುಚ್ಚಾಲೆ, ಚೆಂಡಿನ ಆಟ, ಕ್ರಿಕೆಟ್, ಕುಂಟೆ ಪಿಲ್ಲಿ ಆಟಗಳನ್ನು ಆಡಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT