ಕೆನಾನ್ ಇಂಡಿಯಾದಿಂದ ನಾಲ್ಕು ಹಳ್ಳಿ ದತ್ತು

7
ಮಹರಾಜರ ಕಟ್ಟೆ ಗ್ರಾಮವನ್ನು ದತ್ತು ಪಡೆದ 4ನೇ ವರ್ಷದ ವಾರ್ಷಿಕೋತ್ಸವ

ಕೆನಾನ್ ಇಂಡಿಯಾದಿಂದ ನಾಲ್ಕು ಹಳ್ಳಿ ದತ್ತು

Published:
Updated:
Deccan Herald

ಕನಕಪುರ: ‘ಭಾರತ ದೇಶದಲ್ಲಿನ ತೀರ ಹಿಂದುಳಿದ ಕೆಲವು ಹಳ್ಳಿಗಳನ್ನು ದತ್ತುಪಡೆದು ಅವುಗಳನ್ನು ಅಭಿವೃದ್ಧಿ ಪಡಿಸಲಾಗುತ್ತಿದೆ. ಇದು ಬೇರೆಯವರಿಗೆ ಸ್ಪೂರ್ತಿಯಾಗಿ ಅವರು ಹಳ್ಳಿಗಳನ್ನು ದತ್ತು ಪಡೆಯಲಿ ಎಂಬುದು ನಮ್ಮ ಉದ್ದೇಶವಾಗಿದೆ’ ಎಂದು ಕೆನಾನ್‌ ಇಂಡಿಯಾದ ಅಧ್ಯಕ್ಷ ಕಝೂಟಡಾ ಕೊಬಾಯಶಿ ತಿಳಿಸಿದರು.

ನಗರದ ಮಹರಾಜರ ಕಟ್ಟೆಯಲ್ಲಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ನಡೆದ ಕೆನಾನ್‌ ಇಂಡಿಯಾ ಮಹರಾಜರ ಕಟ್ಟೆ ಗ್ರಾಮವನ್ನು ದತ್ತು ಪಡೆದ 4ನೇ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.

ಸಂಸ್ಥೆಯು ಮಹರಾಜರ ಕಟ್ಟೆ ಗ್ರಾಮವನ್ನು ದತ್ತು ಪಡೆಯಿತು. ಆಗ ಗ್ರಾಮವು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿತ್ತು. ಸಂಸ್ಥೆಯು ಗ್ರಾಮದ ಅಭಿವೃದ್ಧಿ ಜತೆಗೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸುತ್ತಾ ಬಂದಿದೆ. ಅದರ ಪರಿಣಾಮವಾಗಿ ಶಾಲೆ ಮತ್ತು ಗ್ರಾಮ ತುಂಬಾ ಬದಲಾವಣೆಯನ್ನು ಕಂಡಿದೆ ಎಂದು ಸಂತಸ ವ್ಯಕ್ತಪಡಿಸಿದರು.

ಸಂಸ್ಥೆಯು ನೌಕರರನ್ನು ಈ ಕಾರ್ಯಕ್ರಮದೊಂದಿಗೆ ಜೋಡಿಸಿಕೊಳ್ಳಲಿದ್ದು ಅವರು ಗ್ರಾಮದ ಅಭಿವೃದ್ಧಿಯಲ್ಲಿ ಶ್ರಮಿಸಬೇಕು. ಇದೇ ಕಾರಣದಿಂದ ಒಂದೂವರೆ ತಾಸಿನಲ್ಲಿ ಮಹರಾಜರ ಕಟ್ಟೆಗೆ ಬರಬಹುದಾಗಿದ್ದು ಹಾಗೂ ಇಲ್ಲಿನ ಪರಿಸ್ಥಿತಿಯನ್ನು ಅವಲೋಕಿಸಿ ಈ ಹಳ್ಳಿಯನ್ನು ಆಯ್ಕೆ ಮಾಡಿಕೊಂಡಿರುವುದಾಗಿ ತಿಳಿಸಿದರು.

‘ರಚನಾತ್ಮಕ ಕಾರ್ಯಕ್ರಮಗಳ ಮೂಲಕ ಕೆನಾನ್ ಇಂಡಿಯಾ ಸಮುದಾಯ ಅಭಿವೃದ್ಧಿ ಕೇಂದ್ರಿತ ಚಟುವಟಿಕೆಗಳ ಮೂಲಕ ಸಮುದಾಯವನ್ನು ಭವಿಷ್ಯಕ್ಕೆ ಸಜ್ಜುಗೊಳಿಸುತ್ತಿದೆ. ಗ್ರಾಮದ ಅಗತ್ಯ ಮತ್ತು ಅನಿವಾರ್ಯತೆ ಅರ್ಥ ಮಾಡಿಕೊಂಡು ಮಕ್ಕಳ ಸರ್ವಾಂಗೀಣ ಬೆಳವಣಿಗೆ ಮತ್ತು ಶಿಕ್ಷಣದ ಮೂಲ ಸೌಲಭ್ಯಕ್ಕೆ ಒತ್ತು ನೀಡಿದೆ. ಮಕ್ಕಳ ನಗು ಮೊಗ, ಶಾಲೆಯಿಂದ ಹೊರಗೆ ಉಳಿದವರ ಸಂಖ್ಯೆ ಗಣನೀಯವಾಗಿ ಕುಸಿದಿರುವುದು, ಹಾಜರಾತಿ ಸುಧಾರಣೆ, ಹೆಣ್ಣುಮಕ್ಕಳ ದಾಖಲಾತಿ ಹೆಚ್ಚಳ ಮೊದಲಾದವು ನಮ್ಮ ಯಶಸ್ಸನ್ನು ಸಾರಿ ಹೇಳುತ್ತವೆ. ಅವರನ್ನು ಮತ್ತಷ್ಟು ಹುರಿದುಂಬಿಸಿ, ಕನಸುಗಳನ್ನು ಬಿತ್ತಿ, ಕಠಿಣ ಪರಿಶ್ರಮಿಗಳಾಗಿ ಗುರಿ ತಲುಪುವ ಕನಸು ಬಿತ್ತುವ ನಿಟ್ಟಿನಲ್ಲಿ ಪ್ರಯತ್ನ ಸಾಗುತ್ತದೆ’
ಎಂದರು.

ಸ್ಪರ್ಧೆ: ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆ ಮತ್ತು `ಪುಸ್ತಕದಾಚೆಗಿನ ಕಲಿಕೆ' ಅಂಗವಾಗಿ ಹಲವು ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಿತ್ತು. ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವುದರಿಂದ `ಸ್ವಾತಂತ್ರ್ಯ' ಪರಿಕಲ್ಪನೆಯ ಹಲವು ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದರು.

ಓಟ, ಲಿಂಬೆಹಣ್ಣು ಓಟ ಮೊದಲಾದ ಸ್ಪರ್ಧೆಗಳನ್ನು ಪಠ್ಯೇತರ ಚಟುವಟಿಕೆ ಉತ್ತೇಜಿಸುವ ಸಲುವಾಗಿ ಆಯೋಜಿಸಲಾಗಿತ್ತು. ಎಲ್ಲ ಸ್ಪರ್ಧಿಗಳಿಗೂ ಕೊಬಾಯಶಿ ಅವರು ಬಹುಮಾನ ನೀಡಿ ಪ್ರೋತ್ಸಾಹಿಸಿದರು.

ಕಝೂಟಡಾ ಕೊಬಾಯಶಿ, ಅಧ್ಯಕ್ಷ ಮತ್ತು ಸಿಇಒ, ಕೆನಾನ್ ಇಂಡಿಯಾ ಅವರು ಸಂಸ್ಥೆಯ ಬೆಂಗಳೂರು ಘಟಕದ 50 ಉದ್ಯೋಗಿಗಳು ಮತ್ತು ಐ.ಎಸ್.ಡಿ.ಸಿ (ಇಂಡಿಯಾ ಸಿಸ್ಟಮ್ಸ್ ಡೆವಲಪ್‍ಮೆಂಟ್ ಸೆಂಟರ್) ಅಧಿಕಾರಿಗಳ ಜತೆ ಗ್ರಾಮಕ್ಕೆ ಭೇಟಿ ನೀಡಿದ್ದರು.

ಶಿಕ್ಷಣಕ್ಕೆ ಸಂಬಂಧಿಸಿ 1ರಿಂದ 7ನೇ ತರಗತಿಯ 74 ಮಕ್ಕಳಿಗೆ ಕಲಿಕಾ ಮತ್ತು ಕ್ರೀಡಾ ಸಾಮಗ್ರಿಗಳನ್ನು ಒಳಗೊಂಡ `ಸಂಪನ್ಮೂಲ ಕೇಂದ್ರ' ತೆರೆಯಲಾಗಿದೆ. ಇಂಗ್ಲೀಷ್, ಗಣಿತ ಮತ್ತು ವಿಜ್ಞಾನ ವಿಷಯಗಳಲ್ಲಿ ಸಮರ್ಪಣಾ ಮನೋಭಾದ ಶಿಕ್ಷಕರ ನೇಮಕದ ಮೂಲಕ ಈ ವಿಷಯಗಳಲ್ಲಿ ಸಮಸ್ಯೆ ಎದುರಿಸುತ್ತಿದ್ದ ಗುರುತಿಸಲಾದ ಮಕ್ಕಳಿಗೆ ಕಲಿಕಾ ನೆರವು ಒದಗಿಸಲಾಗುತ್ತಿದೆ. ಮಕ್ಕಳಲ್ಲಿ ಪತ್ರಿಕೆಗಳನ್ನು ಓದುವ ಹವ್ಯಾಸ ಬೆಳೆಸಲಾಗಿದೆ ಮತ್ತು ಲರ್ನಿಂಗ್ ಅನ್ನು ಅವರ ಕಲಿಕೆಯ ಭಾಗವಾಗಿದೆ.

 

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !