ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟಕ್ಕೆ 102 ವರ್ಷದ ವೃದ್ಧೆಯೊಬ್ಬರು ಪಾದಯಾತ್ರೆ ಮಾಡಿ ಗಮನ ಸೆಳೆದಿದ್ದಾರೆ.
ಬುಧವಾರ ತಾಳಬೆಟ್ಟದಿಂದ ಬೆಟ್ಟದವರೆಗೆ 18 ಕಿ.ಮೀ ದೂರವನ್ನು ಕಾಲ್ನಡಿಗೆಯಲ್ಲಿ ಕ್ರಮಿಸಿದ್ದಾರೆ.
ಭಕ್ತರೊಬ್ಬರು ಅಜ್ಜಿ ಪಾದಯಾತ್ರೆ ಮಾಡುತ್ತಿರುವ ವಿಡಿಯೊ ಚಿತ್ರೀಕರಿಸಿದ್ದಾರೆ. ಅವರು ತಿಪಟೂರು ಮೂಲದವರು.
‘ದೇಶಕ್ಕೆ ಒಳ್ಳೆಯದಾಗಬೇಕು. ರೈತರಿಗೆ ಒಳ್ಳೆಯದಾಗಬೇಕು, ಕಾಡು ಪ್ರಾಣಿಗಳಿಗೆ ನೀರಿಲ್ಲ, ಎಲ್ಲರಿಗೂ ಒಳ್ಳೆದಾಗಬೇಕು ಎಂದು ಬೇಡಿಕೊಂಡು ಹೋಗುತ್ತಿದ್ದೇನೆ’ ಎಂದು ವೃದ್ಧೆ ಹೇಳಿದ್ದಾರೆ.
ಪ್ರಧಾನಿ ಯಾರಾಗಬೇಕು ಎಂದು ಕೇಳಿದ್ದಕ್ಕೆ ‘ಮೋದಿ ಬಂದರೆ ದೇಶಕ್ಕೆ ಒಳ್ಳೆಯದಾಗುತ್ತದೆ’ ಎಂದು ಹೇಳಿದ್ದಾರೆ.
ವಿಡಿಯೊ, ಅಜ್ಜಿಯ ಹೇಳಿಕೆ ಈಗ ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ