ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಾಣಹಳ್ಳಿಯಲ್ಲಿ ಬಂಡಿ ಉತ್ಸವ

Published 24 ಮಾರ್ಚ್ 2024, 16:15 IST
Last Updated 24 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಸಂತೇಮರಹಳ್ಳಿ: ಸಮೀಪದ ಬಾಣಹಳ್ಳಿಯಲ್ಲಿ ಸತ್ಯವತಿ ಹಬ್ಬದ ಅಂಗವಾಗಿ ಭಾನುವಾರ ಸಂಜೆ ಬಂಡಿ ಉತ್ಸವ ನಡೆಯಿತು.

ದೇವಸ್ಥಾನ ಆವರಣದಲ್ಲಿ ಬಂಡಿಗೆ ವಿವಿಧ ಬಣ್ಣದ ಬಟ್ಟೆಗಳಿಂದ ಬಾಳೆದಿಂಡು, ಎಳನೀರು, ಮಾವಿನಸೊಪ್ಪು ಹಾಗೂ ವಿವಿಧ ಬಗೆಯ ಹೂಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ನಂತರ ವಾದ್ಯ ಮೇಳಗಳ ಮೂಲಕ ಮುಖ್ಯ ರಸ್ತೆಯಲ್ಲಿ ಬಂಡಿಯ ಮೆರವಣಿಗೆ ಮಾಡಲಾಯಿತು. ಗ್ರಾಮದಲ್ಲಿ ಎತ್ತುಗಳನ್ನು ಹೊಂದಿರುವ ರೈತರು ತಮ್ಮ ಎತ್ತುಗಳನ್ನು ಅಲಂಕರಿಸಿ ಬಂಡಿಗೆ ಕಟ್ಟಿ ಮೆರವಣಿಗೆ ನಡೆಸಿದರು.

ಸಂತೇಮರಹಳ್ಳಿ ಸಮೀಪದ ಬಾಣಹಳ್ಳಿಯಲ್ಲಿ ಸತ್ಯವತಿ ಬಂಡಿ ಉತ್ಸವ ನಡೆಯಿತು
ಸಂತೇಮರಹಳ್ಳಿ ಸಮೀಪದ ಬಾಣಹಳ್ಳಿಯಲ್ಲಿ ಸತ್ಯವತಿ ಬಂಡಿ ಉತ್ಸವ ನಡೆಯಿತು

ಬಂಡಿ ಮೆರವಣಿಗೆ ಹಿನ್ನೆಲೆಯಲ್ಲಿ ಬಂಡಿ ಸಾಗುವ ದಾರಿಯುದ್ದಕ್ಕೂ ಮಹಿಳೆಯರು ಬಣ್ಣ ಬಣ್ಣದ ರಂಗೋಲಿ ಹಾಕಿದ್ದರು. ಬಂಡಿ ಮೆರವಣಿಗೆ ಹಿನ್ನೆಲೆಯಲ್ಲಿ ದೇವಸ್ಥಾನ ಆವರಣ ಸೇರಿದಂತೆ ಗ್ರಾಮದ ಮುಖ್ಯ ರಸ್ತೆಯಲ್ಲಿ ತಳಿರು ತೋರಣ ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT