ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರೀಡಾಕೂಟದಿಂದ ಪರಸ್ಪರ ಪ್ರೀತಿ, ಸಹಬಾಳ್ವೆ ಸಾಧ್ಯ: ಸರ್ಪಭೂಷಣ ಸ್ವಾಮೀಜಿ

ಚಾ‌ಮರಾ‌ಜನಗರದಲ್ಲಿ ಬಸವೇಶ್ವರ ಕಪ್‌ ಕ್ರಿಕೆಟ್‌ ಟೂರ್ನಿಗೆ ಚಾಲನೆ
Published 28 ಜನವರಿ 2024, 14:00 IST
Last Updated 28 ಜನವರಿ 2024, 14:00 IST
ಅಕ್ಷರ ಗಾತ್ರ

ಚಾಮರಾಜನಗರ: ‘ಕ್ರೀಡೆಗಳು ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗ. ಕ್ರೀಡಾಕೂಟವು ಪರಸ್ಪರ ಪ್ರೀತಿ, ಸಹಬಾಳ್ವೆಯನ್ನು ತೋರಿಸುತ್ತವೆ. ಸದಾ ಚಟುವಟಿಕೆಯಿಂದ ಇರಲು ಆಟಗಳು ಸಹಕಾರಿ’ ಎಂದು ಹರವೆ ವಿರಕ್ತ ಮಠದ ಸರ್ಪಭೂಷಣ ಸ್ವಾಮೀಜಿ ಭಾನುವಾರ ಹೇಳಿದರು. 

ನಗರದ ಶ್ರೀ ಶಿವಕುಮಾರ ಸ್ವಾಮೀಜಿ ಯುವಕರ ಬಳಗವು ಡಾ.ಬಿ.ಆರ್.ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿರುವ ಎರಡು ದಿನಗಳ ಬಸವೇಶ್ವರ ಕಪ್–2024 ಕ್ರಿಕೆಟ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 

‘ಆಟದಲ್ಲಿ ಸೋಲು ಗೆಲುವು ಮುಖ್ಯವಲ್ಲ. ಗೆಲುವಿಗೆ ಸಂಘಟನಾತ್ಮಕ ಸಹಕಾರ, ಶ್ರದ್ದೆ ಹಾಗೂ ಉತ್ತಮ ವಾತಾವರಣ ಬೇಕು. ಸೋತಾಗ ನಡೆಯುವ ತಪ್ಪುಗಳನ್ನು ತಿದ್ದಿಕೊಂಡು ಮುನ್ನುಗ್ಗುವುದು ಜೀವನ ಪಾಠ’ ಎಂದರು. 

‘ಯುವಕರು ಇತರರೊಂದಿಗೆ ಸೇರಿ ಸಮಾಜವನ್ನು ಸಂಘಟಿಸುವ ಮತ್ತು ಬಸವ ಧರ್ಮವನ್ನು ರಕ್ಷಣೆ ಮಾಡುವ ಕಾಯಕದಲ್ಲಿ ನಿರರವಾಗಬೇಕು. ನಮ್ಮ ತನ ಮತ್ತು ನಮ್ಮ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಜಾಗೃತರಾಗಬೇಕು. ದುಷ್ಚಟಗಳಿಂದ ದೂರವಿದ್ದು, ಸಮಾಜ, ಹುಟ್ಟಿದ ಊರು ಹಾಗೂ ತಂದೆ ತಾಯಿಗಳಿಗೆ ಪ್ರೀತಿ ತೋರಬೇಕು’ ಎಂದು ಶ್ರೀಗಳು ಹೇಳಿದರು. 

30ಕ್ಕೂ ಹೆಚ್ಚು ತಂಡಗಳು: ಜಿಲ್ಲಾ ವ್ಯಾಪ್ತಿಯ ವಿವಿಧ ಗ್ರಾಮಗಳ 30ಕ್ಕೂ ಹೆಚ್ಚು ತಂಡಗಳು ಟೂರ್ನಿಯಲ್ಲಿ ಭಾಗವಹಿಸಿವೆ.

ಸರ್ಪಭೂಷಣ ಸ್ವಾಮೀಜಿ ಅವರೊಂದಿಗೆ ಮರಿಯಾಲ ಮಠದ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠದ ಚನ್ನಬಸವ ಸ್ವಾಮೀಜಿ ಹಾಗೂ ಮೂಡುಗೂರು ಮಠದ  ಉದ್ದಾನಸ್ವಾಮೀಜಿ ಪಂದ್ಯಾವಳಿಗೆ ಚಾಲನೆ ನೀಡಿ, ಶುಭ ಕೋರಿದರು.

ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಅಧ್ಯಕ್ಷ ಮೂಡ್ಲುಪುರ ನಂದೀಶ್, ಪ್ರಧಾನ ಕಾರ್ಯದರ್ಶಿ ಡಿ.ನಾಗೇಂದ್ರ, ಖಜಾಂಚಿ ಬಸವರಾಜು, ಹಿರಿಬೇಗೂರು ಗುರುಸ್ವಾಮಿ, ಬಳಗದ ರಾಜೇಶ್ ಬೂದಂಬಳ್ಳಿ, ಮಾಯಿ ಉಡಿಗಾಲ, ವೀರನಪುರ ಸುಪ್ರೀತ್, ಮೂಡ್ಲುಪುರ ಶಂಕರ್, ಶಮಿತ್, ಗುರು, ಸಂಜು ಇತರರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT