ಜನರಿಂದ ನೀರಿನ ಕಂದಾಯ ವಸೂಲಿ ಮಾಡುವ ನಗರಸಭೆ ಕಾವೇರಿ ನೀರು ಸರಬರಾಜು ಮಾಡುವುದರಲ್ಲಿ ಸಂಪೂರ್ಣ ವಿಫಲರಾಗಿದೆ. 20 ದಿನಕ್ಕೆ ಒಮ್ಮೆಯೂ ನೀರು ಬಿಡುತ್ತಿಲ್ಲ. ಅಂತರ್ಜಲ ಮಟ್ಟ ಕುಸಿದು ಕೊಳವೆ ಬಾವಿಗಳು ಬತ್ತುತ್ತಿರುವುದು ಸಮಸ್ಯೆಯ ಗಂಭೀರತೆಗೆ ಕಾರಣವಾಗಿದೆ. ಜನರಿಗೆ ನೀರು ಕೊಡಲಾಗದಿದ್ದರೆ ದಯಾ ಮರಣಕ್ಕೆ ಅನುಮತಿ ಕೊಡಲಿ. ನೀರಿಲ್ಲ ಎಂಬ ಕಾರಣಕ್ಕೆ ಬಾಡಿಗೆದಾರರು ಮನೆ ಖಾಲಿ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಮನೆ ಮಾಲೀಕರು ಕೂಡ ಸ್ವಂತ ಊರು ಹಾಗೂ ನಗರಗಳತ್ತ ಮುಖ ಮಾಡುತ್ತಿದ್ದಾರೆ.