ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಳಿ, ತುಂತುರು ಮಳೆ: ಡೂಪಿಯನ್ ರೇಷ್ಮೆ ಉದ್ಯಮಕ್ಕೆ ಸಂಕಷ್ಟ

ರೇಷ್ಮೆಗೂಡು ಉತ್ಪಾದನೆ ಕುಸಿತ, ಬೇಡಿಕೆಯಷ್ಟು ಆಗದ ಪೂರೈಕೆ
Last Updated 14 ಡಿಸೆಂಬರ್ 2021, 5:07 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕನ್ನು ಆವರಿಸಿದ ಚಳಿ ಮತ್ತು ತುಂತುರು ಮಳೆಯಿಂದ ರೇಷ್ಮೆ ಉತ್ಪಾದನೆಕುಸಿದಿದೆ. ಇದರಿಂದ ಸಾವಿರಾರು ಜನರಿಗೆ ಆದಾಯದ ಮೂಲವಾಗಿದ್ದ ರಾಟೆಯ ಸದ್ದು ಗ್ರಾಮೀಣಭಾಗಗಳಲ್ಲಿ ಕ್ಷೀಣಿಸುತ್ತ ಸಾಗಿದೆ. ರೇಷ್ಮೆ ಮತ್ತು ಡೂಪಿಯನ್ ರೇಷ್ಮೆ (ಕಡಿಮೆ ಗುಣಪಟ್ಟದ ರೇಷ್ಮೆ) ಉತ್ಪಾದಕರು ಉದ್ಯಮಸ್ಥಗಿತಗೊಳಿಸಲು ಮುಂದಾಗಿದ್ದಾರೆ.

ಮಾರುಕಟ್ಟೆಯಲ್ಲಿ ರೇಷ್ಮೆ ಗೂಡಿಗೆ ಪ್ರತಿದಿನ ಬೇಡಿಕೆ ಏರುತ್ತಿದೆ. ನೀಡಿಕೆ ಮಾತ್ರಅಷ್ಟಾಗಿ ಇಲ್ಲ. ಇದರಿಂದ ಉತ್ತಮ ದರ್ಜೆಯ ಗೂಡಿನ ಧಾರಣೆ ದಿಢೀರ್ ಏರಿಕೆ ಕಂಡಿದೆ. ಇದರಿಂದಾಗಿ ರೇಷ್ಮೆ ಬಿಚ್ಚಣಿಕೆದಾರರು ನಿರೀಕ್ಷಿಸಿದಷ್ಟು ರೇಷ್ಮೆ ಸಿಗುತ್ತಿಲ್ಲ. ಹಾಗಾಗಿ, ರಾಟೆಗಳನ್ನು ನಿಲ್ಲಿಸಿದ್ದಾರೆ. ಕಾರ್ಮಿಕರಿಗೆ ದಿನನಿತ್ಯದ ಕೆಲಸ ಕೈತಪ್ಪಿದೆ. ಲಕ್ಷಾಂತರರೂಪಾಯಿ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದ ವಿದ್ಯುತ್ ಆಧಾರಿತ ಒಲೆಗಳು ಮತ್ತುಯಂತ್ರಗಳನ್ನು ನಿಲ್ಲಿಸಬೇಕಾದ ಸ್ಥಿತಿ ಇದೆ.

‘ಮುಡಿಗುಂಡ ಮಾರುಕಟ್ಟೆಯಲ್ಲಿ ರೇಷ್ಮೆಗೂಡಿನ ಆವಕ ಹೆಚ್ಚಾಗಿದ್ದಾಗ, ಬೆಲೆ ಕೆಜಿಗೆ ₹300ರ ಆಸುಪಾಸಿನಲ್ಲಿ ಇರುತ್ತಿತ್ತು. ಹವಾಮಾನ ವೈಪರೀತ್ಯ ಸೇರಿದಂತೆ ಮತ್ತಿತರ ಕಾರಣಗಳಿಂದ ಗೂಡಿನ ಇಳುವರಿ ಕುಸಿದಿದ್ದು, ಈಗ ಕೇವಲ 70 ರಿಂದ 80 ಲಾಟ್‌ಗಳಷ್ಟೇ ಬರುತ್ತಿದೆ. ಬೆಲೆ
ಕೆಜಿಗೆ ₹650 ರಿಂದ ₹700ಗೆ ಏರಿಕೆ ಕಂಡಿದೆ. ಬಹಳಷ್ಟು ರೇಷ್ಮೆಬಿಚ್ಚಣಿಕೆದಾರರಿಗೆ ಬೆಲೆ ಏರಿಕೆ ಬಿಸಿ ಮುಟ್ಟಿದೆ. ಹಲವು ರೇಷ್ಮೆ ಒಲೆಗಳು ಬಂದ್ಆಗಿವೆ. ಇದರಿಂದ ನೂರಾರು ಸಂಸಾರಗಳ ಆಧಾರವಾಗಿದ್ದ ರಾಟೆಗಳು ಒಂದೊಂದಾಗಿಮುಚ್ಚುತ್ತಿವೆ’ ಎಂದು ಮಾಂಬಳ್ಳಿ ನಂಜುಂಡ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ನೂರಾರು ರೇಷ್ಮೆ ಉತ್ಪಾದನಾ ಘಟಕಗಳಲ್ಲಿ ಸಾವಿರಾರು ಶ್ರಮಿಕರು ಕೆಲಸ ಮಾಡುತ್ತಿದ್ದರು.ಪ್ರತಿ ರೇಷ್ಮೆ ಒಲೆ ನಂಬಿ ಇಬ್ಬರು ಕಾರ್ಮಿಕರು ದುಡಿಯುತ್ತಿದ್ದರು. ಪ್ರತಿ ಒಲೆ ಎರಡು ಕುಟುಂಬಗಳನ್ನು ಪೋಷಿಸುತ್ತಿತ್ತು. ಇಲ್ಲಿ ತಯಾರಾದ ಡೂಪಿಯನ್‌ ಮತ್ತು ರೇಷ್ಮೆ ವಾರಕ್ಕೊಮ್ಮೆ ಆಂಧ್ರ ಮಾರುಕಟ್ಟೆಗೆ ಸಾಗಣೆ ಆಗುತ್ತಿತ್ತು. ಗೂಡಿನ ಅಭಾವದಿಂದ ಎಲ್ಲ ಸ್ಥಗಿತವಾಗಿದೆ’ ಎನ್ನುತ್ತಾರೆ ಮಾಲೀಕರು.

‘ರೇಷ್ಮೆ ನಂಬಿದವರ ಬದುಕು ಅತಂತ್ರ’
‘ಮಾರುಕಟ್ಟೆಯಲ್ಲಿ ರೇಷ್ಮೆ ಪೂರೈಕೆ ಕುಸಿದ ನಂತರ ಕೆಜಿಗೆ ₹200 ರಿಂದ ₹250 ನೀಡಿಜಿಲ್ಲಿ ಗೂಡು (2 ಮತ್ತು 3ನೇ ದರ್ಜೆಯ ರೇಷ್ಮೆ ಗೂಡು) ಕೊಂಡು, ಡೂಪಿಯನ್ ರೇಷ್ಮೆ ನೂಲು ಉತ್ಪಾದನೆಮಾಡುತ್ತಿದ್ದೆವು. 7ರಿಂದ 8 ಕೆಜಿ ಜಿಲ್ಲಿ ಗೂಡಿನಿಂದ 1 ಕೆಜಿ ಡೂಪಿಯನ್ ರೇಷ್ಮೆ ನೂರುತಯಾರಾಗುತ್ತಿತ್ತು. ದಿನಕ್ಕೆ 3 ಒಲೆಗೆ 150 ಕೆಜಿ ಗೂಡು ಅವಶ್ಯ ಇತ್ತು. ಈಗಗ್ರಾಮೀಣ ಭಾಗಗಳಲ್ಲೂ ರೇಷ್ಮೆ ಬೆಳೆಗಾರರು ಕಡಿಮೆ ಆಗುತ್ತಿದ್ದು. ರೇಷ್ಮೆ ನಂಬಿದವರಬದುಕು ಅತಂತ್ರವಾಗಿದೆ’ ಎಂದು ಉದ್ಯಮಿ ಶಕೀಲ್ ಅವರು ಹೇಳಿದರು.

'ರೇಷ್ಮೆ ರೀಲರ್‌ಗಳಿಗೂ ಸರ್ಕಾರ ಸಹಾಯಧನ ನೀಡಬೇಕು. ವರ್ಷಪೂರ್ತಿ ಕೆಲಸಕ್ಕೆ ಬೇಕಾದಕಚ್ಚಾ ಪದಾರ್ಥಗಳನ್ನು ಪೂರೈಸಬೇಕು. ಶ್ರಮಿಕರು ಮತ್ತು ಉತ್ಪಾದಕರ ಹಿತಕಾಯುವಕೆಲಸಕ್ಕೆ ಹೆಚ್ಚಿನ ಒತ್ತು ನೀಡಬೇಕು. ಇದರಿಂದ ರೇಷ್ಮೆ ವ್ಯಾಪಾರಿಗಳು ಉದ್ಯಮವನ್ನುಇನ್ನಷ್ಟು ವಿಸ್ತರಿಸಲು ಸಾಧ್ಯ' ಎನ್ನುತ್ತಾರೆ ಸಮೀಉಲ್ಲಾ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT