ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮುಂದಿನ ಪೀಳಿಗೆಗೆ ಪರಿಸರ ಉಳಿಸಿ: ಚಂದ್ರಶೇಖರ್ ಪಾಟೀಲ್

ಅಜ್ಜೀಪುರ ಸರ್ಕಾರಿ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
Published 6 ಜೂನ್ 2024, 14:07 IST
Last Updated 6 ಜೂನ್ 2024, 14:07 IST
ಅಕ್ಷರ ಗಾತ್ರ

ಹನೂರು: ಮುಂದಿನ ಪೀಳಿಗೆಗಾಗಿ ಪರಿಸರವನ್ನು ಉಳಿಸಿ ಬೆಳೆಸಿ ಸಂರಕ್ಷಣೆ ಮಾಡುವುದು ನಮೆಲ್ಲರ ಆದ್ಯ ಕರ್ತವ್ಯ ಎಂದು ಮಲೆ ಮಹದೇಶ್ವರ ವನ್ಯಜೀವಿ ಧಾಮದ ಸಹಾಯಕ ಅರಣ್ಯ ಸಂರಕ್ಷಣ ಅಧಿಕಾರಿ ಚಂದ್ರಶೇಖರ್ ಪಾಟೀಲ್ ಹೇಳಿದರು.

ತಾಲ್ಲೂಕಿನ ಅಜ್ಜೀಪುರ ಶಾಲೆಯಲ್ಲಿ ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಹೋಲಿಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆಯ ಕಾರ್ಯಕ್ರಮದಲ್ಲಿ ಮಾತನಾಡಿದರು. ಪ್ರಸ್ತುತ ದಿನಗಳಲ್ಲಿ ಪರಿಸರವನ್ನು ಉಳಿಸಲು ನಾವೆಲ್ಲರೂ ಪಣ ತೊಡಬೇಕಿದೆ. ಇದರ ಜೊತೆಗೆ ಪ್ಲಾಸ್ಟಿಕ್ ಮುಕ್ತ ಮಾಡಲು ನಾವು ಮುಂದಾಗೇಬೇಕು. ಮೊದಲು ನಾವು ಬದಲಾಗಬೇಕು, ಬಳಿಕ ಎಲ್ಲರೂ ಬದಲಾಗುತ್ತಾರೆ. ಪ್ಲಾಸ್ಟಿಕ್ ಬದಲಿಗೆ ಬಟ್ಟೆಯ ಬ್ಯಾಗ್ ಬಳಸುವಂತಾಗಬೇಕು. ಒಮ್ಮೆಲೆ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡುವುದು ಕಷ್ಟಸಾಧ್ಯ ಆದರೆ ಹಂತ ಹಂತವಾಗಿ ನಾವು ಬಳಸುವಿಕೆ ಕಡಿಮೆ ಮಾಡಬೇಕು ಎಂದರು.

ಹನೂರು ಬಫರ್ ವಲಯ ಅರಣ್ಯಾಧಿಕಾರಿ ಪ್ರವೀಣ್ ಮಾತನಾಡಿ, ಪ್ರತಿ ಮಕ್ಕಳು ಒಂದೊಂದು ಗಿಡವನ್ನು ಬೆಳೆಸಬೇಕು. ಆ ನಿಟ್ಟಿನಲ್ಲಿ ಇಂದೇ ನಿಮಗಾಗಿ ನಮ್ಮ ನರ್ಸರಿಯಲ್ಲಿ ಗಿಡವನ್ನು ಮೀಸಲಿಡಲಾಗುತ್ತದೆ. ಮಕ್ಕಳು ಗಿಡಮರ ಬೆಳೆಸಿ. ಪ್ಲಾಸ್ಟಿಕ್ ಬಳಸಿ ಕಸ ಹಾಕುವುವವರು ನೀವು, ಆದರೇ ಅದನ್ನು ನಿಯಂತ್ರಣ ಮಾಡುವುದು ಮಾತ್ರ ಇಲಾಖೆ ಇದು ಎಷ್ಟರ ಮಟ್ಟಿಗೆ ಸರಿ ಎಂದು ಪ್ರಶ್ನಿಸಿದರು.

ಜಾಥಾ ಕಾರ್ಯಕ್ರಮ: ಅಜ್ಜೀಪುರ ಸರ್ಕಾರಿ ಶಾಲೆ ಹಾಗೂ ಜೆಎಸ್‌ಎಸ್ ಪ್ರೌಢಶಾಲೆಯ ಮಕ್ಕಳು ಹಾಗೂ ಶಿಕ್ಷಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸೇರಿ ಪರಿಸರ ಸಂರಕ್ಷಣೆಯ ಘೋಷಣೆಗಳನ್ನು ಕೂಗುತ್ತಾ ಅಜ್ಜೀಪುರ ಬಸ್ ನಿಲ್ದಾಣದಲ್ಲಿ ಜಾಥಾ ನಡೆಸಿದರು.

ಅಜ್ಜೀಪುರ ಶಾಲೆಯ ಮುಖ್ಯ ಶಿಕ್ಷಕಿ ಮೇರಿ, ಗ್ರಾಮಸ್ಥ ಲೋಕೇಶ್, ಹೋಲಿಕ್ರಾಸ್ ಸಂಸ್ಥೆಯ ಬಸವರಾಜು, ಸುರೇಶ್ ಹಾಗೂ ಜೆಎಸ್‌ಎಸ್ ಪ್ರೌಢಶಾಲೆಯ ಶಿಕ್ಷಕ ಸ್ವಾಮಿ, ಶಿಕ್ಷಕರಾದ ವೆಂಕಟರಾಜು, ಕೊಳಂದೈರಾಜು, ದೊರೆಸ್ವಾಮಿ, ಕಲ್ಪನಾ, ಮಹಾದೇವಮ್ಮ, ಮಂಗಳಮ್ಮ, ರಮ್ಯ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಇನ್ನಿತರರು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT