ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಜಪೇಯಿ ಅವರು ಹೃದಯದಲ್ಲಿ ಅಜರಾಮರ...ಮೆಲುಕು ಹಾಕಿದ ಗಣೇಶ್‌ ದೀಕ್ಷಿತ್‌

ಹಳೆ ನೆನಪು
Last Updated 16 ಆಗಸ್ಟ್ 2018, 14:51 IST
ಅಕ್ಷರ ಗಾತ್ರ

ಚಾಮರಾಜನಗರ: ‘ಅಟಲ್‌ ಬಿಹಾರಿವಾಜಪೇಯಿ ಅವರು ನಮಗೆ ಗುರುಗಳಂತೆ ಇದ್ದರು. ಅವರು ಹೇಳಿದ್ದನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೆವು. ಅವರು ಇಂದು ನಮ್ಮನ್ನು ಅಗಲಿರಬಹುದು. ಆದರೆ, ನಮ್ಮ ಹೃದಯದಲ್ಲಿ ಎಂದಿಗೂ ಅಜರಾಮರ’

– ಅಜಾತ ಶತ್ರು‌ ಎಂದೇ ಗುರುತಿಸಿಕೊಂಡಿರುವ ವಾಜಪೇಯಿ ಅವರ ನಿಧನಕ್ಕೆ ಚಾಮರಾಜನಗರದಬಿಜೆಪಿಯ ಹಿರಿಯ ಮುಖಂಡ ಗಣೇಶ್‌ ದೀಕ್ಷಿತ್‌ ಅವರು ಕಂಬನಿ ಮಿಡಿದಿದ್ದು ಹೀಗೆ.

ವಾಜಪೇಯಿ ಅವರೊಂದಿಗೆ ಕಳೆದ ಸಮಯವನ್ನು ಅವರು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

‘ ಜನತಾ ಪಕ್ಷದಿಂದ ಬೇರ್ಪಟ್ಟು ಭಾರತೀಯ ಜನತಾ ಪಕ್ಷ (ಬಿಜೆಪಿ) ಸ್ಥಾಪನೆಗೊಂಡ ನಂತರ1982ರಲ್ಲಿ ವಾಜಪೇಯಿ ಅವರು ಚಾಮರಾಜನಗರಕ್ಕೆ ಬಂದಿದ್ದರು. ಆಗ ನಾನು ಪಕ್ಷದ ಜಿಲ್ಲಾ ಅಧ್ಯಕ್ಷನಾಗಿದ್ದೆ. ಹೊಸ ಪಕ್ಷದ ಬಗ್ಗೆ ಪ್ರಚಾರ ಮಾಡಲು ಅವರು ಬಂದಿದ್ದರು. ಸಾರ್ವಜನಿಕ ಸಭೆಯನ್ನು ಆಯೋಜಿಸಿ ಅವರಿಂದ ಭಾಷಣವನ್ನೂ ಮಾಡಿಸಿದ್ದೆ’ ಎಂದು ಗಣೇಶ್‌ ದೀಕ್ಷಿತ್‌ ಸ್ಮರಿಸಿದರು.

‘ಈ ಸಂದರ್ಭದಲ್ಲಿ ಅವರು ಚಾಮರಾಜೇಶ್ವರ ದೇವಾಲಯಕ್ಕೆ ಭೇಟಿ ನೀಡಿ ದೇವರ ದರ್ಶನವನ್ನೂ ಪಡೆದಿದ್ದರು’ ಎಂದು ಅವರು ಹೇಳಿದರು.

‘ತದ ನಂತರ 1983ರಲ್ಲಿ ನಡೆದ ವಿಧಾನಸಭಾ ಚುನಾವಣೆಗೆ ನಾನು ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ನಂಜನಗೂಡಿನಿಂದಲೂ ಪಕ್ಷದ ಅಭ್ಯರ್ಥಿ ಸ್ಪರ್ಧಿಸಿದ್ದರು. ನಮ್ಮ ಪರವಾಗಿ ಪ್ರಚಾರ ನಡೆಸಲು ವಾಜಪೇಯಿ ಅವರು ನಂಜನಗೂಡಿಗೆ ಬಂದಿದ್ದರು. ಇಬ್ಬರೂ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿದ್ದರು’ ಎಂದು ಅವರು ಹೇಳಿದರು.

‘ಅವರೊಂದಿಗೆ ಕಡಿಮೆ ಸಮಯ ಕಳೆದಿದ್ದರೂ, ಅದಿನ್ನೂ ನನ್ನ ಮನಸ್ಸಿನಲ್ಲಿ ಹಸಿರಾಗಿಯೇ ಇದೆ. ನಾನು ಜನಸಂಘದಲ್ಲಿದ್ದೆ. ವಾಜಪೇಯಿ ಅವರು ನಮಗೆಲ್ಲ ಸ್ಫೂರ್ತಿಯ ಸೆಲೆಯಾಗಿದ್ದರು. ಅವರ ಸ್ಫೂರ್ತಿಯಿಂದಲೇ ನಾನು ರಾಜಕೀಯಕ್ಕೆ ಬಂದವ. 25 ವರ್ಷಗಳ ಕಾಲ ಕಾರ್ಪೊರೇಟರ್‌ ಆಗಿದ್ದೆ’ ಎಂದು ನೆನಪಿನ ಬುತ್ತಿ ತೆರೆದಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT