ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಗಡಿ ಭಾಗದ ಶಾಲೆಗಳಲ್ಲಿ ಅರ್ಧಕ್ಕೆ ನಿಂತ ಕಾಮಗಾರಿಗಳು

Published 27 ಅಕ್ಟೋಬರ್ 2023, 14:39 IST
Last Updated 27 ಅಕ್ಟೋಬರ್ 2023, 14:39 IST
ಅಕ್ಷರ ಗಾತ್ರ

ಹನೂರು: ತಾಲ್ಲೂಕಿನ ಗಡಿಯಲ್ಲಿರುವ ಹೂಗ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೇಂದ್ರ ಶಾಲೆ ಸೇರಿದಂತೆ ಕೂಡಲೂರು, ದೊಮ್ಮೆಗೌಡನ ದೊಡ್ಡಿ ಶಾಲೆಗಳಲ್ಲಿ ಕೆಲಸ ಅಪೂರ್ಣಗೊಂಡಿದ್ದು, ಕಾಮಗಾರಿಗಳು ಪೂರ್ಣಗೊಂಡಿಲ್ಲ.

ಕೂಡಲೂರು, ದೊಮ್ಮೆಗೌಡನ ದೊಡ್ಡಿ ಶಾಲೆಗಳಲ್ಲಿ ಕಾoಪೌಂಡ್ ಕಾಮಗಾರಿ ಅರ್ಧಕ್ಕೆ ನಿಂತಿವೆ. ಕೂಡಲೂರು ಶಾಲೆಗೆ ಗೇಟ್ ಹಾಕಬೇಕು. ದೊಮ್ಮೆಗೌಡನ ದೊಡ್ಡಿ ಶಾಲೆಯಲ್ಲಿಯೂ ಕಾಮಗಾರಿ ಪೂರ್ಣಗೊಂಡಿಲ್ಲ. ಹೂಗ್ಯಂ ಕೇಂದ್ರ ಶಾಲೆಯಲ್ಲಿ ವಾಲಿಬಾಲ್ ಕೋರ್ಟ್ ನಿರ್ಮಿಸಲು ಜಲ್ಲಿ ಕಲ್ಲುಗಳನ್ನು ಹಾಕಲಾಗಿದೆ. ಮುಂದೆ ಕಾಮಗಾರಿಯೇ ಆರಂಭವಾಗಿಲ್ಲ.‌ ಹಲವು ತಿಂಗಳಿಂದ ಜಲ್ಲಿಕಲ್ಲಿನ ರಾಶಿಯಿಂದಲೇ ಆವರಣ ತುಂಬಿ ಹೋಗಿದೆ. ಕಾಮಗಾರಿ ಮುಗಿಸದಿದ್ದರೆ ಆವರಣ ತುಂಬೆಲ್ಲ ರಾಶಿ ಕಲ್ಲು ಹಾಕಿರುವುದು ಏತಕ್ಕಾಗಿ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಶಾಲೆಗಳಲ್ಲಿ ಕಾಮಗಾರಿಗಳು ಅರ್ಧಕ್ಕೆ ನಿಂತಿರುವುದು ನಮ್ಮ ಗಮನದಲ್ಲಿದೆ. ಇದೀಗ ನೂತನವಾಗಿ ಪಿಡಿಒ ಬಂದಿದ್ದಾರೆ. ಅವರ ಗಮನಕ್ಕೆ ತಂದಿದ್ದೇವೆ. ಆದಷ್ಟು ಬೇಗ ಕೆಲಸ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೂಗ್ಯಂ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT