ಯಳಂದೂರು: ರಾಷ್ಟ್ರೀಯ ತಂಡಗಳಲ್ಲಿ ಆಡುವಾಗ ಕ್ರೀಡಾಪಟುಗಳಿಗೆ ಯೋಗ ಮತ್ತು ಧ್ಯಾನದಿಂದ ನಿಖರವಾಗಿ ಗುರಿ ಮುಟ್ಟಲು ಸಾಧ್ಯವಾಗಲಿದೆ ಎಂದು ರಾಜ್ಯ ಜೂನಿಯರ್ ಬಾಲಕರ ತಂಡದ ತರಬೇತುದಾರ ಸಂತೇಮರಹಳ್ಳಿ ಬಿ. ಸುದರ್ಶನ್ ಅಭಿಪ್ರಾಯಪಟ್ಟರು.

ತಾಲ್ಲೂಕಿನ ಡಾ. ಭೀಮ್ ರಾವ್ ರಾಮ್ ಜಿ ಪ್ರೌಢಶಾಲೆಯಲ್ಲಿ 3 ದಿನಗಳ ಕಾಲ ನಡೆದ ಬಾಲ್ ಬ್ಯಾಡ್ಮಿಂಟನ್ ತರಬೇತಿ ಶಿಬಿರ ಹಾಗೂ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಚಾಮರಾಜನಗರ ಜಿಲ್ಲೆ ಬ್ಯಾಡ್ಮಿಂಟನ್ ಕ್ಷೇತ್ರಕ್ಕೆ ಹೆಚ್ಚು ಪ್ರತಿಭೆಗಳನ್ನು ಪರಿಚಯಿಸಿದೆ. ರಾಜ್ಯದ ಗ್ರಾಮೀಣ ಪ್ರದೇಶಗಳಿಂದ ನೂರಾರು ಸ್ಪರ್ಧಾಳುಗಳು ಭಾಗವಹಿಸಿದ್ದು, ಬ್ಯಾಡ್ಮಿಂಟನ್ ಆಟಕ್ಕೆ ಇರುವ ಪ್ರಾಧಾನ್ಯತೆ ತೋರಿಸುತ್ತಿದೆ ಎಂದರು.

ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕೆ.ಎನ್.ಪ್ರಮೋದ್ ಚಂದ್ರನ್, ‘3 ದಿನಗಳ ಕಾಲ ಬಾಲ್ ಬ್ಯಾಡ್ಮಿಂಟನ್ ತರಬೇತಿ ಶಿಬಿರ ಹಾಗೂ ಕರ್ನಾಟಕ ರಾಜ್ಯ ತಂಡದ ಆಯ್ಕೆ ಪ್ರಕ್ರಿಯೆ ಅಂತಿಮಗೊಂಡಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 25 ಪ್ರತಿಭಾವಂತರು ಈ ಶಿಬಿರ ಹಾಗೂ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ. 2025–26ನೇ ಸಾಲಿನ 70ನೇ ರಾಷ್ಟ್ರೀಯ ಜೂನಿಯರ್ ಬಾಲಕರ ಬಾಲ್ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ಗೆ ಕರ್ನಾಟಕ ರಾಜ್ಯ ತಂಡ ಪ್ರಕಟಿಸಲಾಗಿದೆ. ತಮಿಳುನಾಡಿನ ಈರೋಡುನಲ್ಲಿ ಇದೇ 28ರಿಂದ ಫೆ.1ರ ತನಕ ಸ್ಪರ್ಧೆ ನಡೆಯಲಿದೆ ಎಂದರು.

ರಾಜ್ಯವನ್ನು ಪ್ರತಿನಿಧಿಸುವ ಆಟಗಾರರಾದ ಚರಣ್ (ಆಳ್ವಾಸ್) (ಬ್ಯಾಕ್), ತಸ್ಲೀಮ್ ಆರ್.ಆರ್. ನಗರ (ಬ್ಯಾಕ್) ತರಬೇತಿ ಪಡೆದವರಲ್ಲಿ ಪ್ರಮುಖರು..

ಪದಾಧಿಕಾರಿಗಳಾದ ನಾರಾಯಣಸ್ವಾಮಿ (ಅಧ್ಯಕ್ಷರು), ಮಾದೇವಯ್ಯ (ಖಜಾಂಚಿ), ಭದ್ರಾವತಿ ರಾಜು, ಮಲ್ಲೇಶ್, ವಿಮಲ್ ಹಾಗೂ ಪ್ರಮೋದ್ ಇದ್ದರು. ಬಿ. ಸುದರ್ಶನ್ (ಕೆನರಾ ಬ್ಯಾಂಕ್) ಬಾಲಕರ ತಂಡದ ತರಬೇತುದಾರರಾಗಿ ಆಯ್ಕೆ ಮಾಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.