ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

14ರಂದು ಜಿಲ್ಲೆಯಲ್ಲಿ ಲೋಕ ಅದಾಲತ್‌

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಮಾಹಿತಿ
Last Updated 11 ಡಿಸೆಂಬರ್ 2019, 2:27 IST
ಅಕ್ಷರ ಗಾತ್ರ

ಚಾಮರಾಜನಗರ: ‘ರಾಷ್ಟ್ರೀಯ ಸೇವಾ ಪ್ರಾಧಿಕಾರದ ನಿರ್ದೇಶನದಂತೆ ಈ ವರ್ಷದ ಕೊನೆಯ ಲೋಕಅದಾಲತ್‌ ಕಾರ್ಯಕ್ರಮ ಜಿಲ್ಲೆಯ ನ್ಯಾಯಾಲಯಗಳಲ್ಲಿ ಇದೇ 14ರಂದು ನಡೆಯಲಿದೆ’ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿ.ಪಾಟೀಲ ಹೇಳಿದರು.

‘ಚಾಮರಾಜನಗರದಲ್ಲಿರುವ ನ್ಯಾಯಾಲಯ ಸೇರಿದಂತೆಕೊಳ್ಳೇಗಾಲ, ಯಳಂದೂರು ಮತ್ತು ಗುಂಡ್ಲುಪೇಟೆ ನ್ಯಾಯಾಲಯಗಳಲ್ಲಿ ಅದಾಲತ್‌ನಡೆಯಲಿವೆ. ರಾಜಿ ಮಾಡಿಕೊಳ್ಳಬಹುದಾದ ಎಲ್ಲ ಅಪರಾಧ, ಸಿವಿಲ್‌ ಹಾಗೂ ವ್ಯಾಜ್ಯಪೂರ್ವ ಪ್ರಕರಣಗಳನ್ನು ಅಂದು ಇತ್ಯರ್ಥಪಡಿಸಬಹುದಾಗಿದೆ’ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸೆಪ್ಟೆಂಬರ್‌ 13ರಂದು ನಡೆದಿದ್ದ ಲೋಕಅದಾಲತ್‌ನಲ್ಲಿ ಅಪರಾಧ ಮತ್ತು ಸಿವಿಲ್‌ ಪ್ರಕರಣಗಳು ಸೇರಿದಂತೆ ಒಟ್ಟು 383 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿತ್ತು. ಸೆಪ್ಟಂಬರ್‌ 14ರಂದು ಒಟ್ಟು 2,083 ಇತ್ಯರ್ಥವಾಗುವಂತಹ ಪ್ರಕರಣಗಳನ್ನು ಜಿಲ್ಲೆಯ ವಿವಿಧ ನ್ಯಾಯಾಲಯಗಳಿಗೆ ಕಳುಹಿಸಲಾಗಿತ್ತು. ಈ ಪೈಕಿ 393 ಬಾಕಿ ಇರುವ ಮತ್ತು 70 ವ್ಯಾಜ್ಯ ಪೂರ್ವ ಪ್ರಕರಣಗಳು (ಪ್ರಿ ಲಿಟಿಗೇಷನ್‌) ಪ್ರಕರಣಗಳು ತೀರ್ಮಾನವಾಗಿವೆ’ ಎಂದರು.

‘ಡಿ. 14ರ ಲೋಕ್‌ ಅದಾಲತ್‌ಗೆ ಜಿಲ್ಲೆಯಾದ್ಯಂತ ಒಟ್ಟು 1,964 ನ್ಯಾಯಾಲಯದಲ್ಲಿರುವ ಬಾಕಿ ಪ್ರಕರಣಗಳು ಹಾಗೂ 1,050 ವ್ಯಾಜ್ಯಪೂರ್ವ ಪ್ರಕರಣಗಳನ್ನುಗುರುತಿಸಲಾಗಿದೆ. ಇವುಗಳನ್ನು ಹೆಚ್ಚಿನ ಸಂಖ್ಯೆಯ ಪ್ರಕರಣಗಳನ್ನು ಅದಾಲತ್‌ನಲ್ಲೇ ತೀರ್ಮಾನಿಸಿ ಅಂತಿಮವಾಗಿ ಇತ್ಯರ್ಥಗೊಳಿಸಲು ಪ್ರಯತ್ನಿಸುತ್ತೇವೆ’ ಎಂದು ಅವರು ಹೇಳಿದರು.

ಯಾವ ಪ್ರಕರಣ?:‘ಸಾರ್ವಜನಿಕ ಹಿತಾಸಕ್ತಿ ಪ್ರಕರಣಗಳನ್ನು ಬಿಟ್ಟು ಇತರ ಯಾವುದೇ ಸಿವಿಲ್‌ ಪ್ರಕರಣಗಳು ಹಾಗೂ ದಂಡ ಪ್ರಕ್ರಿಯಾ ಸಂಹಿತೆ ಕಲಂ‌ 320 (1) ಮತ್ತು 320 (2)ರ ಅಡಿಯಲ್ಲಿ ರಾಜಿ ಮಾಡಿಕೊಳ್ಳಬಹುದಾಗಿರುವ ಎಲ್ಲ ಅಪರಾಧ ಪ್ರಕರಣಗಳನ್ನುಅದಾಲತ್‌ನಲ್ಲಿ ಇತ್ಯರ್ಥಪಡಿಸಬಹುದು. ವ್ಯಾಜ್ಯ ಪೂರ್ವ ಪ್ರಕರಣಗಳನ್ನೂ ರಾಜಿ ಸಂಧಾನದ ಮೂಲಕ ಬಗೆಹರಿಸಿಕೊಳ್ಳಬಹುದು’ ಎಂದು ವಿವರಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸಿ.ಜಿ.ವಿಶಾಲಾಕ್ಷಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌, ಪ್ರಧಾನ ಕಾರ್ಯದರ್ಶಿಮಂಜು ಹರವೆಇದ್ದರು.

ಮೇಲ್ಮನವಿಗೆ ಅವಕಾಶವಿಲ್ಲ
‘ಲೋಕ ಅದಾಲತ್‌ನಲ್ಲಿಇತ್ಯರ್ಥಗೊಂಡ ಪ್ರಕರಣಗಳ ವಿರುದ್ಧ ಮೇಲ್ಮನವಿ ಸಲ್ಲಿಸಲು ಅವಕಾಶ ಇರುವುದಿಲ್ಲ.ಅನೇಕವರ್ಷಗಳಿಂದ ಬಾಕಿ ಇರುವ ಪ್ರಕರಣಗಳು ಶೀಘ್ರ ವಿಲೇವಾರಿ ಆಗಲಿವೆ. ನ್ಯಾಯಾಲಯಕ್ಕೆ ಅಲೆದಾಡುವ ಹಾಗೂ ಹೆಚ್ಚಿನ ಹಣ ವ್ಯಯ ಮಾಡುವಅವಶ್ಯಕತೆಇರುವುದಿಲ್ಲ’ ಎಂದುಡಿ.ವಿ.ಪಾಟೀಲ ಹೇಳಿದರು.

ಅಂಕಿ–ಅಂಶ

1,175 – ಜಿಲ್ಲೆಯ ನ್ಯಾಯಾಲಯಗಳಲ್ಲಿ ಇತ್ಯರ್ಥಕ್ಕೆ ಬಾಕಿ ಇರುವ ಸಿವಿಲ್‌ ಪ್ರಕರಣಗಳು

789–ಇತ್ಯರ್ಥವಾಗದಿರುವ ಕ್ರಿಮಿನಲ್‌ ಪ್ರಕರಣಗಳು

1,964–ಜಿಲ್ಲೆಯಲ್ಲಿ ಅದಾಲತ್‌ಗಾಗಿ ಗುರುತಿಸಲಾಗಿರುವಒಟ್ಟು ಪ್ರಕರಣಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT