ಭಾನುವಾರ, ಮೇ 22, 2022
24 °C

ಶಾಸಕ ಮಹೇಶ್‌ ಸೂಚನೆಯಿಂದ ಹಲ್ಲೆ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ‘ಶಾಸಕ ಎನ್‌.ಮಹೇಶ್‌ ಅವರಿಗೆ ಚಪ್ಪಲಿ ತೋರಿಸಿದರು ಎಂದು ಆರೋಪಿಸಿ ಪೊಲೀಸರು ಗ್ರಾಮದ ಸಿದ್ದರಾಜು ಅವರನ್ನು ಹಿಗ್ಗಾಮುಗ್ಗಾ ಥಳಿಸಿದ್ದಾರೆ’ ಎಂದು ದೂರಿ ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮಸ್ಥರು ನಗರ ಠಾಣೆಯ ಮುಂದೆ ಶುಕ್ರವಾರ ಸಂಜೆ ದಿಢೀರನೆ
ಪ್ರತಿಭಟಿಸಿದರು. 

‘ಗ್ರಾಮದಲ್ಲಿ ಬೆಳಿಗ್ಗೆ ಕೊಂಡೋತ್ಸವದಲ್ಲಿ ಶಾಸಕ ಎನ್‌.ಮಹೇಶ್‌ ಭಾಗವಹಿಸಿದ್ದಾಗ ಸಿದ್ದರಾಜು, ಶಾಸಕರ ಕಾರ್ಯವೈಖರಿ ಬಗ್ಗೆ ಆಕ್ಷೇಪಿಸಿ ಚಪ್ಪಲಿ ತೋರಿಸಿದ್ದರು’ ಎಂದು ಆರೋಪಿಸಲಾಗಿದೆ.

‘ಶಾಸಕರು ಸೂಚಿಸಿದ್ದರಿಂದಲೇ ಪೊಲೀಸರು ಥಳಿಸಿದ್ದಾರೆ’ ಎಂಬುದು ಗ್ರಾಮಸ್ಥರ ಆರೋಪ.  ‘ನನಗೂ ಇದಕ್ಕೂ ಸಂಬಂಧ ಇಲ್ಲ. ಪೊಲೀಸರಿಗೆ ಸೂಚನೆಯನ್ನೂ ನೀಡಿಲ್ಲ. ದೂರು ದಾಖಲಾದ ನಂತರ ಪ್ರತಿಕ್ರಿಯಿಸುವೆ’ ಎಂದು ಶಾಸಕರು ಹೇಳಿದರು.

ಸಿದ್ದರಾಜು ಅವರನ್ನು ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿತ್ತು. ‘ಶಾಸಕರನ್ನು ಟೀಕಿಸಿದ್ದೆ. ಆದರೆ ಚಪ್ಪಲಿ ತೋರಿಸಿದ್ದೇನೆ ಎಂಬುದು ಸುಳ್ಳು’ ಎಂದು ಸಿದ್ದರಾಜು ಹೇಳಿದರು. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.