ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: 5 ದಿನಗಳಲ್ಲಿ ₹ 2.70 ಕೋಟಿ ಆದಾಯ

ಮಹದೇಶ್ವರ ಬೆಟ್ಟ: ಚಿನ್ನದ ತೇರು ಸೇರಿದಂತೆ ವಿವಿಧ ಸೇವೆ, ಲಾಡು ಮಾರಾಟ, ವಿಶೇಷ ದರ್ಶನ ಶುಲ್ಕ
Last Updated 24 ಫೆಬ್ರುವರಿ 2023, 19:31 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರಬೆಟ್ಟದಲ್ಲಿ ಇತ್ತೀಚೆಗೆ ಐದು ದಿನಗಳ ಕಾಲ ನಡೆದ ಮಹಾಶಿವರಾತ್ರಿ ಜಾತ್ರಾ ಮಹೋತ್ಸವವು ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ಉತ್ತಮ ಆದಾಯ ತಂದು ಕೊಟ್ಟಿದೆ.

ಫೆ.17ರಿಂದ 21ರವರೆಗೆ ಕ್ಷೇತ್ರಕ್ಕೆ ಭೇಟಿ ನೀಡಿದ್ದ ಭಕ್ತರು ಮಹದೇಶ್ವರ ಸ್ವಾಮಿ ದೇವರಿಗೆ ಸಲ್ಲಿಸಿದ ವಿವಿಧ ಸೇವೆಗಳ ಮೂಲಕ ₹ 2.70 ಕೋಟಿ ಆದಾಯ ಬಂದಿದೆ. ಇದರಲ್ಲಿ ಹುಂಡಿ ಕಾಣಿಕೆ, ವಸತಿ ಗೃಹಗಳ ಬಾಡಿಗೆ ಹಾಗೂ ಬಸ್‌ನ ಆದಾಯ ಸೇರಿಲ್ಲ.

ಐದು ದಿನಗಳ ಜಾತ್ರೆಯ ಅವಧಿಯಲ್ಲಿ ಜಿಲ್ಲೆ, ಹೊರ ಜಿಲ್ಲೆಗಳು, ನೆರೆಯ ತಮಿಳುನಾಡು ಸೇರಿದಂತೆ ವಿವಿಧ ಕ್ಷೇತ್ರಗಳ ಲಕ್ಷಾಂತರ ಭಕ್ತರು ಭಾಗವಹಿಸಿ ಮಾದಪ್ಪನ ದರ್ಶನ ಪಡೆದಿದ್ದರು. ಈ ಅವಧಿಯಲ್ಲಿ ವಿಶೇಷ ಪೂಜೆ, ಉತ್ಸವಗಳಲ್ಲಿ ಪಾಲ್ಗೊಂಡಿದ್ದ ಭಕ್ತರು, ಚಿನ್ನದ ರಥೋತ್ಸವ ಸೇರಿದಂತೆ ವಿವಿಧ ಸೇವೆಗಳನ್ನು ಸಲ್ಲಿಸಿದ್ದರು.

ವಿವಿಧ ಸೇವಾ ಶುಲ್ಕಗಳಿಂದ ಮಾತ್ರವಲ್ಲದೆ, ವಿಶೇಷ ದರ್ಶನ ಟಿಕೆಟ್‌, ಲಾಡು, ಮಾಹಿತಿ ಕೇಂದ್ರ ಸೇರಿದಂತೆ ಇನ್ನಿತರ ಮೂಲಗಳಿಂದ ಪ್ರಾಧಿಕಾರಕ್ಕೆ ಆದಾಯ ಲಭಿಸಿದೆ.

ಐದು ಲಕ್ಷಕ್ಕೂ ಹೆಚ್ಚು ಲಾಡು ಮಾರಾಟವಾಗಿದ್ದು, ಇದೊಂದರಿಂದಲೇ ₹ 92,59,975 ಮೊತ್ತ ಸಂಗ್ರಹವಾಗಿದೆ. ವಿಶೇಷ ಪ್ರವೇಶ ಶುಲ್ಕದಿಂದ ₹ 54.38 ಲಕ್ಷ ಆದಾಯ ಬಂದಿದೆ.

ಪ್ರಾಧಿಕಾರದ ಅಧಿಕಾರಿಗಳು ನೀಡಿರುವ ಪ್ರಕಾರ, ಚಿನ್ನದ ರಥ ಮತ್ತು ಉತ್ಸವಗಳಿಂದ ₹ 88,21,257, ವಿವಿಧ ಸೇವೆಗಳಿಂದ ₹ 6,71,700, ಮಿಶ್ರ ಪ್ರಸಾದದಿಂದ ₹ 11,56,250, ಮಾಹಿತಿ ಕೇಂದ್ರದಿಂದ ₹ 6,16,250, ಪುದುವಟ್ಟು ಸೇವೆಯಿಂದ ₹ 1,45,072, ಕಲ್ಲು ಸಕ್ಕರೆ ಮಾರಾಟದಿಂದ ₹ 1,08,420, ತೀರ್ಥ ಪ್ರಸಾದದಿಂದ ₹ 2,24,020, ಬಟ್ಟೆ ಚೀಲದ ಮಾರಾಟದಿಂದ ₹ 1,49,670 ಅಕ್ಕಿಸೇವೆಯಿಂದ ₹ 2,64,450 ಹಾಗೂ ಇತರ ಸೇವೆಗಳಿಂದ ₹ 1,17,574 ಸೇರಿದಂತೆ ಒಟ್ಟು ₹ 2,70,72,638 ಸಂಗ್ರಹವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT