ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹದೇಶ್ವರ ಬೆಟ್ಟ: ಜನ ವನ ವಾಹನದಲ್ಲಿ ಮಕ್ಕಳನ್ನು ಗ್ರಾಮಕ್ಕೆ ಕರೆದೊಯ್ದರು

Published 26 ನವೆಂಬರ್ 2023, 14:50 IST
Last Updated 26 ನವೆಂಬರ್ 2023, 14:50 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಇಲ್ಲಿನ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸರಸ್ವತಿ ಅವರು ಶುಕ್ರವಾರ ಸಂಜೆ ಜನ ವನ ಸೇತುವೆ ಸಾರಿಗೆ ವಾಹನದಲ್ಲಿ ಇಂಡಿಗನತ್ತ ಮತ್ತು ತೊಳಸಿಕೆರೆ ಗ್ರಾಮದ ಶಾಲಾ ಮಕ್ಕಳನ್ನು ಅವರ ಗ್ರಾಮಗಳಿಗೆ ಕರೆದುಕೊಂಡು ಹೋದರು. 

ಮಹದೇಶ್ವರ ಬೆಟ್ಟದ ಕಾಡಂಚಿನ ಗ್ರಾಮಗಳಿಗೆ ಜನರ ಓಡಾಟಕ್ಕಾಗಿ ನಿಯೋಜಿಸಲಾಗಿರುವ ನಾಲ್ಕು ವಾಹನಗಳ ನಿರ್ವಹಣೆಯ ಜವಾಬ್ದಾರಿಯನ್ನು ಇತ್ತೀಚೆಗೆ ಪ್ರಾಧಿಕಾರ ವಹಿಸಿಕೊಂಡಿತ್ತು. 

ಕಾಡಂಚಿನ ಗ್ರಾಮಗಳಿಂದ 5ನೇ ತರಗತಿ ಮೇಲ್ಪಟ್ಟು ಹೆಚ್ಚಿನ ವಿಧ್ಯಾಭ್ಯಾಸವನ್ನು ಮಾಡಬೇಕಾದರೆ ಸ್ವ ಗ್ರಾಮಗಳಿಂದ ಏಳು ಕಿ.ಮೀ ದೂರದಲ್ಲಿರುವ ಮಹದೇಶ್ವರ ಬೆಟ್ಟಕ್ಕೆ ವಿಧ್ಯಾರ್ಥಿಗಳು ಕಾಲ್ನಡಿಗೆಯಲ್ಲಿ ಬರಬೇಕಾಗಿತ್ತು. ಖಾಸಗಿ ವಾಹನಗಳಿಗೆ ಕೊಡುವಷ್ಟು ಹಣ ಅವರ ಬಳಿ ಇರುತ್ತಿರಲಿಲ್ಲ. ಜನ ವನ ಸೇತುವೆ ಸಾರಿಗೆಯಲ್ಲಿ ಮಕ್ಕಳಿಗೆ ಉಚಿತವಾಗಿ ಪ್ರಯಾಣಿಸಲು ಸೌಲಭ್ಯ ಕಲ್ಪಿಸಲಾಗಿದೆ. 

ಶುಕ್ರವಾರ ಸಂಜೆ ಶಾಲೆ ಬಿಟ್ಟ ನಂತರ ಜನ ವನ ವಾಹನದಲ್ಲಿ ಮಕ್ಕಳನ್ನು ಕರೆದುಕೊಂಡು ಹೋದ ಸರಸ್ವತಿ ಅವರು ಗ್ರಾಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರೊಂದಿಗೆ ಮಾತುಕತೆ ನಡೆಸಿದರು. ಶಾಲೆಗೆ ಹೋಗುವ ಎಷ್ಟು ಮಕ್ಕಳಿದ್ದಾರೆ? ಎಷ್ಟು ವಾಹನದ ಅಗತ್ಯವಿದೆ ಎಂದೆಲ್ಲ ಮಾಹಿತಿ ಪಡೆದರು. 

‘ಪ್ರತಿ ನಿತ್ಯ ಶಾಲಾ ಸಮಯಕ್ಕೆ ಸರಿಯಾಗಿ ಬೆಳಿಗ್ಗೆ ಹಾಗೂ ಸಂಜೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ವಾಹನಗಳನ್ನು ಓಡಿಸಲಾಗುತ್ತಿದೆ. ಉಳಿದ ಸಮಯದಲ್ಲಿ  ‌ತುರ್ತು ಸಂದರ್ಭ ಹಾಗೂ ವಯೋ ವೃದ್ದರು ಮಹದೇಶ್ವರ ಬೆಟ್ಟಕ್ಕೆ ಸಂಚರಿಸುವ ಸಮಯದಲ್ಲಿ ವಾಹನವನ್ನು ಬಳಸಿಕೊಳ್ಳಬಹುದು ಈಗಾಗಲೇ ಇಂಡಿಗನತ್ತ ಹಾಗೂ ತೊಳಸಿಕೆರೆ ಗ್ರಾಮಗಳಿಗೆ ಸಂಚಾರವನ್ನು ಪ್ರಾರಂಭಿಸಲಾಗಿದ್ದು, ಈ ಭಾಗದ ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರಿಗೆ ಅನುಕೂಲವಾಗುತಿದ್ದು, ಮುಂದಿನ ದಿನಗಳಲ್ಲಿ ಮೆದಗನಾಣೆ, ದೊಡ್ಡಾಣೆ ಗ್ರಾಮಗಳಿಗೂ ಸಂಚಾರ ಪ್ರಾರಂಭಿಸಲಾಗುವುದು’ ಎಂದು ಸರಸ್ವತಿಯವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT