ಗುರುವಾರ, 13 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು | ಮಹದೇಶ್ವರ ಬೆಟ್ಟಕ್ಕೆ 3 ಸಾವಿರ ಮಂದಿ ಪಾದಯಾತ್ರೆ

Published 4 ನವೆಂಬರ್ 2023, 15:13 IST
Last Updated 4 ನವೆಂಬರ್ 2023, 15:13 IST
ಅಕ್ಷರ ಗಾತ್ರ

ಹನೂರು: ಪಟ್ಟಣದ ಸದ್ಭಾವ ಸೇವಾ ಸಮಿತಿಯಿಂದ ಮಹದೇಶ್ವರ ಬೆಟ್ಟಕ್ಕೆ ಶನಿವಾರ 19ನೇ ವರ್ಷದ ಪಾದಯಾತ್ರೆ ಹಮ್ಮಿಕೊಳ್ಳಲಾಗಿತ್ತು.

ಸೇವಾ ಸಮಿತಿ ಅಧ್ಯಕ್ಷ ಗಂಗಾಧರ್ ಮಾತನಾಡಿ, ‘ಮೊದಲನೇ ಬಾರಿಗೆ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಕೈಗೊಂಡ ಸಂದರ್ಭ ಕೇವಲ ಬೆರಳಕೆಯಷ್ಟು ಭಕ್ತರು ಮಾತ್ರ ಆಗಮಿಸಿದ್ದರು. ತದನಂತರ ಪ್ರತಿ ವರ್ಷ ಭಕ್ತರು ಹೆಚ್ಚಾಗಿ ಇಂದು 3ಸಾವಿರಕ್ಕೂ ಹೆಚ್ಚು ಮಂದಿ ಪಾದಯಾತ್ರೆ ಕೈಗೊಂಡಿದ್ದಾರೆ. ಪ್ರಾರಂಭದಲ್ಲಿ  ಭಕ್ತರ ಸಹಕಾರದಿಂದಲೇ ಅನ್ನದಾನ ನಡೆಸುತ್ತಿದ್ದೆವು. ಆದರೆ, ಕಳೆದ ಐದು ವರ್ಷಗಳಿಂದ ಮಹದೇಶ್ವರ ಬೆಟ್ಟಕ್ಕೆ ತೆರಳುವ ಪಾದಯಾತ್ರಿಗಳಿಗೆ ಹನೂರು ಪಟ್ಟಣ ಸೇರಿ ಸುತ್ತಮುತ್ತಲ ಭಕ್ತರು ಆಹಾರ ಪದಾರ್ಥಗಳು, ಬಾಳೆಹಣ್ಣು, ಅಕ್ಕಿ ತರಕಾರಿ ದವಸ ಧಾನ್ಯಗಳನ್ನು ಉಚಿತವಾಗಿ ಕೊಡುತ್ತಿದ್ದಾರೆ. ಇದರಿಂದ ಪಾದಯಾತ್ರೆ ಕೈಗೊಳ್ಳುವ ಪ್ರತಿ ಭಕ್ತರಿಗೆ ಉಚಿತವಾಗಿ ತಿಂಡಿ ಊಟದ ವ್ಯವಸ್ಥೆ ಮಾಡಲಾಗುತ್ತಿದೆ. ಭಕ್ತರು ನೀಡುವ ಕಾಣಿಕೆ ಪೋಲು ಮಾಡಬಾರದೆಂಬ ದೃಷ್ಟಿಯಿಂದ ಸದ್ಭಾವ ಸೇವಾ ಸಮಿತಿ ರಚನೆ ಮಾಡಿ ಉಳಿತಾಯ ಮಾಡುತ್ತಿದ್ದೇವೆ’ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸದ್ಭಾವ ಸೇವಾ ಸಮಿತಿ ಉಪಾಧ್ಯಕ್ಷ ಶಂಕರ್, ಕಾರ್ಯದರ್ಶಿ ಶಶಿ, ಖಜಾಂಚಿ ನಾರಾಯಣ, ಗುತ್ತಿಗೆದಾರ ನಿಂಗಣ್ಣ, ಕೃಷ್ಣ ಅನಿಲ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT