ಚಾಮರಾಜನಗರ: ಡಿ.21ರಂದು ನಡೆಯುವ ಪಲ್ಸ್ ಪೋಲಿಯೊ ಲಸಿಕಾ ಕಾರ್ಯಕ್ರಮದ ಬಗ್ಗೆ ಜಾಗೃತಿ ಮೂಡಿಸಲು ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಪಲ್ಸ್ ಪೋಲಿಯೊ ಜಾಥಾ ನಡೆಯಿತು.

ನಗರದ ಆರೋಗ್ಯ ಕೇಂದ್ರದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಎಸ್.ಚಿದಂಬರ ಜಾಥಾಗೆ ಚಾಲನೆ ನೀಡಿ ಮಾತನಾಡಿ ‘ಪೋಲಿಯೊ ಮೈಲೈಟಿಸ್ ವೈರಸ್ನಿಂದ ಪೋಲಿಯೊ ಬರಲಿದ್ದು ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಸಂಭಾವ್ಯ ಅಂಗವಿಕಲತೆ ತಡೆಗಟ್ಟಬಹುದು, ಪೋಲಿಯೊ ಕಾಯಿಲೆಯು ಕಲುಷಿತ ನೀರು ಮತ್ತು ಆಹಾರದಿಂದಲೂ ಹರಡುತ್ತದೆ ಎಂದು ಮಾಹಿತಿ ನೀಡಿದರು.

2011ರಲ್ಲಿ ದೇಶದಲ್ಲಿ ಕೊನೆಯದಾಗಿ ಪೋಲಿಯೊ ಪ್ರಕರಣ ವರದಿಯಾಗಿದ್ದು ನಂತರ ಯಾವುದೇ ಪ್ರಕರಣಗಳು ಪತ್ತೆಯಾಗಿಲ್ಲ. 2014ರಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಭಾರತವನ್ನು ‘ಪೋಲಿಯೊ ಮುಕ್ತ ದೇಶ’ ಎಂದು ಘೋಷಿಸಿದೆ. ಆದರೂ ನೆರೆಯ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಅಫ್ಗಾನಿಸ್ಥಾನದಲ್ಲಿ ಕೆಲವು ಪೋಲಿಯೊ ಪ್ರಕರಣಗಳು ವರದಿಯಾಗುತ್ತಿದ್ದು, ಮುಂಜಾಗ್ರತಾ ಕ್ರಮವಾಗಿ ಭಾರತದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ಮುಂದುವರಿಸಲಾಗಿದೆ. ಪೋಲಿಯೊ ನಿರ್ಮೂಲನೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಮನವಿ ಮಾಡಿದರು.

ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ರಾಜೇಶ್ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ ಪಲ್ಸ್ ಪೋಲಿಯೊ ಕಾರ್ಯಕ್ರಮ 21 ರಿಂದ 24ರವರೆಗೆ ನಡೆಯಲಿದ್ದು ಮೂರು ದಿನ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಾಲ್ಕು ದಿನ ಪಟ್ಟಣ ಪ್ರದೇಶಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಹುಟ್ಟಿದ ಮಗುವಿನಿಂದ 5 ವರ್ಷದೊಳಗಿನ ಒಟ್ಟು 61,161 ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದರು.

ಪೋಲಿಯೊ ಲಸಿಕೆ ನೀಡಲು ಜಿಲ್ಲಾ ವ್ಯಾಪ್ತಿಯಲ್ಲಿ 641 ಬೂತ್ಗಳನ್ನು ತೆರೆಯಲಾಗಿದೆ. ಅಭಿಯಾನದಲ್ಲಿ ಜಿಲ್ಲೆಯಲ್ಲಿ 2,528 ವ್ಯಾಕ್ಸಿನೇಟರ್ಗಳು ಹಾಗೂ 130 ಮೇಲ್ವಿಚಾರಕರು ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ. ರಾಜೇಶ್ ಕುಮಾರ್ ತಿಳಿಸಿದರು.

ರೋಟರಿ ಸಂಸ್ಥೆಯ ಅಧ್ಯಕ್ಷ ಕಾಗಲವಾಡಿ ಚಂದ್ರಶೇಖರ್ ಮಾತನಾಡಿ ‘ಪೋಲಿಯೋ ನಿರ್ಮೂಲನೆ ಮಾಡಲು ರೋಟರಿ ಸಂಸ್ಥೆಯು ಕಳೆದ 30 ವರ್ಷಗಳಿಂದ ನಿರಂತರ ಶ್ರಮಿಸುತ್ತಾ ಬಂದಿದೆ. ಮಕ್ಕಳಿಗೆ ಲಸಿಕೆ ಹಾಕಿಸುವ ಮೂಲಕ ಪೋಲಿಯೋ ಮುಕ್ತ ಭಾರತ ನಿರ್ಮಾಣಕ್ಕೆ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.

ಭಾನುವಾರ ಬೆಳಿಗ್ಗೆ 8 ರಿಂದ ಸಂಜೆ 5 ಗಂಟೆವರೆಗೆ ಬೂತ್ಗಳಲ್ಲಿ ಪಲ್ಸ್ ಪೋಲಿಯೋ ಲಸಿಕೆ ನೀಡಲಾಗುವುದು. ಗ್ರಾಮಾಂತರ ಪ್ರದೇಶದಲ್ಲಿ ಆಯಾ ಗ್ರಾಮದಲ್ಲಿರುವ ಶಾಲೆ, ಅಂಗನವಾಡಿ ಕೇಂದ್ರ, ಆರೋಗ್ಯ ಕೇಂದ್ರಗಳಲ್ಲಿ ಪೋಲಿಯೋ ಹನಿ ಹಾಕಲಾಗುವುದು.

ತಾಲ್ಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಲೋಕೇಶ್, ರೋಟರಿ ಸಂಸ್ಥೆಯ ರೊಟೇರಿಯನ್ ಚಂದ್ರಪ್ರಭ ಜೈನ್, ಜಿ.ಎಸ್.ಎಸ್ ನರ್ಸಿಂಗ್ ಶಾಲೆಯ ಬೋಧಕ ಮಧು, ಜಿಲ್ಲಾ ಆರೋಗ್ಯ ಮೇಲ್ವಿಚಾರಣಾಧಿಕಾರಿ ವೆಂಕಟೇಶ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ದೊರೆಸ್ವಾಮಿ ನಾಯ್ಕ, ಜಿಲ್ಲಾ ಶುಶ್ರೂಷಣಾಧಿಕಾರಿ ಮಣಿಯಮ್ಮ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕ ದುಶ್ಯಂತ್ ಕುಮಾರ್ ಹಾಗೂ ಇತರರು ಭಾಗವಹಿಸಿದ್ದರು.

ನಗರದಲ್ಲಿ ಎಲ್ಲೆಲ್ಲಿ ಪೋಲಿಯೊ ಲಸಿಕೆ ಲಭ್ಯ

ಚಾಮರಾಜನಗರ ಪಟ್ಟಣ ವ್ಯಾಪ್ತಿಯಲ್ಲಿ ಅಹಮದ್ ನಗರ ಅಂಗನವಾಡಿ ಕೇಂದ್ರ-1 ಮತ್ತು 2 ಗಾಳಿಪುರ ಅಂಗನವಾಡಿ ಕೇಂದ್ರ-1 ಕೇಂದ್ರ-2 ವರದರಾಜಪುರ ಅಂಗನವಾಡಿ ಕೇಂದ್ರ-2 ರಹಮತ್ ನಗರ ಅಂಗನವಾಡಿ ಕೇಂದ್ರ ಸೋಮವಾರಪೇಟೆ ಅಂಗನವಾಡಿ ಕೇಂದ್ರ ಗಾಡಿಖಾನೆ ಮೊಹಲ್ಲ ಭಂಜಗೇಶ್ವರ ಬಡಾವಣೆ ಬೀಡಿ ಕಾಲೋನಿ ಅಂಗನವಾಡಿ ಕೇಂದ್ರ ಮೇಗಲ ನಾಯಕರ ಬೀದಿ. ಉಪ್ಪಾರ ಬೀದಿ ಮಹದೇಶ್ವರ ಬಡಾವಣೆ ಶಾಲೆ ಗುಂಡ್ಲುಪೇಟೆ ರೋಡ್ ಕೊಳದ ಬೀದಿ ಅಂಗನವಾಡಿ ಕೇಂದ್ರ ಬೀಡಿ ಕಾಲೊನಿ ಉಪ್ಪಾರ ಶಾಲೆ 16ನೇ ವಾರ್ಡ್ ಉಪ್ಪಾರ ಶಾಲೆ 17 18 19ನೇ ವಾರ್ಡ್ಗಳಲ್ಲಿರುವ ಉಪ್ಪಾರ ಬೀದಿ ಅಂಗನವಾಡಿ ಕೇಂದ್ರಗಳು ಜಾಮೀಯಾ ಮಸೀದಿ ಶಾಲೆ ಶಂಕರಪುರ ಅಂಗನವಾಡಿ ಕೇಂದ್ರ ಚೆನ್ನಿಪುರ ಮೋಳೆ ಅಂಗನವಾಡಿ ಕೇಂದ್ರಗಳಲ್ಲಿ ಲಸಿಕಾ ಬೂತ್ಗಳನ್ನು ತೆರೆಯಲಾಗಿದೆ. ರಾಮಸಮುದ್ರ ವ್ಯಾಪ್ತಿಯ ಕುರುಬರ ಬೀದಿ ನಾಯಕರ ಬೀದಿ ದೊಡ್ಡ ಹರಿಜನ ಬೀದಿ ಉರ್ದು ಶಾಲೆ ಚಿಕ್ಕ ಹರಿಜನ ಬೀದಿ ಎ.ಜೆ. ಬೀದಿ ದೇವಾಂಗ ಬೀದಿ ಕೆ.ಪಿ.ಮೊಹಲ್ಲಾ ಅಂಗನವಾಡಿ ಕೇಂದ್ರಗಳು ಕೆ.ಎನ್.ಮೊಹಲ್ಲಾ ಉರ್ದು ಶಾಲೆ ಅಂಬೇಡ್ಕರ್ ಬೀದಿ ಎ.ಜೆ ಬೀದಿ ಕರಿನಂಜನಪುರ ಪಿ.ಡಬ್ಲ್ಯೂ.ಡಿ ಕಾಲೋನಿ ಶಾಲೆ ಭಗೀರಥ ನಗರ ಅಂಗನವಾಡಿ ಕೇಂದ್ರ ರೋಟರಿ ಶಾಲೆ ನಮ್ಮ ಕ್ಲಿನಿಕ್ ಭ್ರಮರಾಂಭ ಬಡಾವಣೆ ಕೆ.ಎಸ್.ಆರ್.ಟಿ. ಬಸ್ ನಿಲ್ದಾಣ ಖಾಸಗಿ ಶಾಲೆ ರೈಲ್ವೆ ನಿಲ್ದಾಣ ಚಾಮರಾಜೇಶ್ವರ ದೇವಸ್ಥಾನ ಸಂತೇಮರಹಳ್ಳಿ ಸರ್ಕಲ್ ಜಿಲ್ಲಾ ಆಸ್ಪತ್ರೆಗಳಲ್ಲಿ ಪೋಲಿಯೊ ಲಸಿಕೆ ಹಾಕಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.