ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲೆಯ ವಿವಿಧೆಡೆ ಸುರಿದ ಮಳೆ

ಚಾಮರಾಜನಗರದಲ್ಲಿ 50 ನಿಮಿಷ, ಹಲವೆಡೆ ತುಂತುರು ಮಳೆ
Last Updated 1 ಡಿಸೆಂಬರ್ 2019, 19:46 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರ, ಸಂತೇಮರಹಳ್ಳಿ, ಹನೂರು, ಕೊಳ್ಳೇಗಾಲ ಪಟ್ಟಣ ಮಹದೇಶ್ವರ ಬೆಟ್ಟ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಭಾನುವಾರ ಸಂಜೆಮಳೆ ಸುರಿಯಿತು.

ಚಾಮರಾಜನಗರ ತಾಲ್ಲೂಕಿನ ಲಿಂಗನಪುರ, ಅರಕಲವಾಡಿಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಮಳೆಯಾಗಿದೆ. ಗುಂಡ್ಲುಪೇಟೆ ತಾಲ್ಲೂಕಿನ ಬೇರಂಬಾಡಿ, ಸಂತೇಮರಹಳ್ಳಿ, ಯಳಂದೂರು ವ್ಯಾಪ್ತಿಯಲ್ಲೂ ಅಲ್ಲಲ್ಲಿ ತುಂತುರು ಮಳೆಯಾಗಿದೆ. ಕೊಳ್ಳೇಗಾಲ ಪಟ್ಟಣ ಹಾಗೂ ತಾಲ್ಲೂಕಿನ ವಿವಿಧ ಕಡೆಗಳಲ್ಲಿ ಜಡಿ ಮಳೆಯಾಗಿದೆ.

ಭಾನುವಾರ ಬೆಳಿಗ್ಗೆಯಿಂದಲೇ ಜಿಲ್ಲೆಯಾದ್ಯಂತ ಬಿಸಿಲು ಮೋಡದವಾತಾವರಣ ಇತ್ತು. ಸಂಜೆಯ ವೇಳೆಗೆ ಮೋಡ ಕಪ್ಪಿಟ್ಟಲು ಆರಂಭಿಸಿತು. ಇದರನಡುವೆ ಚಳಿಯ ವಾತಾವರಣವೂ ಇತ್ತು. ನಗರದಲ್ಲಿ ಸಂಜೆ3.30 ಗಂಟೆಗೆ ಮಳೆ ಆರಂಭವಾಗಿ ಸತತ 50 ನಿಮಿಷದವರೆಗೂ ಸಾಧಾರಣವಾಗಿ ಸುರಿಯಿತು.

ದ್ವಿಚಕ್ರ ವಾಹನ ಸವಾರರು, ರಕ್ಷಣೆಗಾಗಿ ಅಲ್ಲಲ್ಲಿ ನಿಂತಿದ್ದರೆ, ಹೆಲ್ಮೇಟ್‌ ಹಾಕಿಕೊಂಡವರು ಹಾಗೆ ಮುಂದೆ ಸಾಗಿದರು.

ಜನರ ಪರದಾಟ: ಆಗಾಗ ಸುರಿಯುತ್ತಿದ್ದ ತುಂತುರು ಮಳೆಯಿಂದ ಪಾದಚಾರಿಗಳು ರಕ್ಷಣೆಗಾಗಿ ಅಂಗಡಿ ಮಳಿಗೆಗಳ ಆಶ್ರಯ ಪಡೆಯುತ್ತಿದ್ದ ದೃಶ್ಯ ಕಂಡು ಬಂತು.ನಗರದ ದೊಡ್ಡ ಅಂಗಡಿಬೀದಿ, ಚಿಕ್ಕಅಂಗಡಿ ಬೀದಿ, ಬಿ.ರಾಚಯ್ಯ ಜೋಡಿರಸ್ತೆ, ಸಂತೆಮರಹಳ್ಳಿ ವೃತ್ತ, ಗುಂಡ್ಲುಪೇಟೆ ವೃತ್ತ ಸೇರಿದಂತೆ ಬಸ್‌ ನಿಲ್ದಾಣಗಳಲ್ಲಿ ಜನರು ತೊಂದರೆ ಅನುಭವಿಸಿದರು.

ನಗರಸಭೆ ವ್ಯಾಪ್ತಿಯ ತಗ್ಗು ಪ್ರದೇಶಗಳಿಗೆ ನುಗ್ಗಿದ ನೀರು ನಿವಾಸಿಗಳನ್ನು ಕೆಲ ಸಮಯ ಪರದಾಡುವಂತೆ ಮಾಡಿತು.ರಸ್ತೆ ಬದಿ ವ್ಯಾಪಾರಸ್ಥರು ಟಾರ್ಪಲ್‌ ಕಟ್ಟಿಕೊಂಡು ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡು ಬಂತು. ಕೆಲ ತಳ್ಳುಗಾಡಿ ವ್ಯಾಪಾರಿಗಳು ಟಾರ್ಪಲ್‌ ಸುತ್ತಿಕೊಂಡೆ ವ್ಯಾಪಾರ ಮಾಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT