ಯಳಂದೂರು: ‘ಹೆಬ್ಬುಲಬ್ಬರವೂ ಕಿರುಬೋನ ಶೃಂಗಾರವೂ, ಹೆಬ್ಬುಲಿ ಇಡಿದು, ಕಿರುಬೂಲಿ ಮಾಡಿ, ಹೆಬ್ಬೂಲಬ್ಬರವೂ’ ಎಂದು ಬಿಳಿಗಿರಿಬೆಟ್ಟದ ಕಾನನದ ಸೋಲಿಗರು ಜನಪದ ಕಥನ ಕಾವ್ಯದ ಹೊನಲು ಹರಿಸುತ್ತಾರೆ. ಆದರೆ, ಈಚಿನ ದಿನಗಳಲ್ಲಿ ಕಾಡುಜನರ ಸಂಖ್ಯೆ, ಭಾಷೆ ಮತ್ತು ಸಂಸ್ಕೃತಿಯೂ ನಶಿಸುತ್ತ ಸಾಗುತ್ತಿದ್ದು ಸೋಲಿಗ ನುಡಿಯೂ ಕಣ್ಮರೆಯಾಗುತ್ತಿದೆ.

ವರ್ಣಮಾಲೆ ಪಟ ರಚನೆ: ಸೋಲಿಗರ ನುಡಿ ಉಳಿಸುವ ನಿಟ್ಟಿನಲ್ಲಿ ಹಿಂದೆ ಭಾಷಾ ಸಂಶೋಧಕ ಹಾನ್ ಶಿ ಹಾಗೂ ಸಮೀರ ಅಗ್ನಿಹೋತ್ರಿ ಸೋಲಿಗ ಸಮುದಾಯದ ಸಹಕಾರದಲ್ಲಿ ವರ್ಣಮಾಲೆ ಪಟ ರಚಿಸಿ ಪದಗಳ ಅರ್ಥವನ್ನು ಉಲ್ಲೇಖಿಸಿದ್ದು, ಇದನ್ನು ಸೋಲಿಗರ ಮಕ್ಕಳ 1 ರಿಂದ 5ನೇ ತರಗತಿಯ ಪಠ್ಯದಲ್ಲಿ ಪರಿಚಯಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸುತ್ತಾರೆ ಮುಖಂಡರು.

ಸೋಲಿಗ ಭಾಷೆ ಹಾಗೂ ಪದಗಳು ಮರು ಮುನ್ನಲೆಗೆ ಬಂದರೆ ಅಳಿವಿನಂಚಿನಲ್ಲಿರುವ ಭಾಷೆ, ಸಂಸ್ಕೃತಿ ಉಳಿಯಲಿದೆ.

ಸೋಲಿಗ ನುಡಿ ಕೋಷ್ಠಕದ ವಿಶೇಷತೆ: ಅ-ಅಳ್ಳುಗ, ಆ-ಆಲುಪ್ಪೆಮರ, ಆ್ಹ-ಆ್ಹತೆ, ಇ-ಇಟ್ಟು, ಈ-ಈರಣ್ಣನಮರ, ಈ್ಹ-ಈ್ಹಸಿಲುಮರ, ಉ-ಉರುವಟ್ಟಿ, ಊ-ಊಲಿಗಿಡ, ಊ್ಹ-ಊ್ಹತೆ, ಎ-ಎಲಿ, ಏ-ಏಳಿಕೆ, ಏ್ಹ-ಏ್ಹಟೆ, ಐ-ಐಕಗ, ಐ್ಹ-ಐ್ಹಯ, ಒ-ಒಲಿಗೆಮಠ, ಓ-ಓಣಿಉಳು, ಔ್ಹ-ಔ್ಹಸ್ತಿ, ಕ-ಕಾಟೆ, ಗ-ಗುಮ್ಮ, ಜ-ಮಜ, ಚ-ಚೇಳು, ಜ-ಜಗುಳೆ, ಟ-ಟ್ಹಿಯನಕ್ಕಿ, ಡ-ಡಾಬಿನುಉವ್ವ, ಣ-ಮಣ್ಣಕ್ಕಿ, ತ-ತಾರಿಮರ, ದ-ದೊಣ್ಣೆಗನಾಯ್ಹಿ, ನ-ನಳ್ಳಿಸಿಳ್ಳ, ಪ-ಪಿಗ್ಗನಕ್ಕಿ, ಬ-ಬಾಣೆಉಲ್ಲು, ಮ-ಮಿಟ್ಟ, ಯ-ಸ್ಹಾಯ್ಹ, ರ-ರಾಡೆ, ಲ-ಲಕ್ಕೆಮಣ್ಣು, ವ-ವೀರು, ಸ-ಸೊಣೆ, ಹ-ಹುರಿಯನ ಅಂಬು, ಳ-ಸೊಳ್ಳಿ ಉವ್ವ..’ ಹೀಗೆ ಸೋಲಿಗ ನುಡಿಗಳನ್ನು ಕನ್ನಡದೊಂದಿಗೆ ಬರೆಸಿ ಕೋಷ್ಠಕವನ್ನು ರಚಿಸಿದ್ದಾರೆ ಸಂಶೋಧಕರು.

ಸೋಲಿಗ ನುಡಿ ಉಳಿಸಲು ದಶಕದ ಹಿಂದೆ ಶಿಕ್ಷಣ ಇಲಾಖೆ ಕೂಡ ಸೋಲಿಗ ವರ್ಣಮಾಲೆ ರಚಿಸಿ ಪ್ರಾಥಮಿಕ ಹಂತದಲ್ಲಿ ‘ಸೋಲಿಗ ಸಿದ್ಧಿ’ ಪಠ್ಯಕ್ರಮ ಪರಿಚಯಿಸಿತ್ತು. ನಂತರ ಸಂಶೋಧಕರು ಕಾಡುಜನರ ಮೂಲಪದಗಳನ್ನು ಪಟ್ಟಿ ಮಾಡಿ, ಸೋಲಿಗ ನುಡಿಗೆ ಕನ್ನಡ ಲಿಪಿ ಬಳಸಿ 50 ಅಕ್ಷರಗಳ ಪಟ್ಟಿ ಮಾಡಿದ್ದರು.

ಗಿರಿವಾಸಿಗಳ ಸಲಹೆ ಪಡೆದು ಚರ್ಚಿಸಿ ಮಕ್ಕಳು ಬಳಸುವಂತೆ ಲಿಪಿ ವಿನ್ಯಾಸ ಮಾಡಲಾಗಿತ್ತು. ಸೋಲಿಗ ಭಾಷೆಯ ಪದೋತ್ಪತ್ತಿ, ಉಚ್ಚಾರಣೆಗಳಿಗೆ ಕನ್ನಡ ನುಡಿಯನ್ನೇ ಆಧಾರವಾಗಿಟ್ಟುಕೊಂಡು ಪೋಡಿನ ಸಮುದಾಯಗಳ ಭಾಷಾ ವೈವಿಧ್ಯತೆ ಗುರುತಿಸುವ, ಗೌರವಿಸುವ ಕೆಲಸವನ್ನು ಮಾಡಲಾಗಿತ್ತು.

ವರ್ಣಮಾಲೆಯಲ್ಲಿ ಕನ್ನಡ ಭಾಷೆಗೂ ಸೋಲಿಗ ನುಡಿಗೂ ಇರುವ ವ್ಯತ್ಯಾಸ ಪಟ್ಟಿ ಮಾಡಲಾಗಿದೆ. ಕಾಡುಜನರಲ್ಲಿ ಖ, ಘ, ಛ, ಝ, ಳ, ಢ, ಷ, ಕ, ಇಂ ಪದಗಳ ಬಳಕೆ ಇಲ್ಲ. ಇದೇ ರೀತಿ ಫ, ವ ಅಕ್ಷರಗಳಿಗೆ ಒತ್ತಕ್ಷರಗಳಾಗಿ ಅ ಮತ್ತು ವ್ವ ಅಕ್ಷರಗಳಿವೆ. ಕೆಲವು ಪದ ಹಾಗೂ ಸ್ವರಾಕ್ಷರಗಳನ್ನು ಮೂಗಿನಿಂದ ಉಚ್ಚರಿಸಬೇಕು. ಕೆಲ ಅಕ್ಷರಗಳನ್ನು ಬರಹದಲ್ಲಿ ಅರ್ಧ ಅಕ್ಷರ ಇಲ್ಲವೆ ಒತ್ತಕ್ಷರಗಳಾಗಿ ಬಳಸಬೇಕು. ಸೋಲಿಗರು ಮಕ್ಕಳನ್ನು ಕುನ್ಹ, ಕುನ್ನಿ ಎಂತಲೂ, ಹೆಣ್ಣು ಮಕ್ಕಳನ್ನು ‘ಮಗಾ’ ಎಂತಲೂ, ಬಾಲಕರನ್ನು ಮಣ ಎಂದು ಕರೆಯುತ್ತಾರೆ ಎಂದು ಸೋಲಿಗ ಸಂಘದ ಜಿಲ್ಲಾ ಘಟಕದ ಕಾರ್ಯದರ್ಶಿ ಸಿ.ಮಾದೇಗೌಡ ಹೇಳುತ್ತಾರೆ.

ಅಳಿವಿನಂಚಿನಲ್ಲಿ ಸೋದರ ಭಾಷೆ

ಜಿಲ್ಲೆಯಲ್ಲಿ ಸೋಲಿಗರ ಜನಸಂಖ್ಯೆ 45000ದಷ್ಟಿದೆ. ಬಿಳಿಗಿರಿಬೆಟ್ಟದಲ್ಲಿ 15 ಸಾವಿರ ಮಂದಿ ವಾಸಿಸುತ್ತಾರೆ. ಬೆಳ್ಳೂರುಕುಲ ತೆನೆಯರಕುಲ ಸೂರಿರು ಆಲರು ಸೆಳಿಕುರು ಸೇರಿ 7 ಕುಲಗಳಿದ್ದು ಪ್ರತಿಯೊಂದರಲ್ಲೂ ಭಾಷಾ ಬಳಕೆಯಲ್ಲಿ ಭಿನ್ನತೆ ಇದೆ. ತಮಿಳುನಾಡು ಪುಣಜೂರು ಮಹದೇಶ್ವರಬೆಟ್ಟ ಬಂಡಿಪುರಗಳಲ್ಲೂ ವಿಶೇಷ ನುಡಿ ಪ್ರಕಾರಗಳಿವೆ. ಬುಡಕಟ್ಟು ಸಂಪ್ರದಾಯ ಮತ್ತು ಆಚಾರ ವಿಚಾರಗಳನ್ನು ಬಿಂಬಿಸುವ ‘ಸೋಲಿಗ ನುಡಿ’ ಬಳಸುವವರ ಸಂಖ್ಯೆ ಕಡಿಮೆಯಾಗುತ್ತಿದೆ. 1 ರಿಂದ 5ನೇ ತರಗತಿ ಪಠ್ಯದಲ್ಲಿ ಸೋಲಿಗ ನುಡಿ ಪರಿಚಯಿಸಬೇಕು ಆ ಮೂಲಕ ಸಮುದಾಯದ ಅಸ್ಮಿತೆ ಉಳಿಸಿ ಕಾನನದ ಜೀವ ಪರಿಸರದ ಶಬ್ಧಗಳು ಮೂಲ ಭಾಷೆಯಲ್ಲಿ ಸಿಗುವಂತೆ ಆಗಬೇಕು ಎನ್ನುತ್ತಾರೆ ಮುಖಂಡ ಬೊಮ್ಮಯ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.