ಚಾಮರಾಜನಗರ: ಮಾರುಕಟ್ಟೆಯಲ್ಲಿ ಟೊಮೆಟೊ ದರ ಗಗನಕ್ಕೇರಿದ್ದು ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕಳೆದ ವಾರ ಕೆ.ಜಿಗೆ 60ಕ್ಕೆ ಸಿಗುತ್ತಿದ್ದ ಟೊಮೆಟೊ ಪ್ರಸ್ತುತ ₹ 80 ರಿಂದ 100ಕ್ಕೆ ಹೆಚ್ಚಾಗಿದೆ. ತರಕಾರಿ ಮಳಿಗೆಗಳಲ್ಲಿ ಟೊಮೆಟೊ ದರ ಕೇಳಿ ಸಾರ್ವಜನಿಕರು ಹೌಹಾರುತ್ತಿದ್ದಾರೆ.

ಕುಸಿದ ಖರೀದಿ ಪ್ರಮಾಣ: ಸಸ್ಯಾಹಾರ ಹಾಗೂ ಮಾಂಸಾಹಾರ ಖಾದ್ಯಗಳ ತಯಾರಿಯಲ್ಲಿ ಟೊಮೆಟೊ ಪ್ರಮುಖವಾಗಿ ಬಳಕೆ ಮಾಡುವುದರಿಂದ ಹೋಟೆಲ್ ಉದ್ಯಮಕ್ಕೂ ದರ ಏರಿಕೆ ಬಿಸಿ ತಟ್ಟಿದೆ. ಗೃಹಿಣಿಯರು ಕೂಡ ಖರೀದಿಸಲೇಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ದರ ಹೆಚ್ಚಾಗಿರುವುದರಿಂದ ಖರೀದಿ ಪ್ರಮಾಣದಲ್ಲಿ ಇಳಿಕೆಯಾಗಿದೆ.

ಸಾಮಾನ್ಯವಾಗಿ ದರ ಕಡಿಮೆ ಇದ್ದಾಗ ಎರಡರಿಂದ ಮೂರು ಕೆ.ಜಿಯಷ್ಟು ಟೊಮೆಟೊ ಖರೀದಿಸುತ್ತಿದ್ದ ಗ್ರಾಹಕರು ಈಗ ಅರ್ಧ ಕೆ.ಜಿಯಿಂದ 1 ಕೆ.ಜಿ ಮಾತ್ರ ಕೊಳ್ಳುತ್ತಿದ್ದಾರೆ. ಮಾರುಕಟ್ಟೆಗೆ ಹೀಗೆ ಪೂರೈಕೆ ತಗ್ಗಿದರೆ ಟೊಮೆಟೊ ದರ ಶತಕದ ಗಡಿ ದಾಟಲಿದೆ ಎನ್ನುತ್ತಾರೆ ವ್ಯಾಪಾರಿಗಳು.

ಜಿಲ್ಲೆಗೆ ನೆರೆಯ ತಮಿಳುನಾಡಿನಿಂದ ಬರುತ್ತಿದ್ದ ಟೊಮೆಟೊ ಪೂರೈಕೆ ಕಡಿಮೆಯಾಗಿರುವುದು ಹಾಗೂ ಜಿಲ್ಲೆಯಲ್ಲಿ ಕಡಿಮೆ ಪ್ರಮಾಣದಲ್ಲಿ ಟೊಮೆಟೊ ಬೆಳೆದಿರುವುದು ದರ ಹೆಚ್ಚಳಕ್ಕೆ ಕಾರಣವಾಗಿದೆ ಎನ್ನುತ್ತಾರೆ ತರಕಾರಿ ಮಾರಾಟಗಾರ ಮಧುಸೂದನ್.

ಅಗ್ಗವಾಗಿದ್ದ ಈರುಳ್ಳಿ ದರವೂ ಏರುಗತಿಯಲ್ಲಿ ಸಾಗುತ್ತಿದೆ. 20 ದಿನಗಳ ಹಿಂದಷ್ಟೆ ₹ 100ಕ್ಕೆ 5 ರಿಂದ 6 ಕೆ.ಜಿ ದೊರೆಯುತ್ತಿದ್ದ ಈರುಳ್ಳಿ ಪ್ರಸ್ತುತ ಕೆಜಿಗೆ ₹ 40 ರಿಂದ 45ಕ್ಕೆ ಏರಿಕೆಯಾಗಿದೆ. ಬೀನ್ಸ್ ದರವೂ ದುಬಾರಿಯಾಗಿದ್ದು ಕೆ.ಜಿಗೆ 60ಕ್ಕೆ ಮಾರಾಟವಾಗುತ್ತಿದೆ. ಕಳೆದ ವಾರಕ್ಕೆ ಹೋಲಿಸಿದರೆ ಕ್ಯಾರೆಟ್ ದರವೂ ಹೆಚ್ಚಾಗಿದ್ದು ₹ 20 ರಿಂದ ಏಕಾಏಕಿ 40ಕ್ಕೆ ಜಿಗಿದಿದೆ.

ನುಗ್ಗೆಕಾಯಿ ದರ ಅಲ್ಪ ಇಳಿಕೆ: ಕೆ.ಜಿಗೆ ₹ 500 ದಾಟಿದ್ದ ನುಗ್ಗೆಕಾಯಿ ಪ್ರಸ್ತುತ ₹ 300ಕ್ಕೆ ಇಳಿಕೆಯಾಗಿದೆ. ದರ ಇಳಿಕೆಯಾದರೂ ಗ್ರಾಹಕರು ಖರೀದಿಗೆ ಆಸಕ್ತಿ ತೋರುತ್ತಿಲ್ಲ, ಕೆಲವರು ಎರಡರಿಂದ ಮೂರು ಕಾಯಿಗಳನಷ್ಟೆ ಖರೀದಿ ಮಾಡುತ್ತಿದ್ದಾರಷ್ಟೆ ಎನ್ನುತ್ತಾರೆ ವ್ಯಾಪಾರಿ ಮಹೇಶ್.

ಮೊಟ್ಟೆಯೂ ದುಬಾರಿ: ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮಾಂಸ ಹಾಗೂ ಕೋಳಿ ಮಟ್ಟೆಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದ್ದು ಅಂಗಡಿಗಳಲ್ಲಿ ಚಿಲ್ಲರೆ ಖರೀದಿಸಿದರೆ ಒಂದು ಮೊಟ್ಟೆಗೆ 8 ದರ ಇದೆ. ಸಗಟಾಗಿ ಖರೀದಿಸಿದರೆ 7.50ಕ್ಕೆ ದೊರೆಯುತ್ತಿದೆ. ಚಿಕನ್ ದರವೂ ಹೆಚ್ಚಾಗಿದ್ದು ಕೆ.ಜಿಗೆ 220 (ವಿತ್ ಸ್ಕಿನ್), 240 (ಚರ್ಮ ರಹಿತ) ಇದೆ. ಕುರಿ, ಮೇಕೆ ಮಾಂಸದ ದರವೂ ಏರಿಕೆಯಾಗಿದ್ದು ಕೆ.ಜಿಗೆ 700 ರಿಂದ 800 ಇದೆ.

ಬಾಳೆಹಣ್ಣು ದರ ಅಲ್ಪ ಹೆಚ್ಚಾಗಿದ್ದು ಕೆ.ಜಿಗೆ 60 ರಿಂದ 70 ಇದೆ. ಕಳೆದವಾರ 50ಕ್ಕೆ ಕುಸಿತವಾಗಿತ್ತು. ಪಚ್ಚಬಾಳೆ 40, ಸಪೋಟ 60 ರಿಂದ 80, ಪಪ್ಪಾಯ 20 ದರ ಇದೆ.

ತರಕಾರಿ ದರ (ಕೆ.ಜಿ.ಗೆ ₹ ಗಳಲ್ಲಿ)

ಈರುಳ್ಳಿ;35;45 ಟೊಮೆಟೊ;80–100 ಕ್ಯಾರೆಟ್;40 ಬೀನ್ಸ್;60 ಹಿರೇಕಾಯಿ;40 ಬದನೆಕಾಯಿ;20–30 ಆಲೂಗಡ್ಡೆ;40 ತೊಗರಿಕಾಯಿ;60 ಹೂಕೋಸು;20-30 ಎಲೆಕೋಸು;15–20 ಅವರೆಕಾಯಿ;50–60 ಶುಂಠಿ;70 ಬೆಳ್ಳುಳ್ಳಿ;100 ಮೂಲಂಗಿ;30 ಕ್ಯಾಪ್ಸಿಕಂ;50 ಬೀಟ್ರೂಟ್;40 ತೊಂಡೆಕಾಯಿ;40–50 ಚವಳಿಕಾಯಿ;40 ಗೆಡ್ಡೆಕೋಸು;40–50 ಅಲಸಂದೆ;50 ಕುಂಬಳ;20–25 ಬಜ್ಜಿ ಮೆಣಸಿನಕಾಯಿ;60 ತೆಂಗಿನಕಾಯಿ;50 ನುಗ್ಗೆ;300 ಹಾಗಲಕಾಯಿ;40–50 ಈರೇಕಾಯಿ;40

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.