ಚಾಮರಾಜನಗರ: ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘದ ಖಾಯಂ ಆಹ್ವಾನಿತ ಹೆಗ್ಗವಾಡಿಪುರ ಮಹೇಶ್ ಒತ್ತಾಯಿಸಿದರು.

ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ 90ನೇ ವರ್ಷದ ಜನ್ಮದಿನಾಚರಣೆ ಅಂಗವಾಗಿ ತಾಲ್ಲೂಕಿನ ಹೊಂಡರಬಾಳು ಅಮೃತ ಭೂಮಿಯಲ್ಲಿರುವ ಎಂಡಿಎನ್ ಸ್ಮಾರಕಕ್ಕೆ ಗೌರವ ನಮನ ಸಲ್ಲಿಸಿ ಮಾತನಾಡಿ, ರೈತ ಚೇತನ ಪ್ರೊ.ಎಂ.ಎನ್.ನಂಜುಂಡಸ್ವಾಮಿ ಅವರ ಸಾಧನೆಯ ಬಗ್ಗೆ ಕೇಂದ್ರ, ರಾಜ್ಯ ಸರ್ಕಾರಗಳು ನಿರ್ಲಕ್ಷ್ಯ ತೋರಿರುವುದು ನೋವಿನ ಸಂಗತಿ. ಕೃಷಿ ಕ್ಷೇತ್ರದ ಅಭಿವೃದ್ಧಿ ನಿಟ್ಟಿನಲ್ಲಿ ಪ್ರೊ.ಎಂ.ಡಿ.ಎನ್ ಅವರಿಗೆ ಭಾರತರತ್ನ ಪ್ರಶಸ್ತಿ ನೀಡಬೇಕು. ಪಠ್ಯಪುಸ್ತಕದಲ್ಲಿ ಅವರ ವಿಚಾರಗಳನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎ.ಎಂ.ಮಹೇಶ್ ಪ್ರಭು ಮಾತನಾಡಿ, ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಆದರ್ಶಗಳು ಚಿರಾಯವಾಗಲಿ, ಅವರ ಆಶಯಗಳನ್ನು ಈಡೇರಿಸಬೇಕಿರುವುದು ರೈತ ಸಂಘಗಳ ಬದ್ಧತೆ ಎಂದರು.

ರಾಜ್ಯ ರೈತ ಸಂಘದ ವಿಭಾಗೀಯ ಕಾರ್ಯದರ್ಶಿ ಸಿ.ಸಿದ್ದರಾಜು, ಖಜಾಂಚಿ ಬಾಬು, ಅಲೂರು ಜಯಣ್ಣ, ಮಲ್ಲನಗೌಡ, ಬಾಬು, ಭೂಪತಿ ಚಿನ್ನಸ್ವಾಮಿ ಗೌಂಡರ್, ಯಶವಂತ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.