ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೈಕೊಟ್ಟ ಮತಯಂತ್ರ, ಮತದಾರರ ಪರದಾಟ

Last Updated 10 ಏಪ್ರಿಲ್ 2017, 8:29 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯ ಮತದಾನ ಭಾನುವಾರ ಆರಂಭವಾದ ಕೆಲವೇ ಹೊತ್ತಿನಲ್ಲಿ ಹಲವು ಮತಗಟ್ಟೆಗಳಲ್ಲಿ ವಿದ್ಯುನ್ಮಾನ ಮತಯಂತ್ರಗಳು ಕೈಕೊಟ್ಟು ಮತದಾರರು ಪರದಾಡಿದ ಘಟನೆಗಳು ನಡೆದಿವೆ.

ತಾಲೂಕಿನ ಮಡಹಳ್ಳಿ, ಭೀಮನ ಬೀಡು, ಕೆಲಸೂರು, ತ್ರಿಯಂಬಕಪುರ, ಕುಂದಕರೆ, ತೆರಕಣಾಂಬಿಹುಂಡಿ, ತೆರಕ ಣಾಂಬಿ, ಸೋಮಹಳ್ಳಿ ಗ್ರಾಮಗಳ ವ್ಯಾಪ್ತಿ ಯಲ್ಲಿ 23 ಮತಗಟ್ಟೆಗಳಲ್ಲಿ ಮತಯಂತ್ರ ಗಳು ಕೈಕೊಟ್ಟ ಪ್ರಕರಣಗಳು ನಡೆದಿವೆ.

ಬೆಳಗ್ಗೆ 7ಕ್ಕೆ ಮತದಾನ ಆರಂಭ ವಾಯಿತು. ಮತದಾನ ಮಾಡಿ ತಮ್ಮ ಕೆಲಸಗಳಿಗೆ ತೆರಳಲು ಸಜ್ಜಾಗಿದ್ದ ಹಲ ವರು, ಮತಯಂತ್ರದ ದೋಷದಿಂದಾಗಿ ಕಾಯುವ ಅನಿವಾರ್ಯತೆ ಸೃಷ್ಟಿಯಾಗಿತ್ತು.

ಇದರಿಂದಾಗಿ ಹಲವರು ಮತ ಚಲಾಯಿಸದೇ ವಾಪಸ್ ತೆರಳಿದ ಪ್ರಸಂಗವೂ ನಡೆದಿದೆ. ನಂತರ ಪರಿಣಿತರನ್ನು ಕರೆಯಿಸಿ ಸರಿಪಡಿಸಿದ ಬಳಿಕ ಸುಗಮ ಮತದಾನ ನಡೆಯಿತು.

ವಾಗ್ವಾದ:  ತಾಲೂಕಿನ ಬೇಗೂರು ಗ್ರಾಮದಲ್ಲಿ ಮತದಾನದ ವೇಳೆ ಕಾಂಗ್ರೆಸ್‌ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆದಿದೆ.ಬೇಗೂರು ಗ್ರಾಮದ ಮತಗಟ್ಟೆ ಸಂಖ್ಯೆ 18, 19, 20ರ ಮುಂದೆ ಕಾಂಗ್ರೆಸ್‌ ಕಾರ್ಯಕರ್ತರು ಪ್ರಚಾರ ಮಾಡುತ್ತಿದ್ದರು ಎನ್ನ ಲಾಗಿದೆ. ಇದಕ್ಕೆ ಬಿಜೆಪಿ ಕಾರ್ಯಕರ್ತರು ತಕರಾರು ತೆಗೆದರು.ಉಭಯ ಪಕ್ಷದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಬೇಗೂರು ಠಾಣೆಯ ಪೊಲೀಸರು ಕಾರ್ಯಕರ್ತರನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT