ಕರಿಮೆಣಸು ಇಳುವರಿ ಕುಸಿಯುವ ಆತಂಕ

7
ಹಿಂಗಾರು ಕೊರತೆ; ಗಿಡಗಳಲ್ಲಿ ಹೂವಿನ ಎರೆಗಳು ಅಷ್ಟಾಗಿ ಕಾಣುತ್ತಿಲ್ಲ

ಕರಿಮೆಣಸು ಇಳುವರಿ ಕುಸಿಯುವ ಆತಂಕ

Published:
Updated:

ಯಳಂದೂರು: ಬಹುವಾರ್ಷಿಕ ಬಳ್ಳಿ ಕರಿಮೆಣಸು (ಪೈಪರ್ ನೀಗ್ರಮ್) ಹಿಂಗಾರು ಮಳೆ ಕೊರತೆಯಿಂದ ಹೂ ಕಾಣಿಸದೆ ಇಳುವರಿ ಕುಸಿಯುವ ಆತಂಕ ಎದುರಾಗಿದೆ.

ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ಬಹುತೇಕ ಕೃಷಿಕರು ಕಾಫಿ, ಏಲಕ್ಕಿಯೊಡನೆ ಕರಿಮೆಣಸನ್ನು ಬೆಳೆಯುತ್ತಾರೆ. ತಂಪು ಉಷ್ಣತೆ, ಸಾಕಷ್ಟು ಮಳೆ ಹಾಗೂ ತಂಪು ಹವಾಗುಣ ಬಯಸುವ ತೋಟಗಾರಿಕಾ ಬೆಳೆ ಮೆಣಸನ್ನು ಬಹುತೇಕ ಪೋಡುಗಳ ಸುತ್ತಮುತ್ತ ಕಾಣಬಹುದು.

ಕರಿಮೆಣಸು ಮೇ–ಜೂನ್‌ ತಿಂಗಳಲ್ಲಿ ಹೂಗಳನ್ನು ಬಿಟ್ಟು, 6ರಿಂದ 8 ತಿಂಗಳಲ್ಲಿ ಕಾಯಿಕಟ್ಟಿ ಕೊಯ್ಲಿಗೆ ಬರುತ್ತದೆ. ಆದರೆ, ಈಗ ಹೂವಿನ ಎರೆಗಳು ಅಷ್ಟಾಗಿ ಕಾಣುತ್ತಿಲ್ಲ. ಹಿಂಗಾರು ಮಳೆ ಸಕಾಲದಲ್ಲಿ ಸುರಿಯದ ಕಾರಣ ಈಗ ಮಳೆ ಬಿದ್ದರೂ ಬಳ್ಳಿಗೆ ಪ್ರಯೋಜನವಿಲ್ಲ. ಹೀಗಾಗಿ, ಇಳುವರಿ ಕುಸಿಯುವ ಆತಂಕ ಬೆಳೆಗಾರರಲ್ಲಿ ಉಂಟಾಗಿದೆ ಎನ್ನುತ್ತಾರೆ ಹೊಸಪೋಡಿನ ನಂಜೇಗೌಡ.

‘ತೋಟಗಾರಿಕಾ ಕೃಷಿಗೆ ಅಗತ್ಯವಾದ ಮಳೆ ಕಳೆದ ವರ್ಷ ಸುರಿದಿತ್ತು. 2017ರಲ್ಲಿ 1,716 ಮಿ.ಮೀ ಮಳೆ ಸುರಿದಿದೆ. 2018ರ ಜನವರಿಯಿಂದ ಜೂನ್ ಅಂತ್ಯಕ್ಕೆ 164 ಮಿ.ಮೀ ಮಳೆ ಬಂದಿದೆ. ಜೂನ್‌ ತಿಂಗಳಿಗೂ ಮುನ್ನ ಪೂರ್ವ ಮುಂಗಾರು ನಿರೀಕ್ಷಿಸಿದಷ್ಟು ಆಗಿಲ್ಲ. ಗುಣಮಟ್ಟದ ಕಾಳನ್ನು ಪಡೆಯಲು 10ರಿಂದ 40 ಡಿಗ್ರಿ ಸೆಂಟಿಗ್ರೇಡ್‌ ಉಷ್ಣಾಂಶ ಹಾಗೂ ವಾರ್ಷಿಕ 125ರಿಂದ 200 ಸೆಂಟಿ ಮೀಟರ್ ಮಳೆ ಅಗತ್ಯ’ ಎನ್ನುತ್ತಾರೆ ಕೃಷಿ ಅಧಿಕಾರಿ ದೊಡ್ಡೇಗೌಡ.‌

ಕಳೆದ ಬಾರಿ ಮೆಣಸಿನ ಫಸಲು ಕೈಹಿಡಿದಿತ್ತು. ಉತ್ತಮ ಧಾರಣೆಯೂ ದಕ್ಕಿತ್ತು. ಈ ಬಾರಿ ನಿರೀಕ್ಷಿಸಿದಷ್ಟು ಫಸಲು ಕೈಸೇರದು ಎನ್ನುತ್ತಾರೆ ಹಿಡುವಳಿದಾರ ಸೀಗೇಗೌಡ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !