ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

7

ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

Published:
Updated:
Deccan Herald

ಚಾಮರಾಜನಗರ: ಕನಿಷ್ಠ ವೇತನ ಕಾಯ್ದೆ ಅನ್ವಯ ವೇತನ ನೀಡಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ಸರ್ಕಾರಿ ಗ್ರಾಮ ಪಂಚಾಯಿತಿ ನೌಕರರ, ಅಕ್ಷಕ ದಾಸೋಹ ಅಡುಗೆಯವರ, ಸಹಾಯಕಿಯರ ಮತ್ತು ಕಂಪ್ಯೂಟರ್‌ ಆಪರೇಟರ್ಸ್‌ ಅವರ ಮಹಾ ಮಂಡಲದ ಜಿಲ್ಲಾ ಘಟಕದ ಪದಾಧಿಕಾರಿಗಳು ಸೋಮವಾರ ಪ್ರತಿಭಟನೆ ನಡೆಸಿದರು.

ಪಟ್ಟಣದ ಹಳೆ ಬಸ್‌ ನಿಲ್ದಾಣದ ಮಾರಿಗುಡಿ ಮುಂಭಾಗದಿಂದ ಮೆರವಣಿಗೆ ಆರಂಭಿಸಿದ ಪ್ರತಿಭಟನಾಕಾರರು, ಚಾಮರಾಜೇಶ್ವರ ದೇವಸ್ಥಾನ, ಭುವನೇಶ್ವರಿ ವೃತ್ತ, ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸಮಾವೇಶಗೊಂಡರು. ಬಳಿಕ ಯಳಂದೂರು ತಹಶೀಲ್ದಾರ್‌ ಚಂದ್ರಮೌಳಿ ಅವರಿಗೆ ಮನವಿಪತ್ರ ನೀಡಿದರು. 

ಜಿಲ್ಲೆಯ 133 ಗ್ರಾಮ ಪಂಚಾಯಿತಿಗಳಲ್ಲಿ 1,262 ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ 30 ವರ್ಷಗಳಿಂದ ಕಡಿಮೆ ವೇತನ ಪಡೆಯುವವರು ಇದ್ದಾರೆ. ಎಲ್ಲರಿಗೂ ಕಾರ್ಮಿಕ ಇಲಾಖೆ ಆದೇಶದ ಅನ್ವಯ 2008ರಿಂದ ಕನಿಷ್ಠ ವೇತನ ನೀಡಬೇಕು. ಕಾಯಂ ನೌಕರರಾಗಿ ಮಾಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

‘30 ವರ್ಷಗಳ ಹಿಂದೆ ಬಿಲ್‌ ಕಲೆಕ್ಟರ್‌, ಅಕೌಂಟೆಂಟ‌್, ಬೆರಳಚ್ಚುದಾರರಿಗೆ ಯಾವುದೇ ಶೈಕ್ಷಣಿಕ ಮಾನದಂಡ ವಿಧಿಸಿರಲಿಲ್ಲ. ಪಂಚಾಯತ್‌ ರಾಜ್‌ ಕಾಯ್ದೆ ಅನ್ವಯ ಗ್ರಾಮ ಪಂಚಾಯಿತಿಗಳು ಕೆಲಸಕ್ಕೆ ಸೇರಿಸಿಕೊಂಡಿವೆ. ಪ್ರಸ್ತುತ ಸರ್ಕಾರ ನಿಗದಿಪಡಿಸಿರುವ, ಶಿಕ್ಷಣ ಹೊಂದಿಲ್ಲದ ನೌಕರರಿಗೆ ವೇತನ ನೀಡದಂತೆ ಗ್ರಾಮ ಪಂಚಾಯಿತಿಗಳು ತಡೆ ಹಿಡಿದಿವೆ. ಕೂಡಲೇ ನೌಕರರಿಗೆ ವೇತನ ನೀಡಲು ಕ್ರಮ ಕೈಗೊಳ್ಳಬೇಕು. ಸರ್ಕಾರ 30 ವರ್ಷದ ಹಿಂದಿನ ಆದೇಶವನ್ನೇ ಮುಂದುವರಿಸಬೇಕು’ ಎಂದು ಮನವಿ ಮಾಡಿದರು.

ಮಹಾಮಂಡಲದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಸ್ .ಪ್ರಕಾಶ್, ತಾಲ್ಲೂಕು ಘಟಕದ ಅಧ್ಯಕ್ಷ ಶಿವಣ್ಣ, ಕೊಳ್ಳೇಗಾಲ ತಾಲ್ಲೂಕು ಅಧ್ಯಕ್ಷ ಕೆಂಪಣ್ಣ, ಕಾರ್ಯದರ್ಶಿ ಕೆ.ಮಲ್ಲಯ್ಯ, ಕಾರ್ಯದರ್ಶಿಗಳಾದ ಧರ್ಮರಾಜು, ಷಫಿ, ಅಡುಗೆ ಸಹಾಯಕಿಯರಾದ ವಸಂತಾ, ವಿಶಾಲಾಕ್ಷಿ, ರತ್ನಮ್ಮ, ಜಯಮ್ಮ ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !