ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿಗೆ ಶೇ 3.73ರಷ್ಟು ಹೆಚ್ಚಳ

ಮತ ಚಲಾವಣೆ: ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿದ ಬಿಜೆಪಿ
Last Updated 17 ಮೇ 2018, 9:42 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಆರು ಕ್ಷೇತ್ರಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸುವ ಮೂಲಕ ಬಿಜೆಪಿಯು ಶೇ 66.66 ರಷ್ಟು ಯಶಸ್ಸು ಸಾಧಿಸಿದರೂ, ಒಟ್ಟು ಮತ ಗಳಿಕೆ ಪ್ರಮಾಣದಲ್ಲಿ ಕಾಂಗ್ರೆಸ್‌ಗಿಂತ ಕೇವಲ ಶೇ 3.73 ಮಾತ್ರ ಮುಂದಿದೆ.
ಜಿಲ್ಲೆಯ ಆರೂ ಕ್ಷೇತ್ರಗಳಿಂದ ಬಿಜೆಪಿ ಮತ್ತು ಕಾಂಗ್ರೆಸ್ ಅಭ್ಯರ್ಥಿಗಳು ಸ್ಪರ್ಧಿಸಿದ್ದರು. ಈ ಪೈಕಿ ಒಟ್ಟು ಮತಗಳಿಕೆ ಪೈಕಿ ಬಿಜೆಪಿ ಮುಂದಿದೆ. ಜೆಡಿಎಸ್ ಮತ್ತು ಬಿಎಸ್ಪಿ ಮೈತ್ರಿಯು ಶೇ 1.02ರಷ್ಟು ಮತ ಪಡೆಯುವಲ್ಲಿ ಮಾತ್ರ ಯಶಸ್ವಿಯಾಗಿದೆ.

ಕೊನೆ ತನಕ ಫೈಟ್‌ ಮಾಡಿ ಬಿಜೆಪಿ ಟಿಕೆಟ್‌ ಪಡೆದ ಹಾವೇರಿಯ ನೆಹರು ಓಲೇಕಾರ (86,565) ಜಿಲ್ಲೆಯ 64 ಅಭ್ಯರ್ಥಿಗಳ ಪೈಕಿ ಗರಿಷ್ಠ ಮತ ಪಡೆದರೆ, ಆಸ್ಪತ್ರೆಗೆ ದಾಖಲಾಗಿ ‘ಆತ್ಮಹತ್ಯೆ ಯತ್ನ’ ಎಂದು ಸುದ್ದಿಯಾಗಿದ್ದ ಹಿರೇಕೆರೂರಿನ ಕೆಜೆಪಿಯ ಹರೀಶ ಇಂಗಳಗೊಂದಿ ಅತಿಕಡಿಮೆ (91) ಮತ ಪಡೆದಿದ್ದಾರೆ. ಆದರೆ, ಬ್ಯಾಡಗಿಯ ಬಿಜೆಪಿ ಅಭ್ಯರ್ಥಿ ವಿರೂಪಾಕ್ಷಪ್ಪ ಬಳ್ಳಾರಿ ಅತ್ಯಧಿಕ ಮತಗಳ ಅಂತರದಲ್ಲಿ (21,271) ಜಯ ಗಳಿಸಿದ್ದಾರೆ. ಹಿರೇಕೆರೂರಿನ ಕಾಂಗ್ರೆಸ್‌ನ ಬಿ.ಸಿ. ಪಾಟೀಲ್ ಅತಿ ಕಡಿಮೆ (555) ಅಂತರದಲ್ಲಿ ಜಯ ಗಳಿಸಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿಗಳ ಪೈಕಿ ಹಾವೇರಿ ರುದ್ರಪ್ಪ ಲಮಾಣಿ ಅತ್ಯಧಿಕ ಮತ (75,261) ಪಡೆದರೆ, ರಾಣೆಬೆನ್ನೂರಿನ ಕೆ.ಬಿ. ಕೋಳಿವಾಡ ಅತಿ ಕಡಿಮೆ (59,572) ಮತ ಪಡೆದ ಕಾಂಗ್ರೆಸ್ ಅಭ್ಯರ್ಥಿ. ಇಬ್ಬರೂ ಗೆಲ್ಲುವಲ್ಲಿ ವಿಫಲರಾಗಿದ್ದಾರೆ. ಜೆಡಿಎಸ್ ಅಭ್ಯರ್ಥಿಗಳ ಪೈಕಿ ಹಿರೇಕೆರೂರಿನ ಸಿದ್ದಪ್ಪ ಗುಡದಪ್ಪನವರ (3,597) ಅತಿ ಹೆಚ್ಚು ಮತ ಪಡೆದಿದ್ದಾರೆ.

ಇತರ ನೋಂದಾಯಿತ ಪಕ್ಷಗಳ ಪೈಕಿ ರಾಣೆಬೆನ್ನೂರಿನಲ್ಲಿ ಕೆಪಿಜೆಪಿಯ ಆರ್. ಶಂಕರ್ ಅತ್ಯಧಿಕ (63,910) ಮತ ಪಡೆದಿದ್ದಾರೆ. ಪಕ್ಷೇತರ ಅಭ್ಯರ್ಥಿಗಳ ಪೈಕಿ ಶಿಗ್ಗಾವಿಯ ಸೋಮಣ್ಣ ಬೇವಿನಮರದ (7,203) ಅತ್ಯಧಿಕ ಮತ ಪಡೆದರೆ, ಹಾನಗಲ್‌ನ ಚಂದ್ರಪ್ಪ ಜಾಲಗಾರ (4,263), ರಾಣೆಬೆನ್ನೂರಿನಲ್ಲಿ ರುಕ್ಮಿಣಿ ಸಾವಕಾರ್ (1,226) ಕ್ರಮವಾಗಿ 2 ಮತ್ತು 3ನೇ ಸ್ಥಾನದಲ್ಲಿದ್ದಾರೆ.

ಕಣದಲ್ಲಿದ್ದ ಮಹಿಳಾ ಅಭ್ಯರ್ಥಿಗಳ ಪೈಕಿ ರುಕ್ಮಿಣಿ ಸಾವಕಾರ್ ಅತ್ಯಧಿಕ ಮತ ಪಡೆದಿದ್ದಾರೆ. 64 ಅಭ್ಯರ್ಥಿಗಳ ಪೈಕಿ 6 ಮಹಿಳಾ ಅಭ್ಯರ್ಥಿಗಳು ಕಣದಲ್ಲಿದ್ದು, 3,038 ಮತ ಪಡೆದಿದ್ದಾರೆ. ಇದು ಚಲಾವಣೆಯಾದ ಮತಗಳ ಪೈಕಿ ಶೇ 0.30ರಷ್ಟಾಗಿದೆ.


ಪಕ್ಷಗಳು ಪಡೆದ ಶೇಕಡಾವಾರು ಮತ
ಬಿಜೆಪಿ– 46.49
ಕಾಂಗ್ರೆಸ್–42.76
ಜೆಡಿಎಸ್/ ಬಿಎಸ್ಪಿ–1.02
ಇತರರು–9.73

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT