ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಗಳಿಗೆ ಚುನಾವಣಾ ಕಣ ನಿಚ್ಚಳವಾಗಿದೆ. 13 ಸ್ಥಾನಗಳಿಗೆ ಒಟ್ಟು 28 ಅಭ್ಯರ್ಥಿಗಳು ಸೆಣಸಾಟ ನಡೆಸುವರು.

ಶನಿವಾರ ನಾಮಪತ್ರ ವಾಪಸ್ಗೆ ಅಂತಿಮ ದಿನವಾಗಿತ್ತು. 14 ಮಂದಿ ತಮ್ಮ ಉಮೇದುವಾರಿಕೆ ವಾಪಸ್ ಪಡೆದರು. ಒಟ್ಟು 43 ಮಂದಿ ನಾಮಪತ್ರ ಸಲ್ಲಿಸಿದ್ದು ಈ ಪೈಕಿ ಚೇಳೂರು ಕ್ಷೇತ್ರದ ಎನ್.ವಿ.ಶ್ರೀರಾಮರೆಡ್ಡಿ ನಾಮಪತ್ರ ತಿರಸ್ಕೃತವಾಗಿತ್ತು.

ಮಂಚೇನಹಳ್ಳಿ ಮತ್ತು ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿ ಮಾತ್ರ ಮೂವರು ಅಭ್ಯರ್ಥಿಗಳು ಕಣದಲ್ಲಿ ಇದ್ದಾರೆ. ಉಳಿದ 11 ಕ್ಷೇತ್ರಗಳಲ್ಲಿ ಇಬ್ಬರು ಅಭ್ಯರ್ಥಿಗಳ ನಡುವೆ ಸೆಣಸಾಟವಿದೆ.

ಈ ಮೂಲಕ ಜಿಲ್ಲೆಯಲ್ಲಿ ಬಿಜೆಪಿ, ಜೆಡಿಎಸ್ ಮೈತ್ರಿಕೂಟದ ಎನ್ಡಿಎ ಬೆಂಬಲಿತರು ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ನಡುವೆ ಸೋಲು ಗೆಲುವಿಗೆ ಪೈಪೋಟಿ ನಡೆಯುವುದು ನಿಚ್ಚಳವಾಗಿದೆ.

ತೀವ್ರ ಚರ್ಚೆಗೆ ಕಾರಣವಾಗಿದ್ದ ಚಿಕ್ಕಬಳ್ಳಾಪುರ (ನಂದಿ) ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗುದ್ದ ಶಿವಾನಂದ್ ನಾಮಪತ್ರ ವಾಪಸ್ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್ ಮುಖಂಡರಾದ ಎನ್.ಸಿ.ವೆಂಕಟೇಶ್ ಮತ್ತು ಯಲುವಳ್ಳಿ ಎನ್.ರಮೇಶ್ ನಡುವೆ ಸ್ಪರ್ಧೆ ಇದೆ. ಈ ಮೂಲಕ ಒಂದೇ ಪಕ್ಷದಲ್ಲಿಯೇ ಬಣಗಳಾಗಿ ಸೆಣಸಾಟ ನಡೆಯುವುದು ನಿಚ್ಚಳವಾಗಿದೆ.

ಮಂಚೇನಹಳ್ಳಿ ಕ್ಷೇತ್ರದಲ್ಲಿ ಎನ್ಡಿಎ, ಕಾಂಗ್ರೆಸ್ ಬೆಂಬಲಿತರ ನಡುವೆ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಬೆಂಬಲಿತ ಅಭ್ಯರ್ಥಿ ಕಣದಲ್ಲಿ ಇದ್ದಾರೆ. ಈ ಮೂಲಕ ತ್ರಿಕೋನ ಸ್ಪರ್ಧೆ ಇದೆ. ಚಿಕ್ಕಬಳ್ಳಾಪುರ ಮಹಿಳಾ ಕ್ಷೇತ್ರದಲ್ಲಿಯೂ ತ್ರಿಕೋನ ಸ್ಪರ್ಧೆ ನಡೆದಿದೆ. ಗೌರಿಬಿದನೂರಿನಲ್ಲಿ ಪಕ್ಷೇತರ ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಮತ್ತು ಮಾಜಿ ಸಚಿವ ಎನ್.ಎಚ್.ಶಿವಶಂಕರರೆಡ್ಡಿ ಬೆಂಬಲಿತ ಕಾಂಗ್ರೆಸ್ ಅಭ್ಯರ್ಥಿಗಳು ಹುರಿಯಾಳುಗಳಾಗಿದ್ದಾರೆ.

ಹೀಗೆ ಬೆರಳೆಣಿಕೆಯ ಕ್ಷೇತ್ರಗಳನ್ನು ಹೊರತುಪಡಿಸಿದರೆ ಬಹುತೇಕ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಬೆಂಬಲಿತ ಮತ್ತು ಎನ್ಡಿಎ ಬೆಂಬಲಿತರ ನಡುವೆ ಪೈಪೋಟಿ ನಡೆದಿದೆ.

ಕಣದಲ್ಲಿ ಉಳಿದ ಅಭ್ಯರ್ಥಿಗಳು

ಕ್ಷೇತ್ರ;ಅಭ್ಯರ್ಥಿಗಳು
ಚಿಕ್ಕಬಳ್ಳಾಪುರ;ಎನ್.ಸಿ.ವೆಂಕಟೇಶ್, ಯಲುವಳ್ಳಿ ಎನ್.ರಮೇಶ್
ಪೆರೇಸಂದ್ರ;ಕೆ.ವಿ.ನಾಗರಾಜು,ಕೆ.ಆರ್.ರಾಜಣ್ಣ
ಮಂಚೇನಹಳ್ಳಿ;ಕಾಂತರಾಜು ಜೆ., ಎಚ್.ವಿ.ಶ್ರೀನಾಥ್, ನಾಗರಾಜ್ ಎಂ.
ಗೌರಿಬಿದನೂರು;ವೆಂಕಟರೆಡ್ಡಿ ಡಿ.ಎನ್.,ಜಿ.ಎಲ್.ದಿನೇಶ್
ಗುಡಿಬಂಡೆ;ಆದಿನಾರಾಯಣರೆಡ್ಡಿ, ಬೈರರೆಡ್ಡಿ ಜಿ.ಬಿ.
ಕೈವಾರ;ಕೆ.ಎನ್.ಆವಲಪ್ಪ, ಎಸ್.ಎನ್.ಚಿನ್ನಪ್ಪ
ಚಿಂತಾಮಣಿ;ವೈ.ಬಿ.ಅಶ್ವತ್ಥನಾರಾಯಣ, ಬಿ.ಶ್ರೀನಿವಾಸಪ್ಪ
ಚೇಳೂರು;ಶೇಖರ್ ಬಿ., ಕೆ.ಎನ್.ಕೃಷ್ಣರೆಡ್ಡಿ
ಬಾಗೇಪಲ್ಲಿ;ಪಿ.ವೆಂಕಟರಮಣರೆಡ್ಡಿ, ವಿ.ಮಂಜುನಾಥರೆಡ್ಡಿ
ಶಿಡ್ಲಘಟ್ಟ;ಮುನಿಯಪ್ಪ, ಬಿ.ಕೆ.ಚೊಕ್ಕೇಗೌಡ
ಜಂಗಮಕೋಟೆ;ಎಂ.ರಾಮಯ್ಯ, ಆರ್.ಶ್ರೀನಿವಾಸ್
ಚಿಕ್ಕಬಳ್ಳಾಪುರ ಮಹಿಳೆ;ಸುನಂದಮ್ಮ, ಸುಧಾ, ಮುನಿಲಕ್ಷ್ಮಮ್ಮ ಆರ್.
ಚಿಂತಾಮಣಿ;ಎಂ.ಸುಮ,ರೂಪ

ನಾಮಪತ್ರ ವಾಪಸ್ ಪಡೆದವರು

ಕ್ಷೇತ್ರ;ಅಭ್ಯರ್ಥಿ
ಚಿಕ್ಕಬಳ್ಳಾಪುರ;ಎ.ಶಿವಾನಂದ
ಪೆರೇಸಂದ್ರ;ರಾಜೇಶ್ ಆರ್.,
ಗೌರಿಬಿದನೂರು;ಶ್ರೀನಿವಾಸರೆಡ್ಡಿ,
ಗುಡಿಬಂಡೆ;ವೆಂಕಟೇಶ್ ಜಿ.ಟಿ.,ನಾರಾಯಣಸ್ವಾಮಿ ಬಿ.ಎಸ್.
ಕೈವಾರ;ಎಂ.ದೇವರಾಜರೆಡ್ಡಿ,ಮುನಿನಾರಾಯಣಪ್ಪ
ಚಿಂತಾಮಣಿ;ಪಟೇಲ್ ಅಶ್ವತ್ಥನಾರಾಯಣರೆಡ್ಡಿ
ಬಾಗೇಪಲ್ಲಿ;ಕೃಷ್ಣಪ್ಪ
ಶಿಡ್ಲಘಟ್ಟ;ಪ್ರದೀಪ್ ಕುಮಾರ್ ಎಸ್., ವೆಂಕಟರೆಡ್ಡಿ ಜಿ.ಕೆ., ದೇವರೆಡ್ಡಿ ಪಿ.ವಿ
ಜಂಗಮಕೋಟೆ;ರವಿಕುಮಾರ್ ಬಿ.ಟಿ.
ಚೇಳೂರು;ವೆಂಕಟರವಣಪ್ಪ ಎಚ್.ವಿ

ಆಟೊ ರಿಕ್ಷಾ ದ್ರಾಕ್ಷಿಯ ಚಿಹ್ನೆ ಹೆಚ್ಚು

ಅಭ್ಯರ್ಥಿಗಳಿಗೆ ಚುನಾವಣಾ ಅಧಿಕಾರಿ ಚಿಹ್ನೆಗಳನ್ನು ವಿತರಿಸಿದ್ದಾರೆ. ಆಟೊ ರಿಕ್ಷಾ ಮತ್ತು ದ್ರಾಕ್ಷಿ ಚಿಹ್ನೆ ಪಡೆದಿರುವ ಅಭ್ಯರ್ಥಿಗಳೇ ಹೆಚ್ಚಿದ್ದಾರೆ. ಇದನ್ನು ಹೊರತುಪಡಿಸಿ ಪ್ರೆಷರ್ ಕುಕ್ಕರ್ ಹೊಲಿಗೆ ಯಂತ್ರ ಗ್ಯಾಸ್ ಸಿಲಿಂಡರ್ ಅನ್ನು ಅಭ್ಯರ್ಥಿಗಳು ಚಿಹ್ನೆಯಾಗಿ ಪಡೆದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.