ಚಿಂತಾಮಣಿ: ಆಂಧ್ರಪ್ರದೇಶದಿಂದ ಪ್ರತಿನಿತ್ಯ ಬೆಂಗಳೂರಿಗೆ ಬರುವ ಸಿಮೆಂಟ್ ಅನ್ನು ಲಾರಿ ಚಾಲಕರೇ ಕದ್ದು ಅರ್ಧ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಸಿಮೆಂಟ್ ಅನ್ನು ಒಂದು ಲಾರಿಯಿಂದ ಮತ್ತೊಂದು ಲಾರಿಗೆ ವರ್ಗಾಯಿಸುತ್ತಿರುವ ದೃಶ್ಯಗಳು ಕಡಪ ಹೆದ್ದಾರಿಯ ಚಿನ್ನಸಂದ್ರ ಮತ್ತು ವಿವಿಧ ಕಡೆಗಳಲ್ಲಿ ಕಂಡುಬರುತ್ತಿದೆ ಎನ್ನಲಾಗಿದೆ.

ಆಂಧ್ರಪ್ರದೇಶದಿಂದ ನಿತ್ಯ ಸುಮಾರು ಸಂಖ್ಯೆಯಲ್ಲಿ ಸಿಮೆಂಟ್ ತುಂಬಿದ ಲಾರಿಗಳು ಬೆಂಗಳೂರಿಗೆ ತೆರಳುತ್ತವೆ. ಚಾಲಕರು ಹೆದ್ದಾರಿಯಲ್ಲಿ ಬರುವ ಕೆಲ ಅಂಗಡಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ಸಿಮೆಂಟ್ ಕದ್ದು ಅರ್ಧ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಇದರಿಂದ ಸಿಮೆಂಟ್ ಕಂಪನಿಗೆ ನಷ್ಟವಾಗುತ್ತಿದೆ. ವಿವಿಧ ಕಂಪನಿಗಳ ಸಿಮೆಂಟ್ ಚೀಲಕ್ಕೆ ತುಂಬಿ ಮಾರಾಟ ಮಾಡುತ್ತಿದ್ದಾರೆ ಎಂದು ಹೆಸರು ಹೇಳಲಿಚ್ಚಿಸದ ಸ್ಥಳೀಯರು ಆರೋಪಿಸುತ್ತಿದ್ದಾರೆ.

ಸಂಬಂಧಪಟ್ಟವರು ಸಿಮೆಂಟ್ ಕದ್ದು ಮಾರಾಟ ಮಾಡುತ್ತಿರುವವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.