ಕಸಾಯಿಖಾನೆಗಳಿಗೆ ಕಂಟೈನರ್‌ನಲ್ಲಿ ಹಸುಗಳ ಅಕ್ರಮ ಸಾಗಾಟ, ಲಾರಿ ವಶಕ್ಕೆ

7

ಕಸಾಯಿಖಾನೆಗಳಿಗೆ ಕಂಟೈನರ್‌ನಲ್ಲಿ ಹಸುಗಳ ಅಕ್ರಮ ಸಾಗಾಟ, ಲಾರಿ ವಶಕ್ಕೆ

Published:
Updated:
Deccan Herald

ಚಿಕ್ಕಬಳ್ಳಾಪುರ: ಆಂಧ್ರಪ್ರದೇಶದ ಅನಂತಪುರದಿಂದ ಬೆಂಗಳೂರಿನ ಕಸಾಯಿಖಾನೆಗಳಿಗೆ ಭಾನುವಾರ ಸಂಜೆ ಅಕ್ರಮವಾಗಿ ಹಸುಗಳನ್ನು ಸಾಗಿಸುತ್ತಿದ್ದ ಕಂಟೈನರ್ ಲಾರಿಯನ್ನು ಪ್ರಾಣಿ ಕಲ್ಯಾಣ ಸಂಘದ ಪದಾಧಿಕಾರಿಗಳು ತಡೆದು ಪೊಲೀಸರಿಗೆ ಒಪ್ಪಿಸಿದರು.

ಖಚಿತ ಮಾಹಿತಿ ಮೆರೆಗೆ ಭಾರತೀಯ ಪ್ರಾಣಿ ಕಲ್ಯಾಣ ಸಂಘದ ಪದಾಧಿಕಾರಿಗಳು ತಾಲ್ಲೂಕಿನ ಹಿತಮಾಕಲಹಳ್ಳಿ ಗ್ರಾಮದ ಬಳಿ ಲಾರಿ ತಡೆದು ಪರಿಶೀಲನೆ ನಡೆಸಿದ ವೇಳೆ ಕಂಟೈನರ್ ಒಳಗೆ 30ಕ್ಕೂ ಅಧಿಕ ಹಸುಗಳನ್ನು ಬೇಕಾಬಿಟ್ಟಿಯಾಗಿ ಸಾಗಿಸಲಾಗುತ್ತಿದ್ದದ್ದು ಪತ್ತೆಯಾಗಿತ್ತು.

ಈ ಬಗ್ಗೆ ಲಲನ್ ಎಂಬುವರು ನೀಡಿದ ದೂರಿನ ಮೆರೆಗೆ ಲಾರಿ ಚಾಲಕ ಮತ್ತು ಕ್ಲೀನರ್ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಲಾರಿ ಮತ್ತು ಹಸುಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

  • 0

    Happy
  • 0

    Amused
  • 0

    Sad
  • 0

    Frustrated
  • 0

    Angry

Comments:

0 comments

Write the first review for this !