ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಲದ ಎಟಿಎಂ ಕಾರ್ಡ್ ವಿತರಣೆ

Last Updated 9 ಏಪ್ರಿಲ್ 2021, 2:21 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಗ್ರಾಮೀಣ ಭಾಗದ ಪ್ರತಿ ಹಳ್ಳಿಯಲ್ಲಿನ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅವರ ಬದುಕಿಗೆ ಡಿಸಿಸಿ ಬ್ಯಾಂಕ್ ಆಸರೆಯಾಗಿದೆ’ ಎಂದು ಶಾಸಕ ಎನ್.ಎಚ್. ಶಿವಶಂಕರರೆಡ್ಡಿ ತಿಳಿಸಿದರು.

ತಾಲ್ಲೂಕಿನ ಹುದುಗೂರಿನಲ್ಲಿ ಗುರುವಾರ ಡಿಸಿಸಿ ಬ್ಯಾಂಕ್ ವತಿಯಿಂದ ‌ಆಯೋಜಿಸಿದ್ದ ಸಾಲದ ಎಟಿಎಂ ಕಾರ್ಡ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಕೋವಿಡ್ ‌ಸಂಕಷ್ಟದಲ್ಲಿ ಪ್ರತಿ ಮನೆಯಲ್ಲಿನ ಆದಾಯದ ಮೂಲಗಳು ಸ್ಥಗಿತಗೊಂಡ ಕಾರಣವಾಗಿ ಕುಟುಂಬ ನಿರ್ವಹಣೆ ಕಷ್ಟವಾಗಿದೆ. ಈ ನಿಟ್ಟಿನಲ್ಲಿ ಸ್ವಾವಲಂಬಿ ಬದುಕು ಸಾಗಿಸುವ ಮಹಿಳೆಯರ ಕೈಯನ್ನು ಬಲಪಡಿಸುವ ಉದ್ದೇಶದಿಂದ ಡಿಸಿಸಿ ಬ್ಯಾಂಕ್ ಬಡ್ಡಿ ರಹಿತವಾಗಿ ಸ್ತ್ರೀ ಶಕ್ತಿ ಸಂಘಗಳ ಮೂಲಕ ಸಾಲವನ್ನು ನೀಡುತ್ತಿದ್ದು, ಮಹಿಳೆಯರು ಅದರ ಸದುಪಯೋಗವನ್ನು ಪಡೆದುಕೊಂಡು‌ ಕುಟುಂಬ ನಿರ್ವಹಣೆಯ ಜತೆಗೆ ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗಲಿದೆ’ ಎಂದು ಹೇಳಿದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ‘ಅವಿಭಜಿತ‌ ಜಿಲ್ಲೆಗಳಲ್ಲಿ ಗ್ರಾಮೀಣ ಭಾಗದ ಮಹಿಳೆಯರ ಬದುಕಿಗೆ ಡಿಸಿಸಿ ಬ್ಯಾಂಕ್ ಆಸರೆಯಾಗಿದೆ. ಸಕಾಲದಲ್ಲಿ ‌ಅವರ ಸಂಕಷ್ಟಕ್ಕೆ‌ ಸ್ಪಂದಿಸುವ ಮೂಲಕ ಸಾಕಷ್ಟು ಕುಟುಂಬಗಳಿಗೆ ಬೆನ್ನೆಲುಬಾಗಿದೆ’ ಎಂದು ಹೇಳಿದರು.

ಈ ಸಂದರ್ಭದಲ್ಲಿ ಹುದುಗೂರು ವ್ಯವಸಾಯ ಸೇವಾ ಸಹಕಾರದಲ್ಲಿ ಹುದುಗೂರು ಮತ್ತು ನಕ್ಕಲಹಳ್ಳಿಯ ಒಟ್ಟು 19 ಸ್ತ್ರೀ ಶಕ್ತಿ ಸ್ವಸಹಾಯ ಗುಂಪುಗಳಿಗೆ 88 ಲಕ್ಷ ರೂಗಳ‌ ಸಾಲದ ಎಟಿಎಂ ಕಾರ್ಡ್ ಅನ್ನು
ವಿತರಿಸಲಾಗಿದೆ ಎಂದು ವಿಎಸ್ ಎಸ್ ಎನ್ ಕಾರ್ಯದರ್ಶಿ ಲಕ್ಷ್ಮಿನರಸಮ್ಮ ತಿಳಿಸಿದರು.

ತಾ.ಪಂ ಸದಸ್ಯ ವಿಜಯಮ್ಮ, ವಿಎಸ್ ಎಸ್ ಎನ್ ಅಧ್ಯಕ್ಷರಾದ ಶಿವಪ್ಪರೆಡ್ಡಿ, ಉಪಾಧ್ಯಕ್ಷರಾದ ಮುದ್ದಪ್ಪ, ಕಾರ್ಯದರ್ಶಿ ಎನ್.ಬಿ.ಲಕ್ಷ್ಮಿನರಸಮ್ಮ, ಗ್ರಾ.ಪಂ ಅಧ್ಯಕ್ಷೆ ವಿಜಯಮ್ಮ, ಉಪಾಧ್ಯಕ್ಷರಾದ ಬಾಲಪ್ಪ, ಪಿಡಿಒ ಮಧುಸೂದನ್, ಮುಖಂಡರಾದ ಶಿವಶಂಕರರೆಡ್ಡಿ, ಕುಮಾರ್, ಸಿದ್ದಪ್ಪ, ಸಂಜೀವರಾಯಪ್ಪ, ರಾಮಾಂಜಿನಪ್ಪ, ರಾಮಲಿಂಗಾರೆಡ್ಡಿ, ಶಿವಶಂಕರ್, ನರಸಿಂಹಪ್ಪ, ಅಶ್ವತ್ಥಪ್ಪ, ನಂದೀಶ್, ನರಸಿಂಹಯ್ಯ, ಪಾಪಮ್ಮ, ಮೆಹಬೂಬ್ ಸಾಬ್, ಲಕ್ಷ್ಮಣರೆಡ್ಡಿ, ಗಾಯತ್ರಿ, ಸುರೇಶ್, ನವೀನ್ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT